/newsfirstlive-kannada/media/media_files/2025/11/19/upasana-konidela-contraversial-statement-2025-11-19-16-41-48.jpg)
ರಾಮಚರಣ್ ಪತ್ನಿ ಉಪಾಸನಾ ಕೊನಿಡೆಲಾ ಹೇಳಿಕೆಯ ಬಗ್ಗೆ ಚರ್ಚೆ
ಮಹಿಳಾ ಉದ್ಯಮಿ ಹಾಗೂ ನಟ ರಾಮಚರಣ್ ಪತ್ನಿ ಉಪಾಸನಾ ಕೊನಿಡೆಲಾ ಮೊನ್ನೆ ಐಐಟಿ ಹೈದರಾಬಾದ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಉಪಾಸನಾ, ನಟ ರಾಮಚರಣ್ ಪತ್ನಿ. ಮೆಗಾಸ್ಟಾರ್ ಚಿರಂಜೀವಿ ಸೊಸೆ. ಜೊತೆಗೆ ಉಪಾಸನಾ ಅಪೋಲೋ ಆಸ್ಪತ್ರೆಯ ಸಂಸ್ಥಾಪಕ ಪ್ರತಾಪ್ ರೆಡ್ಡಿ ಅವರ ಮೊಮ್ಮಗಳು. ಚಿನ್ನದ ಚಮಚಾವನ್ನು ಬಾಯಿಯಲ್ಲಿ ಇಟ್ಟಕೊಂಡು ಹುಟ್ಟಿದವರು.
ಆದರೇ, ಉಪಾಸನಾ ಮಾತುಗಳು ಈಗ ಇಂಟರ್ ನೆಟ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಯುವಜನತೆ ಮದುವೆಯಾಗಿ ಮಕ್ಕಳನ್ನು ಪಡೆಯಬೇಕೇ ಮುಂದೂಡಬೇಕೇ ಎಂಬ ಬಗ್ಗೆ ಚರ್ಚೆಗೆ ಉಪಾಸನಾ ಮಾತುಗಳು ಕಾರಣವಾಗಿವೆ.
ಇಷ್ಟಕ್ಕೂ ಉಪಾಸನಾ ಆಡಿದ ಮಾತುಗಳು ಏನೆಂದರೇ, ನಿಮ್ಮಲ್ಲಿ ಎಷ್ಟು ಮಂದಿ ಮದುವೆಯಾಗಲು ಇಷ್ಟಪಡುತ್ತೀರಿ ಎಂದು ಕೇಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹುಡುಗರು ಮದುವೆಯಾಗಲು ರೆಡಿಯಾಗಿದ್ದೇವೆ ಎಂದು ಕೈ ಎತ್ತಿದ್ದಾರೆ. ಆದರೇ, ಹುಡುಗಿಯರು ಕೇರಿಯಲ್ ಕಡೆಗೆ ಹೆಚ್ಚು ಪೋಕಸ್ ಆಗಿದ್ದರು. ಇದು ಹೊಸ ಪ್ರಗತಿದಾಯಕ ಭಾರತ ಎಂದು ಉಪಾಸನಾ ಹೇಳಿದ್ದಾರೆ. ನಿಮ್ಮ ಗುರಿಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಪಾತ್ರವನ್ನು ನೀವು ನಿಭಾಯಿಸಿ. ನಂತರ ನಿಮ್ಮನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಟ್ವೀಟರ್ ನಲ್ಲೂ ಉಪಾಸನಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಾವು ಮಾತನಾಡಿದ ವಿಡಿಯೋವನ್ನು ಟ್ವೀಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.
I truly had an amazing time interacting with the students at @IITHyderabad
— Upasana Konidela (@upasanakonidela) November 17, 2025
When I asked, “How many of you want to get married?” — more men raised their hands, than the women!
The women seemed far more career-focused !!!!
This is the new - Progressive India. 🇮🇳
Set your vision.… pic.twitter.com/6HzlLjSMvX
ಉಪಾಸನಾ ಮಾತುಗಳು ಹಾಗೂ ಟ್ವೀಟ್ ಮೂಲಕ ಹೆಣ್ಣು ಮಕ್ಕಳು ಮದುವೆಗಿಂತ ಕೇರಿಯರ್ ಕಡೆಗೆ ಹೆಚ್ಚು ಗಮನ ಕೊಡಬೇಕಂದು ಹೇಳಿದಂತಿದೆ. ಹೀಗಾಗಿ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಉಪಾಸನಾ ಮಾತುಗಳನ್ನು ಒಪ್ಪಲ್ಲ ಎಂದು ಕೆಲ ಸಾಧಕ ಮಹಿಳೆಯರು ಟ್ವೀಟ್ ಮಾಡಿ ತಮ್ಮ ವಿರೋಧ, ಅಸಮ್ಮತಿಯನ್ನು ಉಪಾಸನಾ ಮಾತಿಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಮಹಿಳೆಯರ ದೊಡ್ಡ ಇನ್ಸೂರೆನ್ಸ್ ಅಂದರೇ, ಅಂಡಾಣುವನ್ನು ಸೇವ್ ಮಾಡುವುದು. ಏಕೆಂದರೇ, ಇದರಿಂದ ಯುವತಿಯರು ಯಾವಾಗ ಮದುವೆಯಾಗಬೇಕು, ಯಾವಾಗ ಮಕ್ಕಳನ್ನು ಪಡೆಯಬೇಕು ಅನ್ನೋದನ್ನು ನಿಮ್ಮ ಟರ್ಮ್ಸ್ ಗೆ ಅನುಗುಣವಾಗಿ, ನೀವು ಆರ್ಥಿಕವಾಗಿ ಸ್ವತಂತ್ರರಾದಾಗ ತೀರ್ಮಾನ ಕೈಗೊಳ್ಳಬಹುದು. ಇಂದು ನಾನು ನನ್ನ ಕಾಲ ಮೇಲೆ ನಿಂತಿದ್ದೇನೆ. ನಾನು ಬದುಕಲು, ನಾನು ದುಡಿಯುತ್ತಿದ್ದೇನೆ ಎಂದು ಉಪಾಸನಾ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಸಂಪತ್ತು ಅನ್ನು ಗಳಿಸಿ, ಆರೋಗ್ಯವನ್ನು ಗಳಿಸಿ ಮತ್ತು ಸಂಬಂಧಗಳನ್ನು ಗಳಿಸಿ ಎಂದು ಕ್ಯಾಪ್ಷನ್ ನೀಡಿ ವಿಡಿಯೋ ಟ್ವೀಟ್ ಮಾಡಿದ್ದಾರೆ.
ಉಪಾಸನಾ ಅವರ ಈ ಮಾತುಗಳಿಗೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಪಿಟಲಿಸಂ ಲವ್ಸ್ ಫೆಮಿನಿಸಂ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಉಪಾಸನಾ ಹಾಗೂ ಅವರ ತಾತಾ ಪ್ರತಾಪ್ ರೆಡ್ಡಿ ಬಂಡವಾಳಷಾಹಿಗಳು ಫೆಮಿನಿಸಂ ಅನ್ನು ಇಷ್ಟಪಡುತ್ತಾರೆ. ಮಹಿಳೆಯರು ತಮ್ಮ ಅಂಡಾಣು ಸೇವ್ ಮಾಡುವುದೆಂದರೇ, ಮಕ್ಕಳನ್ನು ಪಡೆಯೋದನ್ನು ಮುಂದೂಡುವುದು, ಇದಕ್ಕೆ ಅಪೋಲೋ ಆಸ್ಪತ್ರೆಯ ನೆರವು ಪಡೆಯಬೇಕಾಗುತ್ತೆ. ಹೀಗಾಗಿ ಇದರ ಹಿಂದೆ ಅಪೋಲೋ ಫರ್ಟಿಲಿಟಿ ಸೆಂಟರ್ ಅನ್ನು ಪ್ರಮೋಟ್ ಮಾಡುವ ಉದ್ದೇಶ ಇದೆ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಮದುವೆಯಾಗಿಯೂ ಆರ್ಥಿಕವಾಗಿ ಸ್ವತಂತ್ರರಾಗಬಹುದು. ಅದಕ್ಕಾಗಿ ಫರ್ಟಿಲಿಟಿ ಸೆಂಟರ್ ಗಳಿಗೆ ಹೋಗುವ ಅಗತ್ಯ ಇಲ್ಲ. ಮಕ್ಕಳನ್ನು ಪಡೆದು ಕೂಡ ಸ್ವತಂತ್ರರಾಗಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಉಪಾಸನಾ ಹೇಳಿಕೆಯು ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇನ್ನೂ ಮಹಿಳಾ ವೈದ್ಯೆಯೊಬ್ಬರು ಅಂಡಾಣುವನ್ನು ಫ್ರೀಜ್ ಮಾಡುವುದು ದುಬಾರಿ. ಅಂಡಾಣು ಫ್ರೀಜ್ ಮಾಡುವುದರಿಂದ ಗರ್ಭಿಣಿಯಾಗುವ ಗ್ಯಾರಂಟಿ ಇಲ್ಲ ಎಂದು ಕೂಡ ಹೇಳಿದ್ದಾರೆ. ಕೋಟಿಗಟ್ಟಲೇ ಹಣ ಇದ್ದಾಗ ಮಾತ್ರ ಮಹಿಳೆಯರು ಅಂಡಾಣುವನ್ನು ಫ್ರೀಜ್ ಮಾಡಬಹುದು ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/11/19/upasana-konidela-contraversial-statement-1-2025-11-19-16-46-24.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us