ಏನಿದು 6-7 ಡೇಟಿಂಗ್..? ಇಲ್ಲಿ ಹೊಸ ರೂಲ್ಸ್​! ಟ್ರೆಂಡ್ ಸೃಷ್ಟಿಸಿದ Gen Z ಹುಡುಗರು..!

ಇದು ಕೇವಲ ಸಮಯಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಇದು ಸುರಕ್ಷತೆ, ನೆಮ್ಮದಿ ಮತ್ತು ಸ್ಥಿರತೆಗೆ (Stability) ಸಂಬಂಧಿಸಿದ್ದು. ಸರಳವಾಗಿ ಹೇಳಬೇಕೆಂದರೆ, ಡೇಟಿಂಗ್‌ಗೆ ಹೋಗುವ ಜೋಡಿಗಳು ಸಂಜೆ 6 ಅಥವಾ 7 ಗಂಟೆಯ ನಡುವೆ ಭೇಟಿಯಾಗುವುದು

author-image
Ganesh Kerekuli
ಡೇಟಿಂಗ್ ಆ್ಯಪ್ ಬಂಬಲ್ ಬಳಸೋ ಮುನ್ನ ಎಚ್ಚರ.. ಪುರುಷರು ಓದಲೇಬೇಕಾದ ಸ್ಟೋರಿ ಇದು!
Advertisment

ಇಂದಿನ ಕಾಲದ ಡೇಟಿಂಗ್ ಆಪ್‌ಗಳು, ಲೇಟ್ ನೈಟ್ ಪಾರ್ಟಿಗಳು ಮತ್ತು ‘ಸಿಚುಯೇಷನ್‌ಶಿಪ್’ (Situationship) ಗಳಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. ಈಗಿನ ಯುವಜನತೆ (Gen Z) ಡೇಟಿಂಗ್ ಲೋಕದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟುಹಾಕಿದ್ದಾರೆ. ಅದೇ 6-7 ಡೇಟಿಂಗ್! 

ಏನಿದು 6-7 ಡೇಟಿಂಗ್ ರೂಲ್..?

ಇದು ಕೇವಲ ಸಮಯಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಇದು ಸುರಕ್ಷತೆ, ನೆಮ್ಮದಿ ಮತ್ತು ಸ್ಥಿರತೆಗೆ (Stability) ಸಂಬಂಧಿಸಿದ್ದು. ಸರಳವಾಗಿ ಹೇಳಬೇಕೆಂದರೆ, ಡೇಟಿಂಗ್‌ಗೆ ಹೋಗುವ ಜೋಡಿಗಳು ಸಂಜೆ 6 ಅಥವಾ 7 ಗಂಟೆಯ ನಡುವೆ ಭೇಟಿಯಾಗುವುದು. ತಡರಾತ್ರಿಯ ಡಿನ್ನರ್ ಅಥವಾ ಪಾರ್ಟಿಗಳ ಬದಲಾಗಿ, ಕೆಲಸ ಮುಗಿದ ತಕ್ಷಣ ಅಥವಾ ಸಂಜೆಯ ವೇಳೆ ಭೇಟಿಯಾಗಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಮೀಸಲಿಡುವುದಾಗಿದೆ.

dating app fir(1)

ಯಾಕೆ ಈ ಟ್ರೆಂಡ್ ಫೇಮಸ್ ಆಗುತ್ತಿದೆ?

ಸುರಕ್ಷತೆಗೆ ಮೊದಲ ಆದ್ಯತೆ: ಲೇಟ್ ನೈಟ್ ಡೇಟಿಂಗ್‌ಗೆ ಹೋಲಿಸಿದರೆ ಸಂಜೆ 6 ಅಥವಾ 7 ಗಂಟೆಗೆ ಭೇಟಿಯಾಗುವುದು ಹೆಚ್ಚು ಸುರಕ್ಷಿತ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಓಡಾಟವಿರುತ್ತದೆ. ಅಪರಿಚಿತರೊಂದಿಗೆ ಮೊದಲ ಬಾರಿ ಡೇಟ್ ಮಾಡುವಾಗ ಈ ಸಮಯ ಅತ್ಯಂತ ಸೂಕ್ತ ಎಂದು ತಜ್ಞರು ಮತ್ತು ಯುವಜನತೆ ಅಭಿಪ್ರಾಯಪಟ್ಟಿದ್ದಾರೆ.

ನಿದ್ರೆ ಮುಖ್ಯ ಗುರೂ! (Prioritising Sleep): ಜೆನ್ ಜಿ ಪೀಳಿಗೆಗೆ ತಮ್ಮ ಕೆಲಸ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ನಿದ್ರೆಯೂ ಮುಖ್ಯ. ರಾತ್ರಿ 10-11 ಗಂಟೆಯವರೆಗೂ ಪಾರ್ಟಿ ಮಾಡಿ, ಮರುದಿನ ಬೆಳಿಗ್ಗೆ ಎದ್ದು ಆಫೀಸ್‌ಗೆ ಹೋಗಿ ಒದ್ದಾಡುವ ಬದಲು, ಸಂಜೆಯೇ ಭೇಟಿಯಾಗಿ ಬೇಗನೆ ಮನೆ ಸೇರುವುದು ಈ ಟ್ರೆಂಡ್‌ನ ಉದ್ದೇಶ. ಇದನ್ನು 'ಬೆಡ್‌ಟೈಮ್ ಬೌಂಡರೀಸ್' (Bedtime Boundaries) ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: ಕುಗ್ಗದ ಸ್ಮೃತಿ, ಗೆದ್ದ ಆರ್‌ಸಿಬಿ ಎಂದ ಶ್ರೇಯಾಂಕ; ವೈಯಕ್ತಿಕ ನೋವಿನ ನಡ್ವೆಯೂ ಕಪ್ ಗೆದ್ದ ಮಂದಾನ!

‘‘ಸರ್,​ ನನ್ನ ಮೊದಲ ಡೇಟಿಂಗ್​ಗೆ ಹಣದ ಸಹಾಯ ಮಾಡಿ​’’.. ಬಿಜೆಪಿ ನಾಯಕನಿಗೆ ಮನವಿ ಮಾಡಿದ ಪ್ರೇಮಿ!

ಕುಡಿತಕ್ಕಿಂತ ಮಾತುಕತೆ ಮುಖ್ಯ: ತಡರಾತ್ರಿಯ ಡೇಟಿಂಗ್‌ಗಳಲ್ಲಿ ಹೆಚ್ಚಾಗಿ ಮದ್ಯಪಾನ (Alcohol) ಸೇರಿರುತ್ತದೆ. ಇದರಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಬಹುದು. ಆದರೆ ಸಂಜೆ 6:7ರ ಡೇಟಿಂಗ್‌ನಲ್ಲಿ ಹೆಚ್ಚಾಗಿ ಕಾಫಿ ಅಥವಾ ಲಘು ಉಪಹಾರ ಇರುತ್ತದೆ. ಇಲ್ಲಿ ಮದ್ಯಪಾನಕ್ಕಿಂತ ಪರಸ್ಪರರ ಮಾತುಕತೆ ಮತ್ತು ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಅವಕಾಶ ಸಿಗುತ್ತದೆ.

ಸಮಯದ ಉಳಿತಾಯ: ಸಂಜೆ 6 ಕ್ಕೆ ಭೇಟಿಯಾದಾಗ, ಒಂದು ವೇಳೆ ಎದುರಿಗಿರುವ ವ್ಯಕ್ತಿ ಇಷ್ಟವಾಗದಿದ್ದರೆ, ಬೇಗನೆ ಅಲ್ಲಿಂದ ಹೊರಡಲು ಕಾರಣ ಸಿಗುತ್ತದೆ. "ನಾಳೆ ಬೆಳಿಗ್ಗೆ ಕೆಲಸವಿದೆ" ಎಂದು ಹೇಳಿ ಎಸ್ಕೇಪ್ ಆಗಬಹುದು. ಅದೇ ವ್ಯಕ್ತಿ ಇಷ್ಟವಾದರೆ, ಸಂಜೆಯನ್ನು ಸುಂದರವಾಗಿ ಕಳೆಯಬಹುದು.

ತಜ್ಞರು ಏನಂತಾರೆ?

ಈ '6:7 ಡೇಟಿಂಗ್' ಪದ್ಧತಿಯು ಆರೋಗ್ಯಕರ ಸಂಬಂಧಗಳಿಗೆ ನಾಂದಿ ಹಾಡಲಿದೆ ಎಂದು ಸಂಬಂಧ ತಜ್ಞರು ಹೇಳುತ್ತಾರೆ. ಇದು ಡೇಟಿಂಗ್‌ಗೆ ಒಂದು ಶಿಸ್ತು ಮತ್ತು ಗಂಭೀರತೆಯನ್ನು ತಂದುಕೊಡುತ್ತದೆ. ಕೇವಲ ಮೋಜಿಗಾಗಿ ಸುತ್ತಾಡುವ ಬದಲು, ನಿಜವಾದ ಸಂಗಾತಿಯನ್ನು ಹುಡುಕಲು ಇದು ಸಹಕಾರಿ. ಒಟ್ಟಿನಲ್ಲಿ ಲೇಟ್ ನೈಟ್ ಪಾರ್ಟಿಗಳ ಅಬ್ಬರಕ್ಕಿಂತ, ಸಂಜೆಯ ಪ್ರಶಾಂತ ವಾತಾವರಣದಲ್ಲಿ ಮನಸ್ಸು ಬಿಚ್ಚಿ ಮಾತನಾಡುವುದೇ ಲೇಟೆಸ್ಟ್ ಟ್ರೆಂಡ್!

ಇದನ್ನೂ ಓದಿ: ಬೆಟ್ಟಿಂಗ್, ಗೇಮಿಂಗ್‌ ಆ್ಯಪ್ ಬಳಕೆಯ ವಿರುದ್ಧ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ- ಪರೀಕ್ಷಾ ಪೇ ಚರ್ಚೆಯಲ್ಲಿ ಮೋದಿ ಮಾತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dating Advice 6:7 Dating Trend Gen Z Dating
Advertisment