/newsfirstlive-kannada/media/post_attachments/wp-content/uploads/2024/06/LK_ADVANI.jpg)
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (ಎಲ್​.ಕೆ ಅಡ್ವಾಣಿ) ಅವರನ್ನು ತಡರಾತ್ರಿ ದೆಹಲಿಯ ಏಮ್ಸ್‌ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ.
ಎಲ್​.ಕೆ ಅಡ್ವಾಣಿಯವರಿಗೆ 96 ವರ್ಷವಾಗಿದ್ದು ಅನಾರೋಗ್ಯದಿಂದ ಬಳತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್​ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಯಾವುದೇ ಗಾಬರಿ ಪಡುವಂತಹದ್ದು ಏನೂ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 90 ಲಕ್ಷ ರೂಪಾಯಿ ಕದ್ದ ಯುವತಿ 1 ಲಕ್ಷ ದೇವರ ಹುಂಡಿಗೆ ಹಾಕಿ ಸಿಕ್ಕಿಬಿದ್ದಳು; ಇವಳ ಕಥೆ ಕೇಳಿದ ಪೊಲೀಸ್ರೇ ಶಾಕ್!
/newsfirstlive-kannada/media/post_attachments/wp-content/uploads/2024/06/LK_ADVANI_BHARATH_RATNA.jpg)
ಬಿಜೆಪಿಯ ಹಿರಿಯ ನಾಯಕರಾದ ಎಲ್​.ಕೆ ಅಡ್ವಾಣಿಯವರು ಮೊದಲಿನಿಂದ ಪಕ್ಷವನ್ನು ಬೆಳೆಸಿದವರು. ರಾಮಮಂದಿರಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕ. 2002 ರಿಂದ 2004ರವರೆಗೆ ಭಾರತದ ಉಪಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಇತ್ತೀಚೆಗಷ್ಟೇ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್​.ಕೆ ಅಡ್ವಾಣಿಯವರಿಗೆ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ವೇಳೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us