/newsfirstlive-kannada/media/media_files/2025/09/21/ravi-shankar-guruji-11-2025-09-21-10-06-10.jpg)
/newsfirstlive-kannada/media/media_files/2025/09/21/united-nations-2025-09-21-10-08-16.jpg)
ಅಂತರರಾಷ್ಟ್ರೀಯ ಶಾಂತಿ ದಿನವನ್ನು 1981ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಸ್ಥಾಪಿಸಲಾಯಿತು. 1982 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. 2001ರಲ್ಲಿ, ವಿಶ್ವಸಂಸ್ಥೆಯು ಈ ದಿನವನ್ನು ಹಿಂಸೆಯನ್ನು ತಡೆಯುವ ಮತ್ತು ಕದನ ವಿರಾಮದ ದಿನವಾಗಿ ಗೊತ್ತುಪಡಿಸಲು ಸರ್ವಾನುಮತದಿಂದ ಮತ ಹಾಕಿತು.
/newsfirstlive-kannada/media/media_files/2025/09/21/ravi-shankar-guruji-8-2025-09-21-10-06-43.jpg)
ಪ್ರಾಚೀನ ಜ್ಞಾನದಿಂದ ಹಿಡಿದು ಆಧುನಿಕ ಶಾಂತಿ ನಿರ್ಮಾಣದವರೆಗೆ, ಗುರುದೇವ ಶ್ರೀ ಶ್ರೀ ರವಿ ಶಂಕರ್ ಕಳೆದ ನಾಲ್ಕು ದಶಕಗಳಿಂದ ಹಿಂಸೆ ಮತ್ತು ಸಂಘರ್ಷಗಳಿಂದ ಉಂಟಾದ ಗಾಯಗಳನ್ನು ಗುಣಪಡಿಸಲು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಜೀವನಕ್ಕೆ ಅಳವಡಿಸಿಕೊಳ್ಳಬೇಕಾಗಿರುವ ಕೆಲವು ಸೂತ್ರಗಳನ್ನ ಶ್ರೀ ಶ್ರೀ ರವಿ ಶಂಕರ್ ಗುರೂಜಿ ನೀಡಿದ್ದಾರೆ.
/newsfirstlive-kannada/media/media_files/2025/09/21/ravi-shankar-guruji-2-2025-09-21-10-09-10.jpg)
ಶಾಂತಿಯಲ್ಲಿ ಶಕ್ತಿ ಇದೆ, ಪ್ರೇಮದಲ್ಲಿ ಶಕ್ತಿ ಇದೆ; ಬಂದೂಕುಗಳಿಂದ ಗೆಲ್ಲಲಾಗದದ್ದನ್ನು ಪ್ರೇಮದಿಂದ ಗೆಲ್ಲಬಹುದು -ಗುರುದೇವ ಶ್ರೀ ಶ್ರೀ ರವಿ ಶಂಕರ್
/newsfirstlive-kannada/media/media_files/2025/09/21/ravi-shankar-guruji-3-2025-09-21-10-09-39.jpg)
ಒಬ್ಬ ವ್ಯಕ್ತಿ ಅಹಿಂಸೆಯಲ್ಲಿ ದೃಢವಾಗಿ ನೆಲೆಸಿದಾಗ, ಅವರ ಉಪಸ್ಥಿತಿಯಲ್ಲಿ, ಹಿಂಸೆ ತಾನಾಗಿಯೇ ಅಂತ್ಯಗೊಳ್ಳುತ್ತದೆ-ಗುರುದೇವ ಶ್ರೀ ಶ್ರೀ ರವಿ ಶಂಕರ್
/newsfirstlive-kannada/media/media_files/2025/09/21/ravi-shankar-guruji-4-2025-09-21-10-10-02.jpg)
ನ್ಯಾಯ ಮತ್ತು ಶಾಂತಿಯ ನಡುವೆ ಸಂಘರ್ಷವಾದಾಗ, ಅವೆರಡನ್ನೂ ಸಮನ್ವಯಗೊಳಿಸುವುದು ಅತ್ಯಂತ ಕಷ್ಟದ ಕೆಲಸ. ಅದನ್ನು ಸಾಧಿಸಲು ಆಧ್ಯಾತ್ಮಿಕ ಆಯಾಮದಿಂದ ಮಾತ್ರವೇ ಸಾಧ್ಯ — ಗುರುದೇವ ಶ್ರೀ ಶ್ರೀ ರವಿ ಶಂಕರ್
/newsfirstlive-kannada/media/media_files/2025/09/21/ravi-shankar-guruji-5-2025-09-21-10-10-25.jpg)
ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರಿಂದ ಪರಿಚಯಿಸಲ್ಪಟ್ಟ ಪ್ರಬಲ ಉಸಿರಾಟ ತಂತ್ರವಾದ ಸುದರ್ಶನ ಕ್ರಿಯಾ ಮತ್ತು ಧ್ಯಾನ ಕಾರ್ಯಕ್ರಮಗಳ ಮೂಲಕ 8,000 ಯುಕ್ರೇನಿಯನ್ ಸೈನಿಕರು ಮತ್ತು ನಾಗರಿಕರು ಶಾಂತಿ ಪಡೆದಿದ್ದಾರೆ. ಇವರಲ್ಲಿ ಅನೇಕರು ಯುದ್ಧಪೀಡಿತ ಸಮುದಾಯಗಳಿಗೆ ಈ ಕಾರ್ಯಕ್ರಮಗಳನ್ನು ಕಲಿಸಲು ನಿರ್ಧರಿಸಿದ್ದಾರೆ.
/newsfirstlive-kannada/media/media_files/2025/09/21/ravi-shankar-guruji-6-2025-09-21-10-10-49.jpg)
ಗುರುದೇವರು ಕೊಲಂಬಿಯಾದ ಸರ್ಕಾರ ಮತ್ತು ಅತಿದೊಡ್ಡ ಎಡಪಂಥೀಯ ಗೆರಿಲ್ಲಾ ಚಳುವಳಿಯಾದ FARC ನಡುವಿನ 53 ವರ್ಷಗಳ ರಕ್ತಪಾತಯುತ ಸಂಘರ್ಷವನ್ನು ಶಮನಗೊಳಿಸಲು ನೆರವಾದರು. ಅವರ ಹಸ್ತಕ್ಷೇಪವು 2 ಲಕ್ಷಕ್ಕೂ ಹೆಚ್ಚು ಪ್ರಾಣಗಳನ್ನು ಬಲಿ ಪಡೆದಿದ್ದ ಈ ಸಂಘರ್ಷದ ಅಂತ್ಯಕ್ಕೆ ಕಾರಣವಾಯಿತು ಮತ್ತು ಕೊಲಂಬಿಯಾ ಸರ್ಕಾರ ಹಾಗೂ FARC ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಕಾರಣವಾಯಿತು.
/newsfirstlive-kannada/media/media_files/2025/09/21/ravi-shankar-guruji-10-2025-09-21-10-11-09.jpg)
ನಂತರ, FARC ನಾಯಕರು, ಗೆರಿಲ್ಲಾ ಗುಂಪುಗಳು ಅಪಹರಣ ಮಾಡಿ ಕೊಲ್ಲಲ್ಪಟ್ಟವರ ಕುಟುಂಬಗಳ ಮುಂದೆ "ಪ್ರಾಮಾಣಿಕವಾಗಿ, ನಮ್ರತೆಯಿಂದ, ನಾವು ನಮ್ಮ ಜವಾಬ್ದಾರಿಯನ್ನು ಸಾರ್ವಜನಿಕವಾಗಿ ಗುರುತಿಸಲು ಮತ್ತು ಕ್ಷಮೆ ಕೇಳಲು ಬಯಸುತ್ತೇವೆ" ಎಂದು ಕ್ಷಮೆ ಕೇಳಿದರು. FARC ನಿಂದ ಕೊಲ್ಲಲ್ಪಟ್ಟ ಕಾಂಗ್ರೆಸ್ ಸದಸ್ಯರ ಪತ್ನಿಯಾದ ಫಾಬಿಯೋಲಾ ಪರ್ಡೋಮೋ ಅವರು, ಕ್ಷಮೆಯು ನನ್ನನ್ನು ಮುಕ್ತಗೊಳಿಸಿದೆ, ಶುದ್ಧಗೊಳಿಸಿದೆ, ಮತ್ತು ಹೊಸ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧಗೊಳಿಸಿದೆ ಎಂದು ಮನಮುಟ್ಟುವ ಸಾಕ್ಷ್ಯವಿತ್ತರು. ಸಭೆಯ ಅಂತ್ಯದಲ್ಲಿ ಬಾಧಿತ ಕುಟುಂಬಗಳು ಮತ್ತು FARC ನಾಯಕರು ಕೈ ಹಿಡಿದು ಪ್ರಾರ್ಥನೆ ಮಾಡಿದರು.
/newsfirstlive-kannada/media/media_files/2025/09/21/ravi-shankar-guruji-12-2025-09-21-10-11-26.jpg)
ಕೊಲಂಬಿಯಾದಿಂದ ಉಕ್ರೇನ್ ತನಕ, ಕೊಸೋವೊದಿಂದ ಕಾಶ್ಮೀರದ ತನಕ, ಭಾರತದ ಈಶಾನ್ಯ ಭಾಗ, ಜಾರ್ಖಂಡ್, ಬಿಹಾರ್ ನಿಂದ ಐವರಿ ಕೋಸ್ಟ್ ತನಕ- ಗುರುದೇವರು, ಕಾರಾಗೃಹಗಳೊಳಗೆ ಇರಲಿ ಅಥವಾ ಉಗ್ರವಾದದ ಕೇಂದ್ರಗಳಲ್ಲಿರಲಿ ಅಥವಾ ಆಳವಾಗಿ ಉದ್ವಿಗ್ನಗೊಂಡ ಸಮುದಾಯಗಳಲ್ಲಿರಲಿ, ಗುರುದೇವರು ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಸಮುದಾಯಗಳನ್ನು ಒಟ್ಟುಗೂಡಿಸಿದ್ದಾರೆ. ಸಮುದಾಯಗಳನ್ನು ಸೇರ್ಪಡಿಸಿ, ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆಗೆ ಜೀವ ತುಂಬಿದ್ದಾರೆ. ಅವರ ಶಕ್ತಿಶಾಲಿ ಉಸಿರಾಟ ಆಧಾರಿತ ಒತ್ತಡ ಮತ್ತು ಆಘಾತ ಉಪಶಮನ ವಿಧಾನಗಳು (ಸುದರ್ಶನ ಕ್ರಿಯಾ) ಮತ್ತು ಸಂವಾದ-ಸಮಾಧಾನ ಕಾರ್ಯಗಳು ವ್ಯಕ್ತಿಗಳಿಗೆ ಆಂತರಿಕ ಶಾಂತಿಯನ್ನು ತಂದುಕೊಟ್ಟಿವೆ; ಇದು ತಿರುಗಿ ಸಮುದಾಯಗಳಲ್ಲಿ ಶಾಂತಿಯನ್ನು ಪ್ರೇರೇಪಿಸುತ್ತದೆ.