/newsfirstlive-kannada/media/post_attachments/wp-content/uploads/2025/02/Nasa-SUNITA-WILLIAMS-2.jpg)
ವಿಜ್ಞಾನ ಲೋಕವೇ ಒಂದು ಅದ್ಭುತ. ಒಮ್ಮೆ ಅದರ ಸತ್ಯಾನ್ವೇಷಣೆಗೆ ಇಳಿದರೆ ಸಾಗರಕ್ಕಿಂತ ಮಿಗಿಲಾಗಿ ಕಾಣುತ್ತದೆ. ಹುಡುಕಿದಷ್ಟೂ, ಶೋಧಿಸಿದಷ್ಟು ಮುಗಿಯದ ಅಧ್ಯಾಯನ ಈ ವಿಜ್ಞಾನ. ಅದರಲ್ಲೂ ಖಗೋಳ ವಿಜ್ಞಾನ ಮತ್ತೊಂದು ಲೋಕ. ಭೂಮಿಯಿಂದ ಆಕಾಶಕ್ಕೆ ಜಿಗಿದು ಅಲ್ಲೇ ಠಿಕಾಣಿ ಹೂಡಿ ವರ್ಷಾನುಗಟ್ಟಲೇ ಅಲ್ಲೇ ವಾಸ ಮಾಡಿದ ಉದಾಹರಣೆಗಳು ನಮ್ಮ ಮುಂದಿದೆ.
ಕೇವಲ 8 ದಿನದ ಅಧ್ಯಯನಕ್ಕಾಗಿ ಹೋಗಿದ್ದ ಸುನಿತಾ ವಿಲಿಯಮ್ಸ್ 9 ತಿಂಗಳಾದರೂ ಇನ್ನೂ ಭೂಮಿಗೆ ವಾಪಸ್ ಬಂದಿಲ್ಲ. NASA ಮತ್ತು SpaceXನ ನಿರಂತರ ಶ್ರಮದಿಂದ ನಾಳೆ ಭೂಮಿಗೆ ಮರಳಲಿದ್ದಾರೆ. ಆ ಮೂಲಕ ಸುನಿತಾ ವಿಲಿಯಮ್ಸ್ ಅಂಡ್ ಬುಚ್ ವಿಲ್ಮೋರ್ ಅವರು 560 ದಿನಗಳ ಬಾಹ್ಯಾಕಾಶ ವಾಸಕ್ಕೆ ಕೊನೆ ಬೀಳಲಿದೆ. ಸುನಿತಾ ವಿಲಿಯಮ್ಸ್, ಒಂದೇ ಅಲ್ಲ ಅನೇಕ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ವರ್ಷಕ್ಕಿಂತ ಅಧಿಕ ದಿನ ಕಳೆದಿದ್ದಾರೆ. ಅವರು ಯಾರು ಅನ್ನೋದ್ರ ವಿವರ ಇಲ್ಲಿದೆ.
ಇದನ್ನೂ ಓದಿ: Sunita williams ಎಷ್ಟು ಗಂಟೆಗೆ ಭೂಮಿಗೆ ಬಂದಿಳಿಯುತ್ತಾರೆ? ನೇರ ಪ್ರಸಾರ ವೀಕ್ಷಣೆ ಹೇಗೆ..?
ಫ್ರಾಂಕ್ ರುಬಿಯೋ, ಬಾಹ್ಯಾಕಾಶದಲ್ಲಿ ಕಳೆದ ಒಟ್ಟು ದಿನ 371
ಅಮೆರಿಕದ ಗಗನಯಾತ್ರಿ ಆಗಿರುವ ಫ್ರಾಂಕ್ ರುಬಿಯೋ (Frank Rubio) ಅವರು, ಅಂತಾರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅತ್ಯಧಿಕ ದಿನಗಳನ್ನು ಕಳೆದಿದ್ದಾರೆ. ಇವರ ಬಾಹ್ಯಾಕಾಶ ಪ್ರಯಾಣದ ಅವಧಿಯ ಪ್ಲಾನ್ 6 ತಿಂಗಳ ಆಗಿತ್ತು. ಆದರೆ ಇವರು ಪ್ರಯಾಣಿಸಿದ್ದ ನೌಕೆಯಲ್ಲಿ ಕೂಲಂಟ್ (coolant) ಸೋರಿಕೆಯಿಂದ ವಾಪಸ್ ಬರೋದು ತಡವಾಯಿತು. ಸೆಪ್ಟೆಂಬರ್ 21, 2022 ರಂದು ಭೂಮಿಯಿಂದ ಬಾಹ್ಯಾಕಾಶಕ್ಕೆ ಹೊರಟಿದ್ದರು. ಮತ್ತೆ ಭೂಮಿಗೆ ವಾಪಸ್ ಬಂದಿದ್ದು, ಸೆಪ್ಟೆಂಬರ್ 24, 2023 ರಲ್ಲಿ. ಬಾಹ್ಯಾಕಾಶದಲ್ಲಿ ದೀರ್ಘಾವಧಿಗೆ ಹೊಂದಿಕೊಂಡ ನಂತರ ಮನುಷ್ಯನ ದೇಹ ಹೇಗೆ ಗುರುತ್ವಾಕರ್ಷಣೆಯನ್ನು ಅಡಾಪ್ಟ್ ಮಾಡಿಕೊಳ್ಳುತ್ತದೆ. ಮತ್ತು ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಏನೆಲ್ಲ ಅಧ್ಯಯನ ಮಾಡಬಹುದು ಅನ್ನೋ ಉದ್ದೇಶದಿಂದ ಇವರು ಐಎಸ್ಎಸ್ಗೆ ತೆರಳಿದ್ದರು.
ಸ್ಕಾಟ್ ಕೆಲ್ಲಿ, ಬಾಹ್ಯಾಕಾಶದಲ್ಲಿ ಕಳೆದ ಒಟ್ಟು 520
ಸ್ಕಾಟ್ ಕೆಲ್ಲಿ (Scott Kelly) ಬಾಹ್ಯಾಕಾಶದಲ್ಲಿ ಬರೋಬ್ಬರಿ 520 ದಿನಗಳನ್ನು ಕಳೆದು ಜನಪ್ರಿಯರಾಗಿದ್ದಾರೆ. ಇವರು ಎರಡು ಬಾರಿ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಬಾಹ್ಯಾಕಾಶದಲ್ಲಿ ಕಳೆದ ಒಂದು ಬಾರಿಯ ದೀರ್ಘಾವಧಿ 340 ದಿನಗಳು. ಬಾಹ್ಯಾಕಾಶದಲ್ಲಿ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವುದರಿಂದ ಮನುಷ್ಯರ ದೇಹದ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಅನ್ನೋದು ಇವರ ಅಧ್ಯಯನಾಗಿತ್ತು. ಹಾಗಾಗಿ ಅವರು ತಮ್ಮ ದೇಹದ ಮೇಲೆ ಪ್ರಯೋಗ ಮಾಡಿಕೊಂಡರು. ಬಾಹ್ಯಾಕಾಶದಿಂದ ಮರಳಿ ಭೂಮಿಗೆ ಬಂದ ನಂತರ, ತನ್ನ ಸಹೋದರ ದೇಹಕ್ಕೆ ಹೋಲಿಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ದಿನ ಅಧಿಕೃತ.. ಅಮೆರಿಕದ ಸಮುದ್ರದಲ್ಲಿ ಲ್ಯಾಂಡ್..!
ಪೆಗ್ಗಿ ವಿಟ್ಸನ್, ಬಾಹ್ಯಾಕಾಶದಲ್ಲಿ ಕಳೆದ ಒಟ್ಟು 665 ದಿನಗಳು
ಪೆಗ್ಗಿ ವಿಟ್ಸನ್ ( Peggy Whitson) ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ದಿನ ಕಳೆದ ಅಮೇರಿಕನ್ ಗಗನಯಾತ್ರಿ. ಇವರು ಎರಡು ಬಾರಿ ISSಗೆ ಹೋಗಿದ್ದರು. ಹಲವಾರು ಬಾಹ್ಯಾಕಾಶ ನಡಿಗೆಗಳನ್ನು ಮಾಡಿದರು. ಅಪಾರ ಅನುಭವ ಇರುವ ಇವರನ್ನು NASA, ತನ್ನ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ (Human spaceflight program) ಲೀಡರ್ ಅನ್ನಾಗಿ ಮಾಡಿದೆ.
ಜೆಫ್ ವಿಲಿಯಮ್ಸ್, ಬಾಹ್ಯಾಕಾಶದಲ್ಲಿ ಕಳೆದ ದಿನಗಳು 543
ಜೆಫ್ ವಿಲಿಯಮ್ಸ್ (Jeff Williams) ಅನೇಕ ISS ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಬಾಹ್ಯಾಕಾಶ ಮಷಿನ್ಗಳ ಜೋಡಣೆ ಮತ್ತು ಕಾರ್ಯಾಚರಣೆಯಲ್ಲಿ (Assembly and operation) ಪಳಗಿದ್ದಾರೆ.
ಕ್ರಿಸ್ಟಿನಾ ಕೊಚ್, ಬಾಹ್ಯಾಕಾಶದಲ್ಲಿ ಕಳೆದ ದಿನಗಳು 328
ಮಾರ್ಚ್ 2019 ರಿಂದ ಫೆಬ್ರವರಿ 2020ರವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಿದ್ದರು. ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಅತಿ ಹೆಚ್ಚು ದಿನಗಳ ಕಾಲ ಕಳೆದವರಲ್ಲಿ ಮೊದಲಿಗರು. ದೀರ್ಘಾವಧಿಯ ಬಾಹ್ಯಾಕಾಶ ಹಾರಾಟದಿಂದ ಮಹಿಳೆಯರ ಆರೋಗ್ಯ ಮತ್ತು ದೇಹದ ಮೇಲೆ ಏನ್ ಪರಿಣಾಮ ಬೀರುತ್ತದೆ ಅನ್ನೋದು ಇವರ ಅಧ್ಯಯನದ ಉದ್ದೇಶವಾಗಿತ್ತು.
ಸುನಿತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ 652ಕ್ಕೂ ಹೆಚ್ಚು ದಿನಗಳನ್ನು ಕಳೆದಿದ್ದಾರೆ. ವಿಲಿಯಮ್ಸ್ ಬಾಹ್ಯಾಕಾಶ ಕೇಂದ್ರಕ್ಕೆ ಹಲವಾರು ಬಾರಿ ಹೋಗಿ ಬಂದಿದ್ದಾರೆ. 8 ದಿನದ ಅಧ್ಯಯನಕ್ಕೆ ಹೋಗಿ 9 ತಿಂಗಳ ಕಾಲ ಸಿಲುಕಿಕೊಂಡಿದ್ದಾರೆ. ಅಂದರೆ 287 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ ಹೆಚ್ಚು ದಿನಗಳನ್ನು ಕಳೆದಿದ್ದಾರೆ. ಜೊತೆಗೆ 13 ಬಾರಿ ISS ಕಮಾಂಡ್ ಮಾಡಿದ ಮೊದಲ ಮಹಿಳೆ.
ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಭೂಮಿಗೆ ಬರಲು ಕ್ಷಣಗಣನೆ; ಭಾರತ ಮೂಲದ ಗಗನಯಾತ್ರಿ ನಡೆದು ಬಂದ ಹಾದಿ ಹೇಗಿತ್ತು?
ವ್ಯಾಲೋರಿ ಪಾಲಿಯಕೋವ್, ಬಾಹ್ಯಾಕಾಶದಲ್ಲಿ ಕಳೆದ ಒಟ್ಟು ದಿನ 437
ವ್ಯಾಲೋರಿ ಪಾಲಿಯಕೋವ್ (Valeri Polyakov) ಅವರು ಬಾಹ್ಯಾಕಾಶದಲ್ಲಿ ಒಟ್ಟು 437 ದಿನಗಳನ್ನು ಕಳೆದಿದ್ದಾರೆ. ಇವರು ಒಮ್ಮೆ ಮಾತ್ರ ಬಾಹ್ಯಾಕಾಶಕ್ಕೆ ತೆರಳಿದ್ದರು. ಒಂದೇ ಯಾನದ ಮೂಲಕ ಬರೋಬ್ಬರಿ 437 ದಿನಗಳ ಕಾಲ ಕಳೆದು ವಿಶ್ವದಾಖಲೆ ಮಾಡಿದ್ದಾರೆ. ಜನವರಿ 1994ರಲ್ಲಿ ಹೋದವರು ಮಾರ್ಚ್ 1995ರಲ್ಲಿ ವಾಪಸ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ