Advertisment

VIDEO: ಸಿದ್ದರಾಮಯ್ಯಗೆ ಫ್ರೀ ಬಸ್​ ಟಿಕೆಟ್​ ಹಾರ ಹಾಕಿದ ವಿದ್ಯಾರ್ಥಿನಿ; ಸಿಎಂ ಫುಲ್​ ಖುಷ್

author-image
Veena Gangani
Updated On
VIDEO: ಸಿದ್ದರಾಮಯ್ಯಗೆ ಫ್ರೀ ಬಸ್​ ಟಿಕೆಟ್​ ಹಾರ ಹಾಕಿದ ವಿದ್ಯಾರ್ಥಿನಿ; ಸಿಎಂ ಫುಲ್​ ಖುಷ್
Advertisment
  • ವಿದ್ಯಾರ್ಥಿನಿಯ ನೂತನ ಕೌಶಲ್ಯಕ್ಕೆ ಮೂಕ ವಿಸ್ಮಿತರಾಗಿ ನೋಡಿದ ಸಿಎಂ ಸಿದ್ದರಾಮಯ್ಯ
  • ಫ್ರೀ ಬಸ್ ಟಿಕೆಟ್​ಗಳಿಂದ ಹಾರ ಮಾಡಿ ಸಿಎಂ ಸಿದ್ದರಾಮಯ್ಯ ಹಾಕಿದ ವಿದ್ಯಾರ್ಥಿನಿ
  • ನಿಮಗೆ ಹಾಕುವುದಕ್ಕಾಗಿ ತಿಂಗಳುಗಳಿಂದ ಈ ಅವಕಾಶಕ್ಕಾಗಿ ಕಾಯುತ್ತಿದ್ದೆ- ಜಯಶ್ರೀ

ಹಾಸನ: ವಿದ್ಯಾರ್ಥಿನಿಯೊಬ್ಬರು ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್​ಗಳಿಂದ ಮಾಡಿದ್ದ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಪಣೆ ಮಾಡಿದ್ದಾಳೆ.

Advertisment

publive-image

ಇದನ್ನೂ ಓದಿ:BREAKING: ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ; ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಎ.ಜಯಶ್ರೀ ತಾವು ಶಕ್ತಿ ಯೋಜನೆ ಅಡಿಯಲ್ಲಿ ಬಸ್​ನಲ್ಲಿ ಉಚಿತವಾಗಿ ಪ್ರಯಾಣ ಬೆಳಸಿ ಸಂಗ್ರಹಿಸಿದ್ದ ಟಿಕೆಟ್​ಗಳಿಂದ ವಿಶೇಷವಾದ ಹಾರವನ್ನು ರೆಡಿ ಮಾಡಿ ಇಟ್ಟುಕೊಂಡಿದ್ದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೇಯಸ್ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಅವರು ಫ್ರೀ ಟಿಕೆಟ್ ಹಾರವನ್ನು ಅರ್ಪಿಸಿದರು.

Advertisment

ಮುಖ್ಯಮಂತ್ರಿಗಳಿಗೆ ಹಾರ ಅರ್ಪಿಸಿದ ವಿದ್ಯಾರ್ಥಿನಿ ಜಯಶ್ರೀ, ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಫ್ರೀ ಟಿಕೆಟ್​ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ. ನಿಮಗೆ ಅರ್ಪಿಸುವುದಕ್ಕೆ ತಿಂಗಳುಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇವತ್ತು ಅರಸೀಕೆರೆಗೆ ಬರ್ತಾ ಇದ್ದೀರಿ ಅಂತ ಗೊತ್ತಾಯ್ತು. ಒಂದೇ ಉಸಿರಲ್ಲಿ ಹಾರ ಹಿಡ್ಕೊಂಡು ಓಡಿ ಬಂದಿದ್ದೇನೆ ಎನ್ನುತ್ತಾ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment