/newsfirstlive-kannada/media/post_attachments/wp-content/uploads/2024/12/Village-1.jpg)
ಅದೊಂದು ಪುಟ್ಟ ಹಳ್ಳಿ! ಇಲ್ಲಿನ ಗ್ರಾಮಸ್ಥರು ತೆಗೆದುಕೊಂಡ ನಿರ್ಧಾರ ಅತ್ಯದ್ಭುತ. ಅವರು ತೆಗೆದುಕೊಂಡ ನಿರ್ಧಾರ ಇಡೀ ಹಳ್ಳಿಯಲ್ಲಿ ಬರೋಬ್ಬರಿ 12 ವರ್ಷಗಳ ಕಾಲ ಉಳಿದಿದೆ ಅಂದರೆ ಸಾಮಾನ್ಯ ವಿಚಾರವಲ್ಲ!
ತೆಲಂಗಾಣದ ಮೇದಕ್ ಜಿಲ್ಲೆಯ ಅಲ್ಲದುರ್ಗದ ಕಾಗಿದಂಪಲ್ಲಿ ವಿಶೇಷ ಕಾರಣಕ್ಕೆ ಮಾದರಿ ಗ್ರಾಮವಾಗಿದೆ. ಕಳೆದ 12 ವರ್ಷಗಳಿಂದ ಈ ಗ್ರಾಮದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ಇದೆ. ಇಲ್ಲಿನ ಜನರು ಮದ್ಯ ಸೇವಿಸಿದರೆ, ಮಾರಾಟ ಮಾಡಿದರೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಗ್ರಾಮಸ್ಥರೆಲ್ಲ ದೃಢ ನಿರ್ಧಾರ ಕೈಗೊಂಡಿದ್ದರು. ಅಂತೆಯೇ ಕಟ್ಟುನಿಟ್ಟಾಗಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಿಯಲ್ಲಿ ಯಾರಿಗಾದರೂ ಕುಡಿತದ ಚಟವಿದ್ದರೆ ಅದನ್ನು ಬಿಡುವವರೆಗೂ ಗಡಿಪಾರು ಆಗಬೇಕು. ಮದ್ಯವನ್ನು ಸಂಪೂರ್ಣ ತ್ಯಜಿಸಿದ ಬಳಿಕ ಗ್ರಾಮಕ್ಕೆ ಎಂಟ್ರಿ ಆಗಬೇಕು. ಕುಡಿದುಕೊಂಡು ಗ್ರಾಮಕ್ಕೆ ಬರಬಾರದು. ಗ್ರಾಮದಲ್ಲಿ ಎಲ್ಲಿಯಾದರೂ ಮದ್ಯದ ಬಾಟಲಿ ಕಂಡರೆ ಸಂಜೆಯೊಳಗೆ ಪಂಚಾಯಿತಿ ಸೇರಬೇಕು ಎಂದು ಹನ್ನೆರಡು ವರ್ಷಗಳ ಸಾಮೂಹಿಕ ನಿರ್ಣಯ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ:VIDEO: ಶೋಭಿತಾ ಡಿಪ್ರೆಶನ್‌ಗೆ ಹೋಗಿದ್ದಾಳೆ ಅಂದ್ರೆ ನಂಬೋಕೆ ಆಗಲ್ಲ.. ನಟ ಚಂದು ಗೌಡ ಬೇಸರ
ಗ್ರಾಮಸ್ಥರೆಲ್ಲರೂ ಇದನ್ನು ಪಾಲಿಸಬೇಕೆಂದು ತೀರ್ಮಾನ ಆಗಿತ್ತು. ಈ ನಿರ್ಧಾರ ಕೈಗೊಂಡು 12 ವರ್ಷಗಳಾಗಿವೆ. ಅವರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದಾರೆ. ಕಾಗಿದಂಪಲ್ಲಿ ಗ್ರಾಮವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಇನ್ನೂ ಮೂರು ಗ್ರಾಮಗಳು ಮದ್ಯಪಾನ ನಿಷೇಧ ಮಾಡಿವೆ.
ಅಪ್ಪಾಜಿಪಲ್ಲಿಯಲ್ಲಿ ಮದ್ಯ ಸೇವನೆ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಇಲ್ಲಿನ ಗ್ರಾಮಸ್ಥರು ಸಾಮೂಹಿಕ ಠರಾವು ಪಾಸ್ ಮಾಡಿದ್ದಾರೆ. ಇಲ್ಲಿ ಮದ್ಯ ಮಾರಾಟ ಮಾಡಿದರೆ 2 ಲಕ್ಷ ರೂಪಾಯಿವರೆಗೆ ದಂಡ. ಮಾಹಿತಿ ನೀಡಿದವರಿಗೆ 5000 ಬಹುಮಾನ ನೀಡಲಾಗುತ್ತಿದೆ.
ಪ್ರಯೋಜನ ಏನು?
ಕಾಗಿದಂಪಲ್ಲಿ ಗ್ರಾಮದಲ್ಲಿ ಮದ್ಯದಂಗಡಿಗಳಿಲ್ಲದ ಕಾರಣ ಅಲ್ಲಿನ ಜನ ಮದ್ಯ ಕುಡಿಯುವುದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹೊರಗೆ ಹೋದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿಕೊಂಡು ಮನೆಗೆ ಬರ್ತಿದ್ದಾರೆ. ಹಿರಿಯರ ನಿರ್ಧಾರ ಇಂದಿನ ಪೀಳಿಗೆಗೆ ಲಾಭವಾಗಿದೆ. ಗ್ರಾಮಸ್ಥರೆಲ್ಲರೂ ಒಟ್ಟಿಗೆ ತೊಡಗಿಸಿಕೊಂಡಿರುವುದರಿಂದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿದೆ. ಸಾಯಾಂಕಾಲ ಹಿರಿಯರೆಲ್ಲ ಸೇರಿ ತಮ್ಮ ಕಷ್ಟ-ಸುಖ ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ:ESIC ಇಂದ ಶೀಘ್ರವೇ ಭಾರೀ ಸಂಖ್ಯೆಯಲ್ಲಿ ಹುದ್ದೆಗಳ ನೇಮಕ.. ಆಕಾಂಕ್ಷಿಗಳಲ್ಲಿ ಪೂರ್ವ ತಯಾರಿ ಇರಲಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ