/newsfirstlive-kannada/media/media_files/2025/08/21/woman-drying-clothes-indoors-2025-08-21-22-21-20.jpg)
ಮಳೆ ಎಂದರೆ ಅಷ್ಟಾಗಿ ಯಾರಿಗೂ ಇಷ್ಟ ಆಗೋದಿಲ್ಲ. ಮಳೆ ಬಂದರೆ ವಾತಾವರಣವೇ ಬೇರೆಯಾಗಿರುತ್ತೆ. ಜಿಟಿ ಜಿಟಿ ಮಳೆಯಿಂದ ಜನರು ಆಚೆ ಬರೋದಕ್ಕೂ ಒದ್ದಾಡುತ್ತಾರೆ.
ಇದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳು ಒಣಗಿಸುವುದೇ ದೊಡ್ಡ ತಲೆನೋವಾಗಿ ಬಿಡುತ್ತೆ. ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸುವುದರಲ್ಲಿ ಬಹಳಷ್ಟು ಸಮಸ್ಯೆಗಳಿವೆ. ನಿರಂತರವಾಗಿ ಮಳೆ ಬಂದಾಗ, ಬಟ್ಟೆಗಳು ಹಲವು ದಿನಗಳವರೆಗೆ ಒಣಗುವುದಿಲ್ಲ. ಅಲ್ಲದೇ ಒಟ್ಟೆಗಳಲ್ಲಿ ವಾಸನೆ ಬರುವುದು, ಅದನ್ನು ಧರಿಸಿದರೆ ಕಿರಿಕಿರು ಉಂಟಾಗುವ ಪರಿಸ್ಥಿತಿಗಳು ಎದುರಾಗುತ್ತವೆ.
ಒದ್ದೆಯಾದ ಬಟ್ಟೆಗಳನ್ನು ಮನೆಯಲ್ಲಿಯೇ ಸುಲಭವಾಗಿ ಒಣಗಿಸಲು ಈ 5 ಟಿಪ್ಸ್ ಅನ್ನು ಫಾಲೋ ಮಾಡಿ ಮಾಡಿ ಸಾಕು.
1. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಆದ್ದರಿಂದ ಹೊರಗಿನಿಂದ ಗಾಳಿ ಬರುವ ಸ್ಥಳದಲ್ಲಿ ಬಟ್ಟೆಗಳನ್ನು ಒಣಗಿಸಲು ಒಂದು ಸ್ಥಳವನ್ನು ವ್ಯವಸ್ಥೆ ಮಾಡಿಕೊಳ್ಳಿ.
2. ಬಟ್ಟೆಗಳನ್ನು ದೊಡ್ಡ ಹಗ್ಗದ ಮೇಲೆ ಹಾಕುತ್ತಾ ಹೋಗಿ. ನೀವು ಬಟ್ಟೆಗಳನ್ನು ಒಟ್ಟಿಗೆ ಹಾಕಿಬಿಟ್ಟರೇ, ಅವು ಒಣಗಲು ಬಹಳ ಸಮಯ ತೆಗೆದುಕೊಳ್ಳಬಹುದು.
3. ಬಟ್ಟೆಗಳನ್ನು ತೊಳೆದ ನಂತರ, ಹೆಚ್ಚುವರಿ ನೀರು ಹೊರಬರುವಂತೆ ಚೆನ್ನಾಗಿ ಹಿಂಡಿ, ಇದು ನಿಮ್ಮ ಬಟ್ಟೆಗಳನ್ನು ಬೇಗನೆ ಒಣಗಿಸುತ್ತದೆ.
4. ನೀವು ಬಟ್ಟೆಗಳನ್ನು ವಾಷಿಂಗ್ ಮಿಷನ್ನಲ್ಲಿ ಒಗೆದರೆ, ಅವು ಹೆಚ್ಚಿನ ಮಟ್ಟಿಗೆ ಒಣಗಿ ಹೊರಬರುತ್ತವೆ, ಆದರೆ ನೀವು ಕೈಯಿಂದ ಬಟ್ಟೆಗಳನ್ನು ಒಗೆಯುತ್ತಿದ್ದರೆ, ಅವುಗಳನ್ನು ಹಿಂಡಿದ ನಂತರ, ಹ್ಯಾಂಡ್ ಡ್ರೈಯರ್‌ನಿಂದ ಒಣಗಿಸಿ. ಇದು ಬಹಳಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ಅವು ಬೇಗನೆ ಒಣಗುತ್ತವೆ.
5. ನೀವು ಬಟ್ಟೆಗಳನ್ನು ಹಗ್ಗದ ಮೇಲೆ ಹಾಕಿ, ಬಳಿಕ ಕೋಣೆಯಲ್ಲಿ ರಾತ್ರಿಯಿಡೀ ಫ್ಯಾನ್ ಆನ್ ಮಾಡಿ. ಇದು ನಿಮ್ಮ ಬಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಣಗಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ