/newsfirstlive-kannada/media/post_attachments/wp-content/uploads/2025/04/AI.jpg)
ಕೃತಕ ಬುದ್ಧಿಮತ್ತೆ (AI: Artificial intelligence) ಮತ್ತು ಡೇಟಾ ಸೈನ್ಸ್ (Data Science) ತಂತ್ರಜ್ಞಾನ ಕ್ಷೇತ್ರ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿದೆ. ಆ ಮೂಲಕ ಅಸಾಧಾರಣ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸುತ್ತಿದೆ.
ಡೇಟಾ ಸೈನ್ಸ್, ಸೈಂಟಿಫಿಕ್ ವಿಧಾನ, ಪ್ರೊಸೆಸ್ ಮತ್ತು ಅಲ್ಗಾರಿದಮ್ (Algorithms) ಬಳಸಿಕೊಂಡು AIಗಳು ಮನುಷ್ಯರಂತೆ ಕೆಲಸ ಮಾಡುತ್ತಿವೆ. ಕೃತಕ ಬುದ್ಧಿಮತ್ತೆಯಿಂದ ಜಟಿಲ ಸಮಸ್ಯೆಗಳು ಕೂಡ ಸರಾಗ. AI ಹಾಗೂ ಡೇಟಾ ಸೈನ್ಸ್ ವಿಭಾಗವು ತಂತ್ರಜ್ಞಾನ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಹೀಗಾಗಿ ಐಟಿ ಮತ್ತು ಸಾಫ್ಟೆವೇರ್ ಉದ್ಯಮಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉದ್ಯೋಗಳ ಲಭ್ಯತೆ ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಪ್ರಸ್ತುತ AI ಮತ್ತು ಡೇಟಾ ಸೈನ್ಸ್ ಕೋರ್ಸ್ ಕಲಿಯಲು ಉತ್ಸುಕರಾಗಿದ್ದಾರೆ. ಭಾರತದಲ್ಲಿ AI ತಂತ್ರಜ್ಞಾನದ ಬಗ್ಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ವಿವರ ಇಲ್ಲಿದೆ.
ಇದನ್ನೂ ಓದಿ: Whatsappನಲ್ಲಿ ಸ್ಟೇಟಸ್ ಹಾಕೋರಿಗೆ ಗುಡ್ ನ್ಯೂಸ್.. ಬಂದಿದೆ ಮತ್ತೊಂದು ಹೊಸ ಫೀಚರ್; ಏನದು?
ಭಾರತದಲ್ಲಿ AI ಮತ್ತು ಡೇಟಾ ಸೈನ್ಸ್ ಕೋರ್ಸ್..?
- ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು
- ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ (IITB)
- ಭಾರತೀಯ ತಂತ್ರಜ್ಞಾನ ಸಂಸ್ಥೆ ದೆಹಲಿ (IITD)
- ಭಾರತೀಯ ತಂತ್ರಜ್ಞಾನ ಸಂಸ್ಥೆ ಕಾನ್ಪುರ (IITK)
- ಭಾರತೀಯ ತಂತ್ರಜ್ಞಾನ ಸಂಸ್ಥೆ ಖರಗ್‌ಪುರ (IIT-KGP)
- ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (IITM)
ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (VIT), ವೆಲ್ಲೂರು
QS ಱಂಕಿಂಗ್ಸ್ ಪ್ರಕಾರ, 100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಡೇಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ ಬಗ್ಗೆ ತರಬೇತಿ ನೀಡುತ್ತಿವೆ. ತಂತ್ರಜ್ಞಾನದಲ್ಲಿನ ಬೇಡಿಕೆ ಇರುವ ಅತ್ಯಂತ ರೋಮಾಂಚಕಾರಿ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಕೋರ್ಸ್‌ಗಳನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಆಕರ್ಷಕ ಜಾಬ್ ಆಫರ್ ಹುಡುಕಿಕೊಂಡು ಬರಲಿದೆ.
ವಿಶ್ವದ ಪ್ರಮುಖ ವಿವಿಗಳು
- ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Massachusetts Institute of Technology)
- ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ (Carnegie Mellon University)
- ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
- ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ (UCB)
- ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ (NTU), ಸಿಂಗಾಪುರ
- ಈ ಕ್ಷೇತ್ರಗಳಲ್ಲಿ ಯಾವ ವೃತ್ತಿ ಅವಕಾಶಗಳು ಲಭ್ಯವಿದೆ?
AI ನಿಂದ ಯಾವೆಲ್ಲ ಉದ್ಯೋಗ..?
- AI ಎಂಜಿನಿಯರ್
- ಮೆಷಿನ್ ಲರ್ನಿಂಗ್ ಎಂಜಿನಿಯರ್
ಡೇಟಾ ಸೈಂಟಿಸ್ಟ್
- AI ಸಂಶೋಧನಾ ವಿಜ್ಞಾನಿ
- AI ಸಲಹೆಗಾರ
ಡೇಟಾ ಸೈನ್ಸ್ ಅಧ್ಯಯನ ಮಾಡುವುದರಿಂದ ಡೇಟಾ ವಿಶ್ಲೇಷಕ, ಡೇಟಾ ಸೈಂಟಿಸ್ಟ್, ಮೆಷಿನ್ ಲರ್ನಿಂಗ್ ಎಂಜಿನಿಯರ್ ಮತ್ತು ಡೇಟಾ ಎಂಜಿನಿಯರ್‌ನಂತಹ ಅವಕಾಶಗಳು ಸಿಗಲಿದೆ.
ಇದನ್ನೂ ಓದಿ: ಲ್ಯಾಂಬೋರ್ಘಿನಿ ಕಾರಿನ ನಂಬರ್ ಪ್ಲೇಟ್ ಬೆಲೆ 46.24 ಲಕ್ಷ ರೂಪಾಯಿ.. ಈ ಸಂಖ್ಯೆ ಇದ್ರೆ ಇಷ್ಟೊಂದು ದುಬಾರಿನಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ