newsfirstkannada.com

ರಾಮ ಮಂದಿರ ನಿರ್ಮಾಣ ವಿಧಿ ಲಿಖಿತ.. ವಿಧಿಯು ಮೋದಿಯನ್ನು ಆಯ್ಕೆ ಮಾಡಿದೆ; ಎಲ್​​ ಕೆ ಅಡ್ವಾನಿ

Share :

Published January 13, 2024 at 8:47am

    ಜನವರಿ 22ರಂದು ರಾಮ ಮಂದಿರ ಉದ್ಘಾಟನೆ

    1990 ಸೆಪ್ಟೆಂಬರ್ 25ರಂದು ರಥಯಾತ್ರೆ ಪ್ರಾರಂಭ

    ಅಂದು ರಥಯಾತ್ರೆ ಸಾರಥಿಯಾಗಿದ್ದ ಎಲ್​ ಕೆ ಅಡ್ವಾನಿ

ರಾಮ ಮಂದಿರ ನಿರ್ಮಾಣವಾಗುವುದು ವಿಧಿ ಲಿಖಿತವೇ ಆಗಿತ್ತು, ವಿಧಿಯು ಅದಕ್ಕಾಗಿ ಪ್ರಧಾನಿ ಮೋದಿ ಅವ್ರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್​​ ಕೆ ಅಡ್ವಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕುರಿತು ಮಾತನಾಡಿದ ಅವರು, ಅಯೋಧ್ಯೆ ಚಳವಳಿಯು ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆಯ ಘಟನೆ. 1990 ಸೆಪ್ಟೆಂಬರ್ 25ರಂದು ಬೆಳಗ್ಗೆ ರಥಯಾತ್ರೆಯನ್ನು ಪ್ರಾರಂಭಿಸಿದಾಗ, ಈ ಯಾತ್ರೆಯು ಭಗವಾನ್ ರಾಮನ ಮೇಲಿನ ನಂಬಿಕೆಯು ದೇಶದಲ್ಲಿ ಒಂದು ಚಳವಳಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಆಗ ಮೋದಿ ಸಹ ಹೆಚ್ಚು ಪ್ರಸಿದ್ಧಿಯಾಗಿರಲಿಲ್ಲ. ರಥಯಾತ್ರೆ ಪ್ರಾರಂಭವಾದ ಕೆಲ ದಿನಗಳ ನಂತರ ಅದಕ್ಕೆ ನಾನು ಕೇವಲ ಸಾರಥಿ ಎಂಬುದನ್ನು ಅರಿತುಕೊಂಡೆ. ಒಂದಲ್ಲ ಒಂದು ದಿನ ಭವ್ಯ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ವಿಧಿಯೇ ನಿರ್ಧರಿಸಿದೆ ಎಂದು ಆ ಸಮಯದಲ್ಲಿ ನಾನು ಭಾವಿಸಿದ್ದೆ ಎಂದು ಸ್ಮರಿಸಿಕೊಂಡರು.

ಪ್ರಧಾನಿ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್​ ಕೆ ಆಡ್ವಾನಿ

ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕರಾದ ಎಲ್​ಕೆ ಅಡ್ವಾನಿಯವರನ್ನ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಅಡ್ವಾನಿಯವರು ರಾಮಲಲ್ಲಾ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆರ್‌ಎಸ್‌ಎಸ್ ಮುಖಂಡ ಕೃಷ್ಣ ಗೋಪಾಲ್ ಮತ್ತು ವಿಹೆಚ್​​ಪಿಯ ಅಲೋಕ್ ಕುಮಾರ್ ಅವರು ಅಡ್ವಾನಿಗೆ ಆಹ್ವಾನ ಪತ್ರ ನೀಡಿದ ಬಳಿಕ ಹಿರಿಯ ನಾಯಕರು ಭೇಟಿ ನೀಡುವ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಒದಗಿಸಲಾಗುವುದು ಎಂದು ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ನಿರ್ಮಾಣ ವಿಧಿ ಲಿಖಿತ.. ವಿಧಿಯು ಮೋದಿಯನ್ನು ಆಯ್ಕೆ ಮಾಡಿದೆ; ಎಲ್​​ ಕೆ ಅಡ್ವಾನಿ

https://newsfirstlive.com/wp-content/uploads/2024/01/L-K-Advani-2.jpg

Load More