newsfirstkannada.com

ಬಿಜೆಪಿಯ ಯಶಸ್ವಿ ನಾಯಕ ಅಡ್ವಾಣಿಗೆ ಪ್ರಧಾನಿ ಹುದ್ದೆ ದೂರವಾಗಿದ್ದು ಹೇಗೆ? ರಾಜಕೀಯ ಜೀವನ ಹೇಗಿತ್ತು?

Share :

Published February 3, 2024 at 3:09pm

  ದೇಶದಲ್ಲಿ ಬಿಜೆಪಿ ಎಂಬ ಭದ್ರಕೋಟೆ ಕಟ್ಟಿದ ಸಾರಥಿ ಅಡ್ವಾಣಿ

  ನರೇಂದ್ರ ಮೋದಿಯಿಂದ ‘ಭಾರತ ರತ್ನ’ ಪ್ರಶಸ್ತಿ ಘೋಷಣೆ

  ಉಪ ಪ್ರಧಾನಮಂತ್ರಿ ಆಗಿ ಸೇವೆ ಸಲ್ಲಿಸಿರುವ ಎಲ್​.ಕೆ ಅಡ್ವಾಣಿ

ಬಿಜೆಪಿಯ ಹಿರಿಯ ಮುತ್ಸದ್ದಿ ಎಲ್​.ಕೆ ಅಡ್ವಾಣಿಯವರಿಗೆ ದೇಶದ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಹಿರಿಯ ರಾಜಕಾರಣಿಯಾದ ಇವರು 1980ರ ದಶಕದಿಂದ ಬಿಜೆಪಿಯ ಬೆಳವಣಿಗೆಗೆ ಸತತವಾಗಿ ಶ್ರಮಿಸಿದವರು. ರಾಮಮಂದಿರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಡ್ವಾಣಿ, ದೀರ್ಘಾವಧಿಯವರೆಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು. ಭಾರತದ ಉಪ ಪ್ರಧಾನಮಂತ್ರಿ ಆಗಿ ಸೇವೆ ಸಲ್ಲಿಸಿರುವ ಇವರು, ಪ್ರಧಾನಿ ಹುದ್ದೆಗೆ ಏರಲಾಗಲಿಲ್ಲ ಎನ್ನುವ ನೋವು ಬೆಂಬಲಿಗರಲ್ಲಿದೆ. ಸದ್ಯ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ನೀಡಲಾಗುತ್ತಿದ್ದು ಅವರ ರಾಜಕೀಯ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳೊಣ.

1927 ನವೆಂಬರ್ 8 ರಂದು ಲಾಲ್ ಕೃಷ್ಣ ಅಡ್ವಾಣಿಯವರು ಸಿಂಧಿ ಹಿಂದೂ ಕುಟುಂಬದಲ್ಲಿ ಬ್ರಿಟಿಷ್ ಇಂಡಿಯಾದ ಕರಾಚಿ (ಈಗಿನ ಪಾಕ್​ ರಾಜಧಾನಿ)ಯಲ್ಲಿ ಕಿಶನ್‌ಚಂದ್ ಡಿ.ಅಡ್ವಾಣಿ ಮತ್ತು ಜ್ಞಾನಿ ದೇವಿ ದಂಪತಿಗೆ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಕರಾಚಿಯಲ್ಲಿ ಮುಗಿಸಿದರು. ಭಾರತ ವಿಭಜನೆ ಸಮಯದಲ್ಲಿ ಬಾಂಬೆಗೆ ವಲಸೆ ಬಂದ ಇವರು, ಬಾಂಬೆ ವಿವಿಯಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡರು.

1965ರಲ್ಲಿ ಅಡ್ವಾಣಿಯವರು ಕಮಲಾ ಎನ್ನುವವರನ್ನು ಮದುವೆಯಾದರು. ಈ ದಂಪತಿಗೆ ಜಯಂತ್ ಮತ್ತು ಪ್ರತಿಭಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಪ್ರತಿಭಾ ಟೆಲಿವಿಸನ್ ನಿರ್ಮಾಪಕಿ ಆಗುವುದರ ಜೊತೆಗೆ ತಂದೆಗೆ ರಾಜಕೀಯ ಚಟುವಟಿಕೆಗಳನ್ನ ಬೆಂಬಲಿಸುತ್ತಿದ್ದರು.

RSS ಸಂಘಟನೆಗೆ 14ನೇ ವಯಸ್ಸಿನಲ್ಲೇ ಸೇರಿಕೊಂಡರು

1941ರಲ್ಲಿ ತಮ್ಮ 14ನೇ ವಯಸ್ಸಿನಲ್ಲೇ ಅಡ್ವಾಣಿಯವರು RSS ಸಂಘಟನೆಗೆ ಸೇರಿಕೊಂಡು ಕರಾಚಿ ಘಟಕಕ್ಕೆ ಕಾರ್ಯದರ್ಶಿ ಆಗಿದ್ದರು. ಭಾರತದ ವಿಭಜನೆಯಾದ ಮೇಲೆ ರಾಜಸ್ಥಾನದಲ್ಲಿ ಸಂಘದ ಪ್ರಚಾರಕರಾಗಿ ದುಡಿದರು. 1951ರಲ್ಲಿ RSS ಸಹಯೋಗದಿಂದ ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ರಾಜಕೀಯ ಪಕ್ಷ ಭಾರತೀಯ ಜನಸಂಘ (BJS)ಕ್ಕೆ ಅಡ್ವಾಣಿ ಸದಸ್ಯರಾದರು. 1967ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ ಚುನಾವಣೆಯಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿ 3 ವರ್ಷ ಸೇವೆ ಸಲ್ಲಿಸಿದರು. ಬಳಿಕ ರಾಜ್ಯಸಭಾ ಸದಸ್ಯರಾಗಿ 1970ರಲ್ಲಿ ಆಯ್ಕೆಯಾಗಿ 6 ವರ್ಷ ಅಧಿಕಾರ ನಿರ್ವಹಿಸಿದರು. 1973ರಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಕಾನ್ಪುರ ಅಧಿವೇಶನದಲ್ಲಿ ಅವರು ಬಿಜೆಎಸ್ ಅಧ್ಯಕ್ಷರಾಗಿ ಆಯ್ಕೆಯಾದರು. 1976ರ ಬಳಿಕ 2ನೇ ಬಾರಿ ರಾಜ್ಯಸಭೆಗೆ ಆಯ್ಕೆಗೊಂಡರು.

ತುರ್ತು ಪರಿಸ್ಥಿತಿ ಸಮಯದಲ್ಲಿ ಪ್ರಧಾನಿ ಇಂದಿರಾ ಗಾಂಧಿ ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದ್ದಾಗ ವಿರೋಧ ವ್ಯಕ್ತಪಡಿಸಿ ವಿಪಕ್ಷಗಳು ಒಗ್ಗೂಡಲು ಅಡ್ವಾಣಿ ಶ್ರಮಿಸಿದರು. ತುರ್ತು ಪರಿಸ್ಥಿತಿಯಿಂದಾಗಿ 1977ರ ಚುನಾವಣೆಯಲ್ಲಿ ಜನತಾ ಪಕ್ಷವು ಭರ್ಜರಿ ಜಯ ಸಾಧಿಸಿತು. ಹೀಗಾಗಿ ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾದರು. ಇವರ ಸಂಪುಟದಲ್ಲಿ ಅಡ್ವಾಣಿಯವರು ಮಾಹಿತಿ ಮತ್ತು ಪ್ರಸಾರ ಸಚಿವರಾದರು. ಈ ಸರ್ಕಾರ 5 ವರ್ಷಗಳ ಕಾಲ ಇರಲಿಲ್ಲ, ಬಹುಬೇಗನೇ ಪತನಗೊಂಡಿತು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದ್ದರಿಂದ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅಡ್ವಾಣಿಯವರು ಅಧಿಕಾರ ವಹಿಸಿಕೊಂಡರು.

ಅಡ್ವಾಣಿಯವರು 1980ರಲ್ಲಿ ಬಿಜೆಎಸ್ ಪಕ್ಷ ಬಿಟ್ಟು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯನ್ನು ಸೇರಿಕೊಂಡರು. ಆಗ ಬಿಜೆಪಿಗೆ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷರಾಗಿದ್ದರು. 1984ರ ಲೋಕಸಭಾ ಎಲೆಕ್ಷನ್​ನಲ್ಲಿ ಬಿಜೆಪಿ ಕೇವಲ 2 ಸ್ಥಾನ ಮಾತ್ರ ಗೆದ್ದಿತ್ತು. ಇದರಿಂದ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಅಡ್ವಾಣಿ ನೇಮಕಗೊಂಡರು. ಇಲ್ಲಿಂದ ಬಿಜೆಪಿ ಹಿಂದುತ್ವದ ಸಿದ್ಧಾಂತಕ್ಕೆ ತಿರುಗಿತು. ಅಡ್ವಾಣಿಯವರ ನೇತೃತ್ವದಲ್ಲಿ ಅಯೋಧ್ಯೆ ಹೋರಾಟವನ್ನು ವಿಹೆಚ್‌ಪಿ ಪ್ರಾರಂಭಿಸಿತು. ಇಲ್ಲಿಂದಲೇ ರಾಮನ ಮರು ಸ್ಥಾಪನೆಗೆ ಪಣ ತೊಟ್ಟಿದ್ದ ಅಡ್ವಾಣಿ, ಸ್ವಯಂ ಸೇವಕರನ್ನು ಸಜ್ಜುಗೊಳಿಸಲು ‘ರಾಮರಥ ಯಾತ್ರಾ’ ಕೈಗೊಂಡು ಯಶಸ್ವಿಯಾದರು.

ಅಡ್ವಾಣಿಗೆ ಪ್ರಧಾನಿ ಹುದ್ದೆ ಕೈತಪ್ಪಿದ್ದು ಹೇಗೆ?

ಈ ಯಾತ್ರೆಯಿಂದ 1991ರ ಎಲೆಕ್ಷನ್​ನಲ್ಲಿ ಬಿಜೆಪಿ 2ನೇ ದೊಡ್ಡ ಪಾರ್ಟಿಯಾಗಿ ಗುರುತಿಸಿಕೊಂಡಿತು. ಅಡ್ವಾಣಿ ಗಾಂಧಿನಗರದಿಂದ ಗೆಲುವು ಸಾಧಿಸಿ ಮತ್ತೊಮ್ಮೆ ವಿಪಕ್ಷ ನಾಯಕರಾಗಿ ಆಯ್ಕೆಯಾದರು. ಇದೇ ವೇಳೆ ಬಾಬ್ರಿ ಮಸೀದಿ ಧ್ವಂಸಗೊಳಿಸಲಾಯಿತು. ಬಳಿಕ 1996ರಲ್ಲಿ ನಡೆದ ಎಲೆಕ್ಷನ್​​ನಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಅಡ್ವಾಣಿಯವರು ಹವಾಲಾ ಹಗರಣ ಆರೋಪದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಇದರಿಂದ ಪ್ರಧಾನಿ ಹುದ್ದೆ ಕೈತಪ್ಪಿತು. ವಾಜಪೇಯಿಯವರು 1996 ಮೇನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.

ಹಿಂದೆ ಸರಿದ AIADMK ನಾಯಕಿ ಜೆ ಜಯಲಲಿತಾ

1998ರಲ್ಲೂ ಬಿಜೆಪಿ-ಎನ್​ಡಿಎ ಅಧಿಕಾರಕ್ಕೆ ಬಂದಿದ್ದರಿಂದ ಮತ್ತೆ ವಾಜಪೇಯಿ ಪ್ರಧಾನಿಯಾದರು. ಇವರ ಸಂಪುಟದಲ್ಲಿ ಅಡ್ವಾಣಿಯವರು ಕೇಂದ್ರ ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಬಳಿಕ ತಮಿಳುನಾಡಿನ AIADMK ನಾಯಕಿ ಜೆ ಜಯಲಲಿತಾ ಅವರು ಮೈತ್ರಿಯಿಂದ ಹೊರ ಬಂದಿದ್ದರಿಂದ ಸರ್ಕಾರ ಪತನಗೊಂಡಿತು. ಮರು ಎಲೆಕ್ಷನ್​​ನಲ್ಲಿ ಮತ್ತೆ ಬಿಜೆಪಿ-ಎನ್​ಡಿಎ ಗೆಲುವು ಸಾಧಿಸಿತು. ಗಾಂಧಿನಗರದಿಂದ 4ನೇ ಬಾರಿಗೆ ಅಡ್ವಾಣಿ ಗೆದ್ದು ಗೃಹಮಂತ್ರಿ ಜೊತೆಗೆ 2002ರಲ್ಲಿ ಉಪಪ್ರಧಾನಿಯಾಗಿ ಕೂಡ ಸೇವೆ ಸಲ್ಲಿಸಿದರು.

ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಅಡ್ವಾಣಿ

2004ರ ಎಲೆಕ್ಷನ್​​ನಲ್ಲಿ ಬಿಜೆಪಿ ಸೋತು ಹೋಗಿದ್ದರಿಂದ ವಾಜಪೇಯಿ ರಾಜಕಾರಣದಿಂದ ನಿವೃತ್ತಿ ಪಡೆದುಕೊಂಡರು. ಹೀಗಾಗಿ ಅಡ್ವಾಣಿ ವಿಪಕ್ಷ ನಾಯಕರಾಗುವುದರ ಜೊತೆಗೆ ಪಕ್ಷ ಕಟ್ಟುವ ದೊಡ್ಡ ಜವಾಬ್ದಾರಿ ಅವರ ಹೆಗಲೇರಿತು. 2005ರಲ್ಲಿ ಪಕ್ಷದ ಸಿಲ್ವರ್ ಜುಬ್ಲೀ ಸಲೆಬ್ರೆಷನ್ ಅನ್ನು ಮುಂಬೈನಲ್ಲಿ ಆಯೋಜನೆ ಮಾಡಿದಾಗ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಡ್ವಾಣಿ ಕೆಳಗಿಳಿದರು. 2006 ಮಾರ್ಚ್​​​ನಲ್ಲಿ ವಾರಣಾಸಿಯ ದೇವಾಲಯದಲ್ಲಿ ಬಾಂಬ್ ಬ್ಲಾಸ್ಟ್​ ಮಾಡಿದಾಗ ಭಾರತ್ ಸುರಕ್ಷಾ ಯಾತ್ರಾ ಕೈಗೊಂಡು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದ ಮಹಾನ್ ನಾಯಕ ಅಡ್ವಾಣಿಯವರು.

2014ರಲ್ಲಿ ಬಿಜೆಪಿ ಗೆದ್ದರೂ ಅಡ್ವಾಣಿ ಪ್ರಧಾನಿಯಾಗಲಿಲ್ಲ

2009ರ ಲೋಕಸಭಾ ಎಲೆಕ್ಷನ್​​ನಲ್ಲಿ ಅಡ್ವಾಣಿಯರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈ ಎಲೆಕ್ಷನ್​ನಲ್ಲಿ ಕಾಂಗ್ರೆಸ್​ ಜಯ ಸಾಧಿಸಿದ್ದರಿಂದ ಅಡ್ವಾಣಿಯವರಿಗೆ ಪ್ರಧಾನಿ ಹುದ್ದೆ ಮರಿಚೀಕೆ ಆಯಿತು. 6ನೇ ಬಾರಿ ಚುನಾವಣೆಯಲ್ಲಿ ಗೆದ್ದರೂ ಅಡ್ವಾಣಿಯವರು ವಿಪಕ್ಷ ಸ್ಥಾನವನ್ನು ಸುಷ್ಮಾ ಸ್ವರಾಜ್ ಅವರಿಗೆ ಬಿಟ್ಟುಕೊಟ್ಟರು. 2014ರಲ್ಲಿ ಲೋಕಸಭಾ ಎಲೆಕ್ಷನ್​ನಲ್ಲಿ ಬಿಜೆಪಿ ಬಹುಮತ ಸಾಧಿಸಿತು. ಗಾಂಧಿನಗರದಿಂದ ಎಲ್​​.ಕೆ ಅಡ್ವಾಣಿಯವರು ಗೆಲುವು ಪಡೆದರು. ಆದರೆ ಪ್ರಧಾನಿಯಾಗಿ ಮೋದಿ ಆಯ್ಕೆಯಾಗಿದ್ದರಿಂದ ಬಿಜೆಪಿಯ ಮಾರ್ಗ ದರ್ಶನ ಸಮಿತಿಯಲ್ಲಿ ಉಳಿದರು. ಹೀಗೆ ಅಡ್ವಾಣಿಯವರಿಗೆ ಎಲ್ಲ ಹಂತದಲ್ಲೂ ಪ್ರಧಾನಿ ಹುದ್ದೆ ಕೈ ತಪ್ಪುತ್ತಾ ಬಂದಿತು. ಸದ್ಯ ಮೋದಿಯವರೇ ಅಡ್ವಾಣಿಯವರಿಗೆ ಪ್ರತಿಷ್ಠಿತ ಭಾರತರತ್ನ ಘೋಷಣೆ ಮಾಡಿದ್ದಾರೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯ ಯಶಸ್ವಿ ನಾಯಕ ಅಡ್ವಾಣಿಗೆ ಪ್ರಧಾನಿ ಹುದ್ದೆ ದೂರವಾಗಿದ್ದು ಹೇಗೆ? ರಾಜಕೀಯ ಜೀವನ ಹೇಗಿತ್ತು?

https://newsfirstlive.com/wp-content/uploads/2024/02/MODI-47.jpg

Load More