/newsfirstlive-kannada/media/post_attachments/wp-content/uploads/2024/10/KL-RAHUL-2.jpg)
ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ಐಪಿಎಲ್ ತಂಡಗಳ ಮಾಲೀಕರ ಗಮನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದಾರೆ. ತಮ್ಮ ಆಟದಿಂದಲೇ ಹೆಸರು ವಾಸಿಯಾಗಿರೋ ಕರ್ನಾಟಕದ ಆಟಗಾರರು ವಿವಿಧ ಫ್ರಾಂಚೈಸಿಗಳಲ್ಲಿ ಆಡಲಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ 20ಕ್ಕೂ ಹೆಚ್ಚು ಕನ್ನಡಿಗರು ಹೆಸರು ರಿಜಿಸ್ಟರ್ ಮಾಡಿದ್ರು. ಈ ಪೈಕಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿ ಸೈ ಎನಿಸಿಕೊಂಡಿರೋ ಕರ್ನಾಟಕದ ಆಟಗಾರರು ಕೋಟಿ ಕೋಟಿ ಬಾಚಿಕೊಂಡಿದ್ದಾರೆ.
14 ಕೋಟಿಗೆ ರಾಹುಲ್ ಸೇಲ್
ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರೋ ಪ್ಲೇಯರ್ ಕೆ.ಎಲ್ ರಾಹುಲ್. ಆರ್ಸಿಬಿ ರಾಹುಲ್ ಅವರನ್ನು ಖರೀದಿ ಮಾಡಲಿದೆ ಎಂದು ಭಾವಿಸಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆ ಒಂದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಡಿಮೆ ದುಡ್ಡಿಗೆ ಎಂದರೆ 14 ಕೋಟಿಗೆ ಖರೀದಿ ಮಾಡಿದೆ.
ಡೆಲ್ಲಿಗೆ ಕರುಣ್
ಮಹರಾಜಾ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕರುಣ್ ನಾಯರ್ ಅವರಿಗೆ ಡೆಲ್ಲಿ ಮಣೆ ಹಾಕಿದೆ. ಇವರಿಗೆ 50 ಲಕ್ಷ ನೀಡಿ ಖರೀದಿ ಮಾಡಲಾಗಿದೆ. ಹಾಗೆಯೇ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಮಿಂಚಿರುವ ಅಭಿನವ್ ಮನೋಹರ್ ಅವರನ್ನು 3.20 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ.
ತಮ್ಮ ಆಕ್ರಮಣಕಾರಿ ಬೌಲಿಂಗ್ನಿಂದಲೇ ಸದ್ದು ಮಾಡಿದ್ದ ಪ್ರಸಿದ್ಧ ಕೃಷ್ಣ ಭಾರೀ ಮೊತ್ತಕ್ಕೆ ಸೇಲಾಗಿದ್ದಾರೆ. ಇವರು 2 ಕೋಟಿ ಬೇಸ್ ಪ್ರೈಸ್ನಿಂದ ಬರೋಬ್ಬರಿ 9.50 ಕೋಟಿಗೆ ಗುಜರಾತ್ ಟೈಟನ್ಸ್ ತಂಡದ ಪಾಲಾದ್ರು.
ಇದನ್ನೂ ಓದಿ:ಸ್ಟಾರ್ ಪ್ಲೇಯರ್ಸ್ಗೆ ಬಿಗ್ ಶಾಕ್; ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಆಟಗಾರರು ಇವ್ರೇ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್