/newsfirstlive-kannada/media/post_attachments/wp-content/uploads/2024/12/Virat-Kohli_Rohit-Sharma.jpg)
ಇತ್ತೀಚೆಗಷ್ಟೇ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ಹರಾಜು ಮುಗಿದಿದೆ. ಮುಂದಿನ ಸೀಸನ್ ಶುರುವಾಗಲು ಇನ್ನೇನು ಕೇವಲ 3 ತಿಂಗಳು ಮಾತ್ರ ಬಾಕಿ ಇದೆ. 2025ರ ಮಾರ್ಚ್ 14 ರಿಂದ ಪ್ರಾರಂಭವಾಗಲಿರೋ ಈ ಟೂರ್ನಿಯ ಫೈನಲ್ ಪಂದ್ಯವೂ ಮೇ 25ರಂದು ನಡೆಯಲಿದೆ.
ಕಳೆದ ಸೀಸನ್ನಲ್ಲಿ ಎಲ್ಲಾ 10 ತಂಡಗಳು ಒಟ್ಟು 74 ಪಂದ್ಯಗಳು ಆಡಿದ್ದವು. ಈ ಬಾರಿ ಕೂಡ ನಾಕೌಟ್ ಹಂತದಲ್ಲಿ ಒಂದು ತಂಡಕ್ಕೆ 14 ಪಂದ್ಯಗಳಂತೆ ಎಲ್ಲಾ ಟೀಮ್ಗಳಿಗೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಹರಾಜಿಗೆ ಮುಗಿದ ಬೆನ್ನಲ್ಲೇ ಐದು ತಂಡಗಳು ಈಗಾಗಲೇ ನಾಯಕರ ಹೆಸರು ಫೈನಲ್ ಮಾಡಿವೆ. ಕೆಕೆಆರ್, ಆರ್ಸಿಬಿ ಸೇರಿದಂತೆ ಇನ್ನುಳಿದ ತಂಡಗಳು ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿವೆ.
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ 2022ರಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ ಐಪಿಎಲ್ನಲ್ಲೂ ಮೂರನೇ ಸ್ಥಾನದಲ್ಲೇ ಇತ್ತು. ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಸ್ಯಾಮ್ಸನ್ ಅದ್ಭುತ ಫಾರ್ಮ್‌ನಲ್ಲಿದ್ದು, ಇವರೇ ಆರ್ಆರ್ ತಂಡದ ಕ್ಯಾಪ್ಟನ್.
ಪ್ಯಾಟ್ ಕಮಿನ್ಸ್
2021 ರಿಂದ 2023 ರವರೆಗಿನ ಮೂರು ಸೀಸನ್ಗಳಲ್ಲೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ಗೆ ಹೋಗುವಲ್ಲಿ ವಿಫಲವಾಗಿತ್ತು. ಕಳೆದ ಬಾರಿ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫೈನಲ್ ತಲುಪಿತ್ತು. ಆದರೆ ಕೆಕೆಆರ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತಿತ್ತು. 2025ರ ಐಪಿಎಲ್ನಲ್ಲೂ ಹೈದರಾಬಾದ್ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ.
ರುತುರಾಜ್ ಗಾಯಕ್ವಾಡ್
ಕಳೆದ ಸೀಸನ್ನಲ್ಲಿ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಲೀಡ್ ಮಾಡಿದ್ರು. ಇವರ ಕ್ಯಾಪ್ಟನ್ಸಿಯಲ್ಲಿ ಚೆನ್ನೈ ಪ್ಲೇ ಆಫ್ ತನಕ ಹೋಗಿತ್ತು. ಐಪಿಎಲ್ 2025ರಲ್ಲಿ ಗಾಯಕ್ವಾಡ್ ಮತ್ತೊಮ್ಮೆ ಸಿಎಸ್‌ಕೆ ಲೀಡ್ ಮಾಡಲಿದ್ದಾರೆ.
ಶುಭ್ಮನ್ ಗಿಲ್
2024ರ ಸೀಸನ್ನಲ್ಲಿ ಹಾರ್ದಿಕ್ ಪಾಂಡ್ಯ ತೊರೆದ ನಂತರ ಗುಜರಾತ್ ಟೈಟನ್ಸ್ ನಾಯಕನಾಗಿ ಶುಭ್ಮನ್ ಗಿಲ್ ನೇಮಕಗೊಂಡಿದ್ದರು. ಮ್ಯಾನೇಜ್ಮೆಂಟ್ ಗಿಲ್ ಮೇಲೆ ಭಾರೀ ನಿರೀಕ್ಷೆ ಇಟ್ಟಿತ್ತು. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ 2 ಸಲ ಫೈನಲ್ ತಲುಪಿತ್ತು. ಆದರೆ, ಕಳೆದ ಸೀಸನ್ನಲ್ಲಿ ಗುಜರಾತ್ ಗಿಲ್ ನಾಯಕತ್ವದಲ್ಲಿ ಕೇವಲ 5 ಪಂದ್ಯ ಮಾತ್ರ ಗೆದ್ದಿತ್ತು. ಈ ಬಾರಿ ಚಾಂಪಿಯನ್ ಮಾಡೋ ನಿರೀಕ್ಷೆಯಲ್ಲಿ ಗಿಲ್ ಇದ್ದಾರೆ.
ಹಾರ್ದಿಕ್ ಪಾಂಡ್ಯ
ಐಪಿಎಲ್ 2024ರಲ್ಲಿ ಮುಂಬೈ ಕೇವಲ 4 ಗೆಲುವುಗಳೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು. ಈ ಸಲವೂ ಹಾರ್ದಿಕ್ ಮುಂಬೈ ತಂಡದ ನಾಯಕರಾಗಲಿದ್ದು, 6ನೇ ಬಾರಿಗೆ ಚಾಂಪಿಯನ್ ಮಾಡುವ ಕನಸು ಕಾಣುತ್ತಿದ್ದಾರೆ.
ಆರ್ಸಿಬಿ ಸೇರಿ ಉಳಿದ ತಂಡಗಳ ಕಥೆಯೇನು?
ಇನ್ನುಳಿದ ಐದು ತಂಡಗಳು ನಾಯಕನ ಹುಡುಕಾಟದಲ್ಲಿವೆ. ಕೆಕೆಆರ್ ರಹಾನೆ, ಆರ್ಸಿಬಿ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ಪಂತ್ ಮತ್ತು ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ಗೆ ಮಣೆ ಹಾಕುವ ಸಾಧ್ಯತೆ ಇದೆ.
ಇದನ್ನೂ ಓದಿ:ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ