/newsfirstlive-kannada/media/post_attachments/wp-content/uploads/2024/12/Happy-New-Year-2025.jpg)
2024 ಮುಗಿದು ಈಗ 2025ಕ್ಕೆ ನಾವು ನಮ್ಮ ಮೊದಲ ಚರಣವನ್ನರಿಸಿದ್ದೇವೆ. 2024 ಅನ್ನೋದು 2025ನ್ನು ಬರಮಾಡಿಕೊಳ್ಳಲು ನಡೆಸಿದ ತಯಾರಿ ಎಂಬಂತೆ ಮುಗಿದು ಹೋಗಿದೆ. ಹೊಸ ವರ್ಷ ಕಾಲಿಟ್ಟಿದೆ. ಈ 12 ತಿಂಗಳಲ್ಲಿ ಗಂಗೆ, ಯಮುನೆ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅದೇ ರೀತಿ ದೇಶದಲ್ಲಿ ಹಲವು ಪ್ರಮುಖ ಬದಲಾವಣೆಗಳು ಕೂಡ ಆಗಿವೆ. ಈ ಬದಲಾವಣೆಗಳು 2025ರ ಸಾಲಿನ ವರ್ಷದ ಮೇಲೆ ಎನೆಲ್ಲಾ ಪರಿಣಾಮ ಬೀರಲಿವೆ ಹಾಗೂ ಆಗಿರುವ ಪ್ರಮುಖ ಬದಲಾವಣೆಗಳು ಏನು ಎಂಬುದರ ಸ್ಪಷ್ಟ ವಿವರ ಇಲ್ಲಿದೆ
1. ಕಾರ್ ದರದಲ್ಲಿ ಹೆಚ್ಚಳ
ಆಟೋಮೊಬೈಲ್ ಉತ್ಪಾದನೆಯಲ್ಲಿ ಪ್ರಮುಖವಾಗಿ ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ ಮತ್ತು ಎಂಜಿಗಳು ತಮ್ಮ ಕಾರ್​ ಮಾರಾಟದ ಬೆಲೆಯನ್ನು ಸುಮಾರು 2 ರಿಂದ 4 ಪರ್ಸೆಂಟ್​ನಷ್ಟು ಏರಿಕೆ ಮಾಡಿವೆ. ಈ ಹೊಸ ವರ್ಷದಿಂದ ಈ ಕಾರ್​ಗಳ ಬೆಲೆಯಲ್ಲಿ ಶೇಕಡಾ 2 ರಿಂದ 4 ರಷ್ಟು ಏರಿಕೆಯಾಗಲಿದೆ. ಹೊಸ ವರ್ಷಕ್ಕೆ ಹೊಸ ಕಾರ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದ ಗ್ರಾಹಕರ ಆಸೆಗೆ ದರ ಏರಿಕೆ ಶಾಕ್ ನೀಡಿತ್ತು. ಅನೇಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.2025ರಲ್ಲಿ ಇದು ಕಂಪನಿಗಳಿಗೆ ಹೇಗೆ ಪರಿಣಮಿಸಲಿದೆ ಎನ್ನುವುದನ್ನು ನೋಡಬೇಕಿದೆ
2. ರೈತರ ಸಾಲದಲ್ಲಿ ಸುಧಾರಣೆ
ಭಾರತೀಯ ರಿಸರ್ವ ಬ್ಯಾಂಕ್​ ಕೃಷಿ ಉತ್ಪಾದನೆ ಹೆಚ್ಚಿಸುವ ಉದ್ದೇಶ ಹಾಗೂ ರೈತರನ್ನು ಆರ್ಥಿಕವಾಗಿ ಸಬಲಗೊಳಿಸಲು ಆರ್​​ಬಿಐ ಈ ಬಾರಿ ಮಹತ್ವದ ಹೆಜ್ಜೆಯಿನ್ನಿಟ್ಟಿದೆ. ರೈತರಿಗೆ ನೀಡುತ್ತಿದ್ದ ಅಸುರಕ್ಷಿತ ಸಾಲವನ್ನು 1.6 ಲಕ್ಷ ರೂಪಾಯಿಂದ 2 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಿದೆ.ಯಾವದೇ ಮೇಲಾಧಾರವಿಲ್ಲದೇ ನೀಡುವ ಸಾಲದಲ್ಲಿ ಹೆಚ್ಚಳ ಮಾಡಿದ್ದು ಕೃಷಿ ಕ್ಷೇತ್ರಕ್ಕೆ ದೊಡ್ಡ ಬೂಸ್ಟ್ ನೀಡಿದಂತೆ ಆಗಿದೆ. ಚಿಕ್ಕ ಹಾಗೂ ಮಧ್ಯಮ ಕೃಷಿಕರಿಗೆ ಇದು ನಿಜಕ್ಕೂ ನಿರಾಳಗೊಳ್ಳುವಂತಹ ಸುದ್ದಿ. ರೈತರ ಆರ್ಥಿಕ ಸ್ಥಿತಿಯನ್ನು ಹಾಗೂ ಕೃಷಿಯ ಉತ್ಪಾದನೆಯನ್ನು ಹೆಚ್ಚಿಸಲು ಆರ್​ಬಿಐ ಈ ಒಂದು ನಿರ್ಧಾರಕ್ಕೆ ಬಂದಿದೆ.
3. ಯುಪಿಐ123 ಪೇಮೆಂಟ್​ನಲ್ಲಿ ಹೆಚ್ಚಳ
ಭಾರತೀಯ ರಿಸರ್ವ್​ ಬ್ಯಾಂಕ್ ಯುಪಿಐ 123 ಮತ್ತು ಯುಪಿಐ ಲೈಟ್​ನಲ್ಲಿ ನಡೆಯುತ್ತಿದ್ದ ಪೆಮೇಂಟ್​ ಮಿತಿಯನ್ನು ಹೆಚ್ಚಿಸಿದೆ. ಒಂದು ಬಾರಿ ಪೇಮೆಂಟ್​ಗೆ ಯುಪಿಐ123 ಮೇಲೆ ಇದ್ದ ಪೇಮೆಂಟ್​ ಮಿತಿಯನ್ನು 5 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನು ಯುಪಿಐ ಲೈಟ್​ ಮಿತಿಯನ್ನು 5,00 ರಿಂದ 1,000 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಎರಡು ಡಿಜಿಟಲ್​ ಪೇಮೆಂಟ್ ವೇದಿಕೆಯಲ್ಲಿ ನಾವು ಇಂಟರ್​ನೆಟ್ ಸರ್ವಿಸ್​ ಇಲ್ಲದೆಯೂ ಕೂಡ ವ್ಯವಹಾರವನ್ನು ಮಾಡಬಹುದು. ಇದು 2025ರಲ್ಲಿ ದೊಡ್ಡ ಧನಾತ್ಮಕ ಪರಿಣಾಮ ಬೀರಲಿದೆ. ಈ ವಿಚಾರದಲ್ಲಿ ಆರ್​ಬಿಐ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಪ್ರಮುಖವಾಗಿ ಇದು ಹಿರಿಯ ನಾಗರಿಕರಿಗೆ ಹಾಗೂ ಗ್ರಾಮ ಪ್ರದೇಶದ ನಿವಾಸಿಗಳಿಗೆ ಬಹುದೊಡ್ಡ ಗೇಮ್​ ಚೆಂಜರ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:Happy new year! ಚಿನ್ನ, ಬೆಳ್ಳಿ ಖರೀದಿಸೋರಿಗೆ ಗೋಲ್ಡನ್​ ನ್ಯೂಸ್.. ಬೆಲೆಯಲ್ಲಿ ಭಾರೀ ಇಳಿಕೆ
4. ಕಾರ್ಮಿಕರ ಭವಿಷ್ಯ ನಿಧಿ ವಿತ್​ಡ್ರಾದಲ್ಲಿ ಸರಳೀಕರಣ
ಇಪಿಎಫ್​ಒದಲ್ಲಿ ಪೆನ್ಷನ್​ ಪಡೆಯುವ ಫಲಾನುಭವಿಗಳಿಗೆ ಅವರ ಭವಿಷ್ಯ ನಿಧಿ ಕೈಸೇರುವ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಯಾವುದೇ ಬ್ಯಾಂಕ್ ಎಟಿಎಂನಲ್ಲಿಯೂ ಕೂಡ ಸರಳವಾಗಿ ತಮ್ಮ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.ಐಟಿ ವ್ಯವಸ್ಥೆಯನ್ನು ಕೂಡ ಅಪ್​ಗ್ರೇಡ್ ಮಾಡಲಾಗಿದೆ. ಪಿಎಫ್​ ವಿತ್​ಡ್ರಾವಲ್ ಪ್ರಕ್ರಿಯೆಯನ್ನು ಮತ್ತಷ್ಟು ಸುಧಾರಿಸಲಾಗಿದೆ. ಸೆಪ್ಟಂಬರ್ 24 ರಂದು ಕೇಂದ್ರ ಕಾರ್ಮಿಕ ಸಚಿವ ಮನುಷ್ಕ್ ಮಾಂಡವಿಯಾ ಸೆಂಟ್ರಲೈಸ್ಡ್ ಪೆನ್ಶನ್​ ಪೇಮೆಂಟ್​ ಸಿಸ್ಟಮ್(CPPS) ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಇದು ಜನವರಿ 1, 2025 ರಿಂದ ಸುಮಾರು 70.8 ಲಕ್ಷ ಕಾರ್ಮಿಕರು ತಮ್ಮ ಪೆನ್ಶನ್ ಹಣವನ್ನ ದೇಶದ ಯಾವುದೇ ಬ್ಯಾಂಕ್​ನ ಶಾಖೆಯಲ್ಲಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
5. ಥೈಲೆಂಡ್​ನ ಇ-ವೀಸಾ ವ್ಯವಸ್ಥೆಯ ಅನುಷ್ಠಾನ
ದೇಶದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬೂಸ್ಟ್ ನೀಡಲು ಥೈಲ್ಯಾಂಡ್ ಸರ್ಕಾರ ಜಾಗತಿಕವಾಗಿ ಇ-ವೀಸಾವನ್ನು ಪರಿಚಯಿಸಿದೆ. ಜನವರಿ 1 ರಿಂದ ಈ ವ್ಯವಸ್ಥೆ ಆರಂಭವಾಗಿದೆ. ಈ ಒಂದು ಡಿಜಿಟಲ್ ವೇದಿಕೆ ವೀಸಾ ಪಡೆಯುವ ಪ್ರಕ್ರಿಯನ್ನು ಮತ್ತಷ್ಟು ಸರಳಗೊಳಿಸಿದೆ. ಆ ರೀತಿಯಾಗಿಯೇಡಿಜಿಟಲ್ ವೇದಿಕೆಯನ್ನು ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಪ್ರಮುಖವಾದ ಅಂಶವೆಂದರೆ ಅದು ಭಾರತೀಯ ಪ್ರವಾಸಿ ಪ್ರಿಯರು ವೀಸಾ ಇಲ್ಲದೇ ಥೈಲ್ಯಾಂಡ್​ನಲ್ಲಿ 60 ದಿನಗಳ ಕಾಲ ವಾಸಿಸಬಹುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us