ಲ್ಯಾಂಬೋರ್ಗಿನಿ ಕಾರು ಆಕ್ಸಿಡೆಂಟ್​.. ಸ್ಟಾರ್ ಫುಟ್​ಬಾಲ್​ ಪ್ಲೇಯರ್​, ಸಹೋದರ ಇಬ್ಬರು ನಿಧನ

author-image
Bheemappa
Updated On
ಲ್ಯಾಂಬೋರ್ಗಿನಿ ಕಾರು ಆಕ್ಸಿಡೆಂಟ್​.. ಸ್ಟಾರ್ ಫುಟ್​ಬಾಲ್​ ಪ್ಲೇಯರ್​, ಸಹೋದರ ಇಬ್ಬರು ನಿಧನ
Advertisment
  • ಹೆಂಡತಿ, ಮೂವರು ಮಕ್ಕಳನ್ನ ಅಗಲಿರುವ ಫುಟ್​ಬಾಲ್​ ಪ್ಲೇಯರ್
  • ರಸ್ತೆ ಪಕ್ಕಕ್ಕೆ ಬಿದ್ದ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ
  • ಇತ್ತೀಚೆಗೆ ಮದುವೆಯಾಗಿದ್ದ ಸ್ಟಾರ್ ಫುಟ್​ಬಾಲ್ ಆಟಗಾರ ಇನ್ನಿಲ್ಲ

ಲಿವರ್‌ಪೂಲ್‌ ಫುಟ್​ಬಾಲ್​ ತಂಡದ ಸ್ಟಾರ್ ಆಟಗಾರ ಪೋರ್ಚುಗೀಸ್​ನ ಡಿಯೋಗೊ ಜೋಟಾ (Diogo Jota) ಹಾಗೂ ಇವರ ಸಹೋದರ ಆ್ಯಂಡ್ರೆ ಭೀಕರ ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಸ್ಪೇನ್‌ನ ಝಮೋರಾ (Zamora) ಬಳಿ ಈ ಘಟನೆ ನಡೆದಿದೆ.

ಲಿವರ್‌ಪೂಲ್‌ ಫುಟ್​ಬಾಲ್​ ತಂಡದ ಆಟಗಾರ ಡಿಯೋಗೊ ಜೋಟಾ (28) ಹಾಗೂ ಇವರ ಸಹೋದರ ಆ್ಯಂಡ್ರೆ ಸಿಲ್ವಾ (26) ಇಬ್ಬರು ಐಷಾರಾಮಿ ಕಾರು ಲ್ಯಾಂಬೋರ್ಗಿನಿಯಲ್ಲಿ ರಾತ್ರಿ 12:30ಕ್ಕೆ ತೆರಳುತ್ತಿದ್ದರು. ಈ ವೇಳೆ ಝಮೋರಾ ನಗರದ ರಸ್ತೆವೊಂದರ ಪಕ್ಕಕ್ಕೆ ಕಾರು ಬಿದ್ದಿದ್ದು ತಕ್ಷಣ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕಾರಿನಲ್ಲಿದ್ದ ಡಿಯೋಗೊ ಜೋಟಾ ಹಾಗೂ ಆ್ಯಂಡ್ರೆ ಇಬ್ಬರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಗೆಳೆಯನ ಕಾನ್​​ಸ್ಟೆಬಲ್​ ಸಮವಸ್ತ್ರ​ ಕದ್ದ.. 4 ರಾಜ್ಯದ 20ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಕಿರಾತಕ

publive-image

ಡಿಯೋಗೊ ಜೋಟಾ ಕಳೆದ ಜೂನ್​ ಅಲ್ಲಿ ತನ್ನ 10 ವರ್ಷದ ಗೆಳತಿಯನ್ನು ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಮದುವೆ ದಿನದಂದು ಅವರ ಹೆಂಡತಿ ರೂಟ್ ಕಾರ್ಡೋಸೊ (Rute Cardoso) ನನ್ನ ಕನಸು ನನಸಾಯಿತು ಎಂದು ಇನ್​ಸ್ಟಾದಲ್ಲಿ ಬರೆದು ಪೋಸ್ಟ್ ಹಂಚಿಕೊಂಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಹೆಂಡತಿ ಹಾಗೂ ಮೂವರು ಮಕ್ಕಳನ್ನ ಡಿಯೋಗೊ ಜೋಟಾ ಅಗಲಿದ್ದಾರೆ. ಜೋಟಾ ಬಗ್ಗೆ ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೊನಾಲ್ಡೊ ದುಃಖ ವ್ಯಕ್ತಪಡಿಸಿದ್ದು ಈಗಲೂ ಜೊತೆಯಲ್ಲೇ ಇದ್ದಾಗೆ ಇದ್ದೀಯಾ ಎಂದಿದ್ದಾರೆ.

ಪೋರ್ಚುಗೀಸ್​ನ ಪೋರ್ಟೋ ನಗರದಲ್ಲಿ ಡಿಯೋಗೊ ಜೋಟಾ ಜನಿಸಿದ್ದರು. 2016 ರಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್‌ಗೆ ತೆರಳುವ ಮೊದಲು ಪ್ಯಾಕೋಸ್ ಡಿ ಫೆರೀರಾ ಅವರ ಯೂತ್ ಶ್ರೇಣಿಯ ಮೂಲಕ ತನ್ನ ಫುಟ್ಬಾಲ್ ಪ್ರಯಾಣ ಪ್ರಾರಂಭಿಸಿದ್ದರು. ಸಣ್ಣ ವಯಸ್ಸಿನಲ್ಲೇ ಫುಟ್​ಬಾಲ್​ನಲ್ಲಿ ಅಚ್ಚರಿಯ ರೀತಿ ಬೆಳವಣಿಗೆ ಕಂಡಿದ್ದರು. ಲಿವರ್‌ಪೂಲ್‌ ಟೀಮ್​ನಲ್ಲಿ ತನ್ನ ಕ್ಲಬ್ ವೃತ್ತಿಜೀವನದ ಉತ್ತುಂಗವನ್ನು ಜೋಟಾ ತಲುಪಿದ್ದರು.

ಲಿವರ್‌ಪೂಲ್ ತಂಡದ ಹೊಸ ಮ್ಯಾನೇಜರ್ ಆರ್ನೆ ಸ್ಲಾಟ್ ಅವರ ಅಡಿ 2024/25ರ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಲಿವರ್‌ಪೂಲ್ ಯಶಸ್ವಿಯಾಗಿತ್ತು. ಈ ಟೂರ್ನಿಯಲ್ಲಿ ಡಿಯೋಗೊ ಜೋಟಾ ಅವರು ಅತ್ಯುನ್ನತ ಪ್ರದರ್ಶನ ನೀಡಿದ್ದರು. ಇದರಿಂದ ಅತಾರಾಷ್ಟ್ರೀಯ ಮಟ್ಟದಲ್ಲೂ ಜೋಟಾ ಉತ್ತಮ ಸಾಧನೆ ಮಾಡಿದರು. 2019 ಮತ್ತು 2025ರ UEFA ನೇಷನ್ಸ್ ಲೀಗ್‌ನಲ್ಲಿ ಪೋರ್ಚುಗಲ್‌ನ ವಿಜಯಶಾಲಿ ತಂಡಗಳಲ್ಲಿ ಡಿಯೋಗೊ ಜೋಟಾ ಭಾಗವಹಿಸಿ ಒಳ್ಳೆಯ ಆಟ ಆಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment