/newsfirstlive-kannada/media/post_attachments/wp-content/uploads/2025/05/kamikaze-drones.jpg)
ಆಪರೇಷನ್ ಸಿಂಧೂರ ಮೂಲಕ ಭಾರತ ಪಹಲ್ಗಾಮ್ ದಾಳಿಯ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿ ಭಾರತೀಯ ಸೇನೆ ಧ್ವಂಸ ಮಾಡಿದೆ.
ಈ ವಿಶೇಷ ಕಾರ್ಯಾಚರಣೆಯನ್ನು ಭೂಸೇನೆ ಮತ್ತು ವಾಯು ಸೇನೆಗಳು ಜಂಟಿಯಾಗಿ ನಡೆಸಿದವು. 25 ನಿಮಿಷಗಳ ಕಾಲ ನಡೆದ ರೋಚಕ ದಾಳಿಯಲ್ಲಿ 9 ಉಗ್ರರ ಪ್ರಮುಖ ಅಡಗುತಾಣಗಳನ್ನು ಉಡಾಯಿಸಿದ್ದು, ಅಲ್ಲದೇ 21 ಉಗ್ರರ ನೆಲೆಗಳ ಮೇಲೂ ಭೀಕರ ದಾಳಿ ಆಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿಡಿರುವ ಮಾಹಿತಿ ಪ್ರಕಾರ ಸುಮಾರು 100ಕ್ಕೂ ಹೆಚ್ಚು ಉಗ್ರರು ಜೀವಬಿಟ್ಟಿದ್ದಾರೆ.
ಇದನ್ನೂ ಓದಿ: ಎಲ್ಲಾ ಪೀಸ್ ಪೀಸ್..! ಮುರಿದುಬಿದ್ದ ಭಯದ ಮನೆಗಳು.. ಎಲ್ಲೆಲ್ಲೂ ಸ್ಮಶಾನ ಗಾಬರಿ..!
ಅಂದ್ಹಾಗೆ ಸೇನೆಯು.. ಉಗ್ರರ ನೆಲೆ ಮೇಲೆ ಬಂಕರ್ ನಾಶ ಮಾಡುವ ಸ್ಕ್ಯಾಲ್ಪ್ ಮಿಸೈಲ್, ಹ್ಯಾಮರ್ ಬಾಂಬ್ ಹಾಗೂ ಆ್ಯಂಟಿ ಟೆರರ್ ಡ್ರೋಣ್ (ಕಮಿಕಝ ಆತ್ಮಾಹುತಿ ಡ್ರೋಣ್: Kamikaze drone) ಬಳಸಿದೆ. ವಿಶೇಷ ಅಂದರೆ ಈ ದೇಸಿ ಸೂಸೈಡ್ ಡ್ರೋಣ್ ಮೇಡ್ ಇನ್ ಬೆಂಗಳೂರು. ದೇಸಿ ಸೂಸೈಡ್ ಡ್ರೋಣ್ಗಳ ಮೂಲಕವೂ ಉಗ್ರರ ಮೇಲೆ ದಾಳಿ ಆಗಿದೆ. 5 ಕೆಜಿ ವಾರ್ ಹೆಡ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಇವು ಹೊಂದಿವೆ. 2021ರಲ್ಲಿ ಭಾರತದ ಸೇನೆಗೆ 100 ಆ್ಯಂಟಿ ಟೆರರ್ ಡ್ರೋಣ್ಗಳನ್ನು ಸೇರ್ಪಡೆ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದ ಸೊಸೆಗೆ ನಾಟಿ ಕೋಳಿ, ರೊಟ್ಟಿ ಅಂದರೆ ಬಹಳ ಇಷ್ಟ; ಖುರೇಷಿ ಬಗ್ಗೆ ಮಾವ ಹೆಮ್ಮೆಯ ಮಾತು..
ಇದೊಂದು ರೀತಿಯ ಹಾರಾಡುವ ಆತ್ಮಾಹುತಿ ಡ್ರೋಣ್ ಬಾಂಬ್ ಆಗಿದೆ. ಇವುಗಳನ್ನು ಕಣ್ಗಾವಲು ಮತ್ತು ದಾಳಿಯನ್ನು ಗುರುತಿಸಲು ಗುರಿ ನಿರ್ದೇಶಿತ ದಾಳಿಗಳ ಮೇಲೆ ಬಳಸಲಾಗುತ್ತದೆ. ಇದೊಂದು ಅತ್ಯಾಧುನಿಕ ಮಾನವರಹಿತ ಅಸ್ತ್ರ. ಶತ್ರುಗಳ ಕ್ಷೇತ್ರದಲ್ಲಿ ಸುತ್ತಾಡುವ ಈ ಡ್ರೋಣ್, ತನ್ನ ಗುರಿ ತಲುಪುತ್ತಿದ್ದಂತೆಯೇ ಆತ್ಮಾಹುತಿ ಮಾಡಿಕೊಳ್ಳುತ್ತದೆ. ಇದು ಬರೋಬ್ಬರಿ ಸಾವಿರ ಕಿಲೋ ಮೀಟರ್ ದೂರ ಹಾರುವ ಸಾಮರ್ಥ್ಯವನ್ನು ಹೊಂದಿದೆ.
Bengaluru made suicide drones destroyed terror hubs in Pakistan.#OperationSindoorpic.twitter.com/bbZFU4KqSO
— P C Mohan (@PCMohanMP)
Bengaluru made suicide drones destroyed terror hubs in Pakistan.#OperationSindoorpic.twitter.com/bbZFU4KqSO
— P C Mohan (@PCMohanMP) May 8, 2025
">May 8, 2025
ರಷ್ಯಾ-ಉಕ್ರೇನ್ ಹಾಗೂ ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಸಂದರ್ಭದಲ್ಲಿ ಈ ಅಸ್ತ್ರವನ್ನು ಹೆಚ್ಚಾಗಿ ಪ್ರಯೋಗಿಸಲಾಗಿದೆ. ಭಾರತದ ಬೆಂಗಳೂರಿನಲ್ಲೂ ಈ ಡ್ರೋಣ್ ಉತ್ಪಾದಿಸುವ ಘಟಕ ಇದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದು ಇಸ್ರೇಲ್ ಸಂಸ್ಥೆಯ ಜೊತೆಗೂಡಿ Kamikaze drone ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಇಸ್ರೇಲ್ ಸಂಸ್ಥೆ ಕೈಜೋಡಿಸಿದ್ದರೂ, ಸಂಪೂರ್ಣವಾಗಿ ದೇಸಿಯವಾಗಿ ತಯಾರಿಸಲಾಗುತ್ತಿದೆ.
ಇದನ್ನೂ ಓದಿ: ಸಿಂಧೂರಕ್ಕೆ ಉದುರಿಬಿದ್ದ ಪಾಕಿಸ್ತಾನ.. ಸಚಿವ ಜಮೀರ್ ಅಹ್ಮದ್ರಿಂದ ಮಹತ್ವದ ಆದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ