/newsfirstlive-kannada/media/media_files/2025/09/03/akriti-agarwal-2025-09-03-15-58-56.jpg)
/newsfirstlive-kannada/media/media_files/2025/09/03/prithvi-shaw-akriti-agarwal-2025-09-03-15-31-34.jpg)
ಕ್ರಿಕೆಟಿಗ ಪೃಥ್ವಿ ಶಾ ಬಾಳಲ್ಲಿ 3ನೇ ಹುಡುಗಿಯ ಎಂಟ್ರಿಯಾಗಿದೆ. ನಿಧಿ ತಪಾಡಿಯಾ ದೂರಾದ ಬಳಿಕ ಪೃಥ್ವಿ ಲೈಫ್ಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಆಕೆಯ ಹೆಸರೇ ಆಕೃತಿ ಅಗರ್ವಾಲ್.
/newsfirstlive-kannada/media/media_files/2025/09/03/akriti-agarwal-3-2025-09-03-16-04-56.jpg)
ಯಾರು ಆಕೃತಿ ಅಗರ್ವಾಲ್..?
ಪೃಥ್ವಿ ಶಾ ಹಾಗೂ ಆಕೃತಿ ಅಗರ್ವಾಲ್ ಇಬ್ಬರ ನಡುವೆ ಸಂಮ್ಥಿಂಗ್-ಸಂಮ್ಥಿಂಗ್ ಹ್ಯಾಪನಿಂಗ್ ಅನ್ನೋ ಗಾಸಿಪ್ ಬಹಳ ಹಿಂದಿನಿಂದ ಇತ್ತು. ಆ ಗಾಸಿಪ್ಗೆ ಪುಷ್ಟಿ ಸಿಕ್ಕಿದೆ. ಪೃಥ್ವಿ ಶಾ- ಆಕೃತಿ ಅಗರ್ವಾಲ್ ಇಬ್ಬರೂ ಒಟ್ಟಾಗಿ ಗಣೇಶನ ಹಬ್ಬ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ಆಕೃತ್ತಿ ತಮ್ಮ ಇನ್ಸ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/09/03/akriti-agarwal-7-2025-09-03-15-59-58.jpg)
ಆಕೃತಿ ಅಗರ್ವಾಲ್ ಫೋಟೋಗಳನ್ನ ಹಂಚಿಕೊಂಡಿದ್ದೆ ತಡ ಫ್ಯಾನ್ಸ್ ಕಮೆಂಟ್ಗಳ ಸುರಿಮಳೆ ಸುರಿಸಿದ್ದಾರೆ. ಕೆಲವರು ಲವ್ ಬಗ್ಗೆ ಮಾತನಾಡಿದ್ರೆ ಇನ್ನು ಕೆಲವರು ಪೃಥ್ವಿಗೆ ಇನ್ನೂ ಬುದ್ಧಿ ಬಂದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಯರ್ ಮೇಲೆ ಗಮನವಹಿಸಿ ರೈಟ್ ಟ್ರ್ಯಾಕ್ಗೆ ಮರಳೋಕೆ ಇನ್ನೂ ಅವಕಾಶ ಇದೆ. ಅದಕ್ಕೆ ಏನ್ ಮಾಡಬೇಕೋ ಅದನ್ನ ಬಿಟ್ಟು ಉಳಿದಿರೋದ್ರ ಮೇಲೆ ಹೆಚ್ಚು ಗಮನವಹಿಸ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.
/newsfirstlive-kannada/media/media_files/2025/09/03/akriti-agarwal-6-2025-09-03-16-00-20.jpg)
ಆಕೃತಿ ಅಗರ್ವಾಲ್ ಯಾರು? ಹಿನ್ನೆಲೆ ಏನು?
ಈ ಆಕೃತಿ ಅಗರ್ವಾಲ್ ಕಂಟೆಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಲಕ್ನೋ ಮೂಲದ ಆಕೃತಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮ್ಯಾನೇಜ್ಮೆಂಟ್ ಸ್ಟಡಿಸ್ನಲ್ಲಿ ಪದವಿ ಪಡೆದಿದ್ರೂ ಮಾಡೆಲ್ ಆಗಿ ವೃತ್ತಿ ಬದುಕು ಆರಂಭಿಸಿದ್ರು. ಜೊತೆಗೆ ಕೆಲ ಸೀರಿಯಲ್ಗಳಲ್ಲಿ ನಟಿಸಿದ್ದಾರೆ.
/newsfirstlive-kannada/media/media_files/2025/09/03/akriti-agarwal-5-2025-09-03-16-00-53.jpg)
ಇನ್ಸ್ಸ್ಟಾಗ್ರಾಂ ಒಂದರಲ್ಲೇ 3.3 ಮಿಲಿಯನ್ಗೂ ಫಾಲೋವರ್ಸ್ ಹೊಂದಿದ್ದು ಹಲವು ಬ್ರ್ಯಾಂಡ್ಗಳನ್ನ ಪ್ರಮೋಟ್ ಮಾಡ್ತಾರೆ.
/newsfirstlive-kannada/media/media_files/2025/09/03/akriti-agarwal-4-2025-09-03-16-05-18.jpg)
ಒಟ್ಟಿನಲ್ಲಿ ಪೃಥ್ವಿ ಷಾ ಬದುಕಿಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಹೊಸ ಗೆಳತಿಯರ ಎಂಟ್ರಿಯ ಬಳಿಕ ಹಲವು ಕ್ರಿಕೆಟರ್ಗಳ ಕರಿಯರ್ ಬದಲಾದ ಉದಾಹರಣೆಗಳಿವೆ.
/newsfirstlive-kannada/media/media_files/2025/09/03/akriti-agarwal-2-2025-09-03-16-02-30.jpg)
ಹೀಗಾಗಿ ಈ ಆಕೃತಿ ಅಗರ್ವಾಲ್ ಪೃಥ್ವಿ ಜೀವನಕ್ಕೆ ಅದೃಷ್ಟ ದೇವತೆಯಾಗ್ತಾರಾ? ಹಳಿ ತಪ್ಪಿರೋ ಪೃಥ್ವಿಯ ಕರಿಯರ್ನ ಸರಿದಾರಿಗೆ ತರಲು ಪ್ರಯತ್ನಿಸ್ತಾರಾ? ಕಾದು ನೋಡೋಣ.