/newsfirstlive-kannada/media/media_files/2025/08/06/eyes-blinking1-2025-08-06-14-11-16.jpg)
ಕಣ್ಣು ಅನ್ನು ನಯನ, ಅಕ್ಷಿ, ನೇತ್ರ, ಅಂಬಕ, ಚಕ್ಷು ಎಂದು ಇನ್ನು ಕೆಲ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ದೇಹದ ತುಂಬಾ ಸೂಕ್ಷ್ಮವಾದ ಅತ್ಯಂತ ಪ್ರಮುಖವಾದ ಭಾಗವೇ ಕಣ್ಣು. ಯಾವುದೇ ಒಂದು ಜೀವಿ, ವಸ್ತುವಿನ ರೂಪ, ಗಾತ್ರ, ಹೀಗಿದೆ ಎಂದು ಗುರುತಿಸಲು ಕಣ್ಣಿಂದ ಮಾತ್ರ ಸಾಧ್ಯ. ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾಗಿದ್ದು ಪಂಚೇಂದ್ರಿಯಗಳಲ್ಲಿ ಒಂದಾಗಿದೆ.
/newsfirstlive-kannada/media/post_attachments/wp-content/uploads/2024/10/EYE_GIRL_1.jpg)
ಆದ್ರೆ, ಸಾಕಷ್ಟು ಜನರಿಗೆ ಆಗಾಗ ಕಣ್ಣುಗಳು ಅದರುತ್ತಾ ಇರುತ್ತೆ. ಒಮ್ಮೆ ಬಲಗಣ್ಣು ಅದರಿದರೇ ಮತ್ತೊಮ್ಮೆ ಎಡಗಣ್ಣು ಅದರುತ್ತೆ. ಹೀಗೆ ಕಣ್ಣು ಅದುರುವುದನ್ನು ಅನುಭವಿಸಿದವರು ಸಾಕಷ್ಟು ಗೊಂದಲಕ್ಕೀಡಾಗುತ್ತಾರೆ. ಏಕೆಂದರೆ ಕಣ್ಣು ಅದರುವುದರ ಹಿಂದೆ ಶುಭ, ಅಶುಭ ಎಂಬ ನಂಬಿಕೆಗಳಿವೆ.
ಪುರುಷರಿಗೆ ಬಲಗಣ್ಣು ಅದರಿದರೆ ಒಳ್ಳೆಯದು, ಮಹಿಳೆಯರಿಗೆ ಎಡಗಣ್ಣು ಅದರಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಕೆಲವರಿಗೆ ಗಂಟೆಗಳು ಕಳೆದರೂ ಹಾಗೇ ಅದರುತ್ತಿದ್ದರೆ, ಇನ್ನೂ ಕೆಲವರಿಗೆ ದಿನವಿಡೀ, ಇನ್ನೂ ಕೆಲವರಿಗೆ ಒಂದು ವಾರದ ಮಟ್ಟಿಗೆ ಅದರುವುದು ಉಳಿದುಕೊಂಡು ಬಿಡುತ್ತೆ. ಹೀಗೆ ಬಲಗಣ್ಣು ಅದರಿದರೆ ಮಹಿಳೆಯರಿಗೆ ಅಪಶಕುನ, ಎಡಗಣ್ಣು ಅದರಿದರೆ ಪುರುಷರಿಗೆ ಅಪಶಕುಶ ಎಂದು ಹೇಳಲಾಗುತ್ತದೆ. ಆದರೆ ಅದು ಹಾಗಲ್ಲಾ. ಅದಕ್ಕೆ ಕೆಲವು ವೈಜ್ಞಾನಿಕವಾದ ಕಾರಣಗಳಿವೆ.
/newsfirstlive-kannada/media/post_attachments/wp-content/uploads/2024/08/eye1.jpg)
ಕಣ್ಣು ಅದರುವುದು ಏಕೆ?
- ಒತ್ತಡ
- ದಣಿವು
- ಡ್ರೈ ಐಸ್
- ಆಲ್ಕೋಹಾಲ್
- ಅಲರ್ಜಿ
- ಕೆಫೀನ್
- ನಿದ್ರೆಯ ಕೊರತೆ
- ಕಣ್ಣಿನ ಒತ್ತಡ
- ಪೌಷ್ಟಿಕಾಂಶದ ಅಸಮತೋಲನ
ಹೌದು, ನಿಮಗೆ ತುಂಬಾ ಆಯಾಸವಾದಾಗ ನಿಮ್ಮ ಬಲಗಣ್ಣು ಅದರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಆತಂಕ ಪಡಬಾರದು ವಿಶ್ರಾಂತಿ​ ಪಡೆಯಬೇಕು. ನಿಮ್ಮ ಕಣ್ಣಲ್ಲಿ ನೀರಿನ ಅಂಶ ಕಡಿಮೆ ಇದ್ದಾಗಲೂ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ನೀವು ನಿಮ್ಮ ಕಣ್ಣಿನ ತೇವಾಂಶ ಕಾಪಾಡುವಂತ ಆಹಾರ ಸೇವಿಸಬೇಕು. ನಿಮಗೆ ನಿದ್ದೆ ಕಡಿಮೆಯಾಗಿದ್ದರೂ ಇದೇ ರೀತಿ ಆಗುತ್ತದೆ. ಆದ ಕಾರಣ ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು ಹಾಗೆ ಮಾಡಿದಲ್ಲಿ ಬಲಗಣ್ಣು ಅದರುವುದಿಲ್ಲ.
/newsfirstlive-kannada/media/post_attachments/wp-content/uploads/2023/07/Madras-Eye.jpg)
ಅಲ್ಲದೇ ನೀವು ತುಂಬಾ ಕೆಫೆನ್​ ಅಂಶ ಇರುವ ಪದಾರ್ಥವನ್ನು ಸೇವಿಸಿದರೂ ಕೂಡಾ ಈ ರೀತಿ ಆಗುತ್ತದೆ. ಈ ರೀತಿ ಆದಾಗ ಕಾಫಿ, ಟೀ ಮತ್ತು ಚಾಕೊಲೇಟ್​ ತಿನ್ನುವುದನ್ನು ಅವೈಡ್ ಮಾಡಬೇಕು. ಇನ್ನೂ ಕಣ್ಣು ರೆಪ್ಪೆ ಸೆಳೆತ ಸಾಮಾನ್ಯವಾಗಿ ಒಂದೇ ಕಣ್ಣಿಗೆ ಸಂಭವಿಸುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆ ಮಾಡಿದರೂ ಕೂಡ ರೀತಿಯಾಗುತ್ತದೆ. ಹೀಗೆ ನಿಮಗೆ ಹಲವಾರು ದಿನಗಳಿಂದ ಇದೇ ರೀತಿ ಆಗುತ್ತಿದ್ದರೆ ಒಮ್ಮೆ ವೈದ್ಯರಿಗೆ ಭೇಟಿಯಾಗಿ ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕು.
/newsfirstlive-kannada/media/post_attachments/wp-content/uploads/2024/04/EYE_HEALTH_2.jpg)
ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?
ಕಣ್ಣು ಅದರುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಕಣ್ಣಿನ ಬಳಿಯ ನರಗಳು ದುರ್ಬಲವಾದಾಗ ಅಥವಾ ಬಳಲಿದಾಗ ಈ ರೀತಿ ಉಂಟಾಗುತ್ತದೆ. ಡಿಮ್ ಲೈಟ್‌ನಲ್ಲಿ ಕೆಲಸ ಮಾಡಿದಾಗ, ಸರಿಯಾಗಿ ನಿದ್ದೆ ಮಾಡದಿದ್ದರೆ, ತುಂಬಾ ಕೆಫೀನ್ ಪದಾರ್ಥಗಳನ್ನು ಸೇವಿಸಿದಾಗ, ನರ ಸಂಬಂಧಿತ ಸಮಸ್ಯೆ ಉಂಟಾದಾಗ, ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕೂರುವುದರಿಂದ ಈ ರೀತಿ ಉಂಟಾಗುತ್ತದೆ.
ಕಣ್ಣು ಸೆಳೆತವನ್ನು ತಡೆಯುವುದು ಹೇಗೆ?
ಹೆಚ್ಚಿನ ಒತ್ತಡದ ಕೆಲಸ ಕಣ್ಣುರೆಪ್ಪೆಗಳ ಸೆಳೆತ ಸೇರಿದಂತೆ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಆಳವಾದ ಉಸಿರಾಟ, ಸಾವಧಾನತೆ ಮತ್ತು ಕೆಲಸದ ಸಮಯದಲ್ಲಿ ನಿಯಮಿತವಾಗಿ ವಿಶ್ರಾಂತಿಯನ್ನು ಪಡೆಯಬೇಕು. ಹೀಗೆ ಮಾಡುತ್ತಾ ಹೋದರೆ ಕಣ್ಣಿನ ಸೆಳೆತ ಗಮನಾರ್ಹವಾಗಿ ಕಡಿಮೆ ಮಾಡಬಹುದು.
/filters:format(webp)/newsfirstlive-kannada/media/media_files/2025/08/06/eyes-blinking-2025-08-06-14-06-42.jpg)
ನಿದ್ರೆಗೆ ಆದ್ಯತೆ ನೀಡಿ
ನಿಮ್ಮ ಕಣ್ಣಿನ ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು 7–8 ಗಂಟೆಗಳ ಕಾಲ ನಿರಂತರ ನಿದ್ರೆ ಮಾಡಬೇಕು. ಸ್ಥಿರವಾದ ನಿದ್ರೆಯ ಮಾದರಿ ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಕಣ್ಣಿನ ಸೆಳೆತಕ್ಕೆ ಚಿಕಿತ್ಸೆ ನೀಡಬಹುದೇ?
ಹೌದು, ಕಣ್ಣು ಸೆಳೆತಕ್ಕೆ ಚಿಕಿತ್ಸೆ ನೀಡಬಹುದು, ಆದರೆ ಲಕ್ಷಣಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದರೆ, ಚಿಕಿತ್ಸೆಯ ಅಗತ್ಯವಿರುತ್ತದೆ. ಹೀಗಾಗಿ ಯಾವಾಗಲೂ ಕಣ್ಣಿನ ಆರೈಕೆಗೆ ವೈದ್ಯರನ್ನು ಸಂಪರ್ಕಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us