ಇನ್ಮೇಲೆ ಈ ನಟಿಯರದ್ದೇ ದರ್ಬಾರ್; ಮಹಾನಟಿ ಸೀಸನ್​ 2ಗೆ ಯಾರೆಲ್ಲಾ ಆಯ್ಕೆ?

author-image
Veena Gangani
Updated On
ಇನ್ಮೇಲೆ ಈ ನಟಿಯರದ್ದೇ ದರ್ಬಾರ್; ಮಹಾನಟಿ ಸೀಸನ್​ 2ಗೆ ಯಾರೆಲ್ಲಾ ಆಯ್ಕೆ?
Advertisment
  • ವಿಭಿನ್ನ ಕಾನ್ಸೆಪ್ಟ್​ನೊಂದಿಗೆ ಮತ್ತೆ ಬಂದ ಮಹಾನಟಿ ಸೀಸನ್ 2
  • ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಸಜ್ಜಾದ ಮಹಾನಟಿ 2
  • ಈ ಬಾರಿಯ ಮಹಾನಟಿ ಸೀಸನ್ 2ಗೆ ಯಾರೆಲ್ಲಾ ಆಯ್ಕೆ?

ಉದಯೋನ್ಮುಖ ಪ್ರತಿಭೆಗಳಿಗೆ ಮಹಾನ್​ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಾನಟಿ ಕಾರ್ಯಕ್ರಮವನ್ನು ಶುರು ಮಾಡಿತ್ತು ಜೀ ವಾಹಿನಿ. ಮೊದಲ ಆವೃತ್ತಿ ಅದ್ಭುತವಾದ ಯಶಸ್ಸು ಕಂಡ ಬೆನ್ನಲ್ಲೇ ಎರಡನೇ ಆವೃತ್ತಿ ಶುರುವಾಗಿದೆ.

ಇದನ್ನೂ ಓದಿ: ಕರ್ಣ ಸೀರಿಯಲ್‌ ಲಾಂಚ್ ಆಗಲೇ ಇಲ್ಲ.. ಬೇಸರದಲ್ಲೇ ಕ್ಷಮೆ ಕೇಳಿದ ನಟ ಕಿರಣ್ ರಾಜ್

publive-image

ವಿಭಿನ್ನ ಕಾನ್ಸೆಪ್ಟ್​ ಜೊತೆಗೆ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಅಭಿನಯದ ಮೇಲೆ ಆಸಕ್ತಿಯಿರೋ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್​ ಕೊಟ್ಟಿದ್ದರು. ಇನ್ನೂ, ಮಹಾನಟಿ ಸೀಸನ್​ 2 ಭರ್ಜರಿ ಸೌಂಡ್​ ಮಾಡ್ತಿದೆ. ನಟಿ ಆಗೋ ಕನಸು ಹೊತ್ತಿರೋ ವಿವಿಧ ಜಿಲ್ಲೆಗಳಿಂದ 24 ಮಂದಿ ಮೆಗಾ ಆಡಿಷನ್​ ಕೊಟ್ಟಿದ್ದರು. ಅವರಲ್ಲಿ ಒಟ್ಟು 16 ಸ್ಪರ್ಧಿಗಳು ಮಹಾನಟಿ ಸೀಸನ್ 2ಕ್ಕೆ ಆಯ್ಕೆ ಆಗಿದ್ದಾರೆ.

publive-image

ಅದರಲ್ಲಿ ಸಿಂಚನಾ. ಆರ್​ ಮೈಸೂರು, ವರ್ಷಾ ಡಿಗ್ರಜೆ ಚಿಕ್ಕೋಡಿ, ಪೂಜಾ ರಮೇಶ್​ ಬೆಂಗಳೂರು, ವಂಶಿ ರತ್ನ ಕುಮಾರ್​ ದಕ್ಷಿಣ ಕನ್ನಡ, ಖುಷಿ ಬೆಳಗಾವಿ, ಶ್ರೀಯ ಅಗಮ್ಯ ಮೈಸೂರು, ತನಿಷ್ಕ ಮೂರ್ತಿ ಮೈಸೂರು, ಬೆಂಗಳೂರಿನ ಭೂಮಿಕ ಟಿ, ಬೀದರ್​ನ ದಿವ್ಯಾಂಜಲಿ, ಚಿಕ್ಕಮಗಳೂರಿನ ಸೌಗಂಧಿಕ, ತೀರ್ಥಹಳ್ಳಿಯ ಮಾನ್ಯ ರಮೇಶ್​, ಬೆಂಗಳೂರಿನ ನಿವಿಕ್ಷ, ಮೈಸೂರಿನ ಪ್ರೇರಣ ವಿ ಪಾಟೀಲ್​, ದಾವಣಗೆರೆಯ ವರ್ಷ ಕೆ.ಪಿ, ಸುಳ್ಯದ ಸಾಯಿಶ್ರುತಿ, ತುಮಕೂರಿನ ದೀಪಿಕಾ ಆಯ್ಕೆ ಆಗಿರೋ ಪ್ರತಿಭೆಗಳು.

publive-image

ಈಗಾಗಲೇ ಮಹಾನಟಿ ಜರ್ನಿ ಶುರುವಾಗಿದ್ದು, ಮುಂದಿನ ವಾರದಿಂದ ಹೊಸ ಹೊಸ ಕಾನ್ಸೆಪ್ಟ್​ಗಳ ಮೂಲಕ ತಮ್ಮ ಪ್ರತಿಭೆಯನ್ನ ಅನಾವರಣ ಮಾಡಲಿದ್ದಾರೆ ಸ್ಪರ್ಧಿಗಳು. ಕಳೆದ ಸೀಸನ್​ನಂತೆ ಈ ಬಾರಿಯೂ ನಟ ರಮೇಶ್​ ಅರವಿಂದ್, ನಿಶ್ವಿಕಾ, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರೂಪಕಿ ಸ್ಥಾನವನ್ನು ಅನುಶ್ರೀ ಅವರು ಅಲಂಕರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment