/newsfirstlive-kannada/media/post_attachments/wp-content/uploads/2025/04/Madhu-Bangarappa-On-1st-standard-age.jpg)
ಈ ಬಾರಿ ಮಕ್ಕಳನ್ನು LKG, 1ನೇ ತರಗತಿಗೆ ಅಡ್ಮಿಷನ್ ಮಾಡುವ ಪೋಷಕರು ಫುಲ್ ಟೆನ್ಷನ್‌ನಲ್ಲಿ ಇದ್ದರು. ಇದಕ್ಕೆ ಕಾರಣ ಒಂದನೇ ತರಗತಿ ಮಕ್ಕಳಿಗೆ 2025 ಜೂನ್ 1ಕ್ಕೆ 6 ವರ್ಷ ಕಡ್ಡಾಯವಾಗಿರಬೇಕು ಅನ್ನೋ ನಿಯಮ. ಇದೀಗ ಶಾಲಾ ವಯೋಮಿತಿಯನ್ನ ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸುದ್ದಿಗೋಷ್ಟಿ ನಡೆಸಿ 1ನೇ ತರಗತಿ ಅಡ್ಮಿಷನ್‌ಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. SEP (ಸ್ಟೇಟ್ ಎಜುಕೇಶನ್ ಪಾಲಿಸಿ) ವರದಿ ಆಧಾರದ ಮೇಲೆ ಕಡ್ಡಾಯ 6 ವರ್ಷ ವಯೋಮಿತಿಯಲ್ಲಿ ಬದಲಾವಣೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: 1ನೇ ತರಗತಿ ಮಕ್ಕಳಿಗೆ ಅಡ್ಮಿಷನ್ ಗೊಂದಲ.. ಶಿಕ್ಷಣ ಸಚಿವರಿಂದ ಇಂದು ಗುಡ್‌ನ್ಯೂಸ್?
ಈ ವರ್ಷ ಹಿಂದಿನ ನಿಯಮ ಪಾಲನೆ!
ಮಕ್ಕಳ 1ನೇ ತರಗತಿ ಸೇರ್ಪಡೆಗೆ ಈ ವರ್ಷ ಈ ಹಿಂದಿನ ನಿಯಮ ಪಾಲನೆ ಮಾಡಲಾಗುತ್ತಿದೆ. ಅಂದ್ರೆ 5 ವರ್ಷ 5 ತಿಂಗಳು ಇರುವ ಮಕ್ಕಳಿಗೆ ಈ ವರ್ಷ 1ನೇ ತರಗತಿ ನೋಂದಣಿಗೆ ಅವಕಾಶ ಮಾಡಲಾಗುತ್ತಿದೆ.
1ನೇ ತರಗತಿಯ ಅಡ್ಮಿಷನ್ ಜೊತೆಗೆ LKG ಪ್ರವೇಶ ಪಡೆಯುವ ಮಕ್ಕಳಿಗೆ 4 ವರ್ಷ ವಯೋಮಿತಿ ನಿಗದಿಪಡಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ