newsfirstkannada.com

ಸಿಂಹಿಣಿಗೆ ‘ಸೀತಾ’ ಸಿಂಹಕ್ಕೆ ‘ಅಕ್ಬರ್’​ ಹೆಸರು.. ಕೋರ್ಟ್​ ಮೆಟ್ಟಿಲೇರಿದ VHP; ಹೀಗೆ ಹೆಸರಿಟ್ಟಿದ್ಯಾರು?

Share :

Published February 18, 2024 at 6:49am

Update February 18, 2024 at 7:06am

    ಸದ್ಯ ಈ ಎರಡು ಸಿಂಹಗಳು ಯಾವ ಸಫಾರಿ ಪಾರ್ಕ್‌ನಲ್ಲಿ ಇವೆ?

    ಕೊಳಕು ರಾಜಕೀಯ ಮಾಡಲಾಗುತ್ತಿದೆ ಎಂದ ಫಾರಿಸ್ಟ್​ ಮಿನಿಸ್ಟರ್

    ಅಕ್ಬರ್​ ಮತ್ತು ಸೀತಾ ಸಿಂಹಗಳಿಗೆ ಎಷ್ಟು ವರ್ಷಗಳಾಗಿವೆ ಗೊತ್ತಾ?

ಪಶ್ಚಿಮ ಬಂಗಾಳದಲ್ಲಿ ಮೃಗಾಲಯವೊಂದು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ 2 ಸಿಂಹಗಳಿಗೆ ಇಟ್ಟಿರುವ ಹೆಸರು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಕೋರ್ಟ್ ಮೊರೆ ಹೋಗಿವೆ.

2 ಸಿಂಹಗಳು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ ಅಕ್ಬರ್ ಎಂಬ ಸಿಂಹ ಮತ್ತು ಸೀತಾ ಎಂಬ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಫೆಬ್ರವರಿ 13 ರಂದು ಅರಣ್ಯ ಅಧಿಕಾರಿಗಳು 7 ವರ್ಷದ ಅಕ್ಬರ್ ಹೆಸರಿನ ಸಿಂಹ ಮತ್ತು 5 ವರ್ಷದ ಸೀತಾ ಹೆಸರಿನ ಸಿಂಹಿಣಿಯನ್ನು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ಗೆ ಕರೆತಂದಿದ್ರು. ಆದ್ರೆ ಇದಕ್ಕೆ ವಿಶ್ವ ಹಿಂದೂ ಪರಿಷತ್ ತಗಾದೆ ತೆಗೆದಿದ್ದು ಸೀತೆ ಎಂಬ ಸಿಂಹಿಣಿಯನ್ನು ಅಕ್ಬರ್ ಎಂಬ ಸಿಂಹದ ಜೊತೆ ಇಡುವುದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದಿದೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ?. ಹಾಗಾಗಿ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ಹೇಳಿದ್ರೂ ಸರ್ಕಾರ ಕೇಳಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಅಂತ ವಿಶ್ವ ಹಿಂದೂ ಪರಿಷತ್ ಹೇಳಿದೆ. ಫೆಬ್ರವರಿ 16 ರಂದು ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ಫೆಬ್ರವರಿ 20 ರಂದು ವಿಚಾರಣೆ ನಡೆಯಲಿದೆ.

ಆದ್ರೆ ಈ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಬಿರ್ಬಹಾ, ಪ್ರಾಣಿಗಳಿಗೆ ತ್ರಿಪುರಾ ಮೃಗಾಲಯದಿಂದ ಹೆಸರುಗಳನ್ನು ನೀಡಲಾಗಿದೆ. ವಿಎಚ್​​ಪಿ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸಿಂಹಕ್ಕಿಟ್ಟಿರುವ ಹೆಸರು ಹಾಗೂ ಅವುಗಳೆರಡು ಒಟ್ಟಿಗೆ ಒಂದೇ ಮೃಗಾಲಯದ ಆವರಣದಲ್ಲಿರುವುದು ವಿವಾದಕ್ಕೆ ಕಾರಣವಾಗಿದೆ. ಅಂತಿಮವಾಗಿ ಕೋರ್ಟ್ ಏನು ಹೇಳುತ್ತೋ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಂಹಿಣಿಗೆ ‘ಸೀತಾ’ ಸಿಂಹಕ್ಕೆ ‘ಅಕ್ಬರ್’​ ಹೆಸರು.. ಕೋರ್ಟ್​ ಮೆಟ್ಟಿಲೇರಿದ VHP; ಹೀಗೆ ಹೆಸರಿಟ್ಟಿದ್ಯಾರು?

https://newsfirstlive.com/wp-content/uploads/2024/02/BENGAL_LIONS.jpg

Load More