/newsfirstlive-kannada/media/post_attachments/wp-content/uploads/2024/07/Money.jpg)
ಎಲ್ಲರಿಗೂ ಈಗಿನಿಂದಲೇ ರಿಟೈರ್​ಮೆಂಟ್​​ ಲೈಫ್​​ಗೆ ಸೇವಿಂಗ್ಸ್ ಮಾಡಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿ ಗೋಲ್ಡ್​, ರಿಯಲ್​ ಎಸ್ಟೇಟ್​ ಅಥವಾ ಸ್ಟಾಕ್​​ ಮಾರ್ಕೆಟ್​ನಲ್ಲಿ ಇನ್ವೆಸ್ಟ್​ ಮಾಡುತ್ತಾರೆ. ಅದರಲ್ಲೂ ಬಹುತೇಕರು ಎಫ್​​ಡಿ ಮೊರೆ ಹೋಗುತ್ತಾರೆ. ಅಂಥವರಿಗೆ ಎಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚು ಸೇಫ್​​ ಅನ್ನೋ ಪ್ರಶ್ನೆಗಳಿವೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಖುದ್ದು ಉತ್ತರ ನೀಡಿದೆ.
RBI ಪ್ರಕಾರ ಸೇಫ್​ ಬ್ಯಾಂಕ್​ ಯಾವುದು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಮೂರು ಪ್ರಮುಖ ಬ್ಯಾಂಕ್​​ಗಳು ಸೇಫ್​ ಎಂದು ಘೋಷಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಮತ್ತು ಐಸಿಐಸಿಐ (ICICI) ಬ್ಯಾಂಕ್‌ಗಳು ದೇಶದ ಅತ್ಯಂತ ಸೇಫ್​​​ ಹಣಕಾಸು ಸಂಸ್ಥೆಗಳು ಎಂದು ಆರ್​​ಸಿಬಿ ಗುರುತಿಸಿದೆ.
ಈ ಬ್ಯಾಂಕ್​ಗಳು ಹೇಗೆ ಸೇಫ್​​?
ರಿಸರ್ವ್​​ ಬ್ಯಾಂಕ್​ ಇಂಡಿಯಾ ಪ್ರಕಾರ SBI, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕುಗಳು ದೇಶೀಯ ಆರ್ಥಿಕತೆಗೆ ಪ್ರಾಮುಖ್ಯತೆ ನೀಡುತ್ತಿವೆ. ದೇಶದ ಆರ್ಥಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ಬ್ಯಾಂಕುಗಳ ವೈಫಲ್ಯ ದೇಶದ ಹಣಕಾಸು ವ್ಯವಸ್ಥೆ ಗಮನಾರ್ಹ ಪರಿಣಾಮ ಬೀರುತ್ತದೆ. ಈ ಮೂರು ಪ್ರಮುಖ ಬ್ಯಾಂಕ್​ಗಳಿಂದಲೇ ದೇಶದ ಆರ್ಥಿಕ ವ್ಯವಸ್ಥೆ ನಿಂತಿರುವುದು ಎಂದು ತಿಳಿದು ಬಂದಿದೆ.
ಡೇಟಾ ಆಧಾರದ ಮೇಲೆ ಘೋಷಿಸಿದ ಆರ್​​ಬಿಐ
ಇನ್ನು, ಆರ್​​ಬಿಐ ಇತ್ತೀಚಿನ ಡೇಟಾ ಆಧರಿಸಿ ಈ ಘೋಷಣೆ ಮಾಡಿದೆ. ಈ ಬ್ಯಾಂಕ್​ಗಳು ಹೆಚ್ಚಿನ ಮಟ್ಟದ ಬಂಡವಾಳ ಹೊಂದಿವೆ. ತಮ್ಮ ಸ್ಥಿರತೆ ಖಾತ್ರಿಪಡಿಸಿಕೊಳ್ಳಲು ಬದ್ಧರಾಗಿದ್ದಾರೆ. ಆರ್ಥಿಕ ಸುಧಾರಣೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ನಿರ್ದಿಷ್ಟವಾಗಿ ಹೆಚ್ಚುವರಿ ಸಾಮಾನ್ಯ ಇಕ್ವಿಟಿ ಶ್ರೇಣಿ ಬಂಡವಾಳ ಮತ್ತು ನಷ್ಟ ಸರಿದೂಗಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಆರ್​​ಬಿಐ ಪತ್ರಿಕಾ ಹೇಳಿಕೆ ನೀಡಿದೆ. ಹೀಗಾಗಿ ನೀವು ಹಣ ಹೂಡಿಕೆ ಮಾಡಲು ಈ ಮೂರು ಬ್ಯಾಂಕ್​ಗಳು ಸಖತ್​ ಸೇಫ್​ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us