newsfirstkannada.com

ಕೊನೆಗೂ ಬೆಂಗಳೂರಲ್ಲಿ ತಂಪೆರೆದ ಮಳೆರಾಯ; ಇಂದು ಸಂಜೆ ಭರ್ಜರಿ ಮಳೆ

Share :

Published April 20, 2024 at 3:39pm

  ಬಿಸಿಲಿನ ಬೇಗೆಗೆ ತತ್ತರಿಸಿದ ಸಿಲಿಕಾನ್​ ಸಿಟಿ ಜನರಿಗೆ ಭರ್ಜರಿ ಗುಡ್​ನ್ಯೂಸ್​

  ಇಂದು ಬೆಂಗಳೂರಲ್ಲಿ ಭಾರೀ ಬಿಸಿಲಿನ ಮಧ್ಯೆಯೂ ಜೋರು ಮಳೆಯಾಗಿದೆ!

  ಬರೋಬ್ಬರಿ 5 ತಿಂಗಳ ಬಳಿಕ ಇಂದು ಮಧ್ಯಾಹ್ನ ನಗರದ ಎಲ್ಲೆಡೆ ಭಾರೀ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಭಾರೀ ಬಿಸಿಲಿನ ಮಧ್ಯೆಯೂ ಜೋರು ಮಳೆಯಾಗಿದೆ. ಬರೋಬ್ಬರಿ 5 ತಿಂಗಳ ಬಳಿಕ ಇಂದು ಮಧ್ಯಾಹ್ನ ಮೆಜೆಸ್ಟಿಕ್, ಟೌನ್ ಹಾಲ್, ಶಾಂತಿನಗರ, ಬಸವನಗುಡಿ, ಜಯನಗರ, ಬ್ಯಾಟರಾಯನಪುರ, ಯಲಹಂಕ, ಹೆಬ್ಬಾಳ, ಕೆಆರ್ ಮಾರ್ಕೆಟ್​, ಗಿರಿನಗರ, ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಇದರ ಪರಿಣಾಮ ಟ್ರಾಫಿಕ್​​ ಜಾಮ್​ನಲ್ಲಿ ಸಿಕ್ಕಿ ಹಾಕಿಕೊಂಡು ವಾಹನ ಸವಾರರು ಪರದಾಡಿದ್ರು.

ಇನ್ನು, ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಹೀಗೆ ಮಳೆಯಾಗಲಿದೆ. ಹೀಗಾಗಿ ನಗರದಲ್ಲಿ ಬಿಸಿಲಿನ ಹಬೆ ಕಡಿಮೆಯಾಗಿ ತಂಪಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗಿದ್ದು ಜನರು ಖುಷ್ ಆಗಿದ್ದಾರೆ. ಅದರಲ್ಲೂ ನೀರನ್ನೇ ಕಾಣದೆ ಒಣಗಿ ಹೋಗಿದ್ದ ಪ್ರದೇಶಗಳಲ್ಲಿ, ಭಾರಿ ಮಳೆಯ ಪರಿಣಾಮ ನೆಲವೂ ಕೆಸರಾಗಿದೆ.

ಇಂದು ಬೆಂಗಳೂರು, ರಾಮನಗರ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊನೆಗೂ ಬೆಂಗಳೂರಲ್ಲಿ ತಂಪೆರೆದ ಮಳೆರಾಯ; ಇಂದು ಸಂಜೆ ಭರ್ಜರಿ ಮಳೆ

https://newsfirstlive.com/wp-content/uploads/2024/04/rain6.jpg

Load More