newsfirstkannada.com

Lok Sabha Election 2024: ಕರ್ನಾಟಕದ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ? ಇವರ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published April 26, 2024 at 11:16am

  ದೇಶದಲ್ಲಿಂದು 2ನೇ ಹಂತ, ರಾಜ್ಯದಲ್ಲಿ ಮೊದಲ ಹಂತದ ಮತದಾನ

  ಕರ್ನಾಟಕದಲ್ಲಿ 2ನೇ ಹಂತದ ಮತದಾನ ಮೇ 7ರಂದು ನಡೆಯಲಿಕ್ಕಿದೆ

  ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಕರ್ನಾಟಕ ಶ್ರೀಮಂತ ಅಭ್ಯರ್ಥಿಗಳು ಇವರು

ದೇಶದಲ್ಲಿ ಇಂದು 2ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಇದಾಗಿದೆ. ರಾಜ್ಯದ 14 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಈಗಾಗಲೇ ಅನೇಕರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಹಲವರು ಮತದಾನ ಮಾಡಲು ಬಾಕಿ ಉಳಿದಿದ್ದಾರೆ. ಆದರೆ ಮತ ಚಲಾಯಿಸಲು ಸಂಜೆಯ ತನಕ ಅವಕಾಶವಿದೆ.

ಕರ್ನಾಟಕದಲ್ಲಿ 2ನೇ ಹಂತದ ಮತದಾನ ಮೇ 7ರಂದು ನಡೆಯಲಿಕ್ಕಿದೆ. ಆದರೆ ಅದಕ್ಕೂ ಮುನ್ನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಶ್ರೀಮಂತ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ. ಅದರಲ್ಲಿ ಮೊದಲಿಗರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕರ್ನಾಟಕ ಕಾಂಗ್ರೆಸ್​ ನಾಯಕ ವೆಂಕಟರಾಮನೆ ಗೌಡ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ 2ನೇ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂದಹಾಗೆಯೇ ವೆಂಕಟರಾಮನೆ ಗೌಡ ‘ ಸ್ಟಾರ್​ ಚಂದ್ರು’ ಎಂದೇ ಖ್ಯಾತಿ ಪಡೆದಿದ್ದಾರೆ. ಸ್ಟಾರ್​ ಚಂದ್ರು ಸುಮಾರು 622 ಕೋಟಿ ಆಸ್ತಿಯನ್ನು ಹೊಂದುವ ಮೂಲಕ 2ನೇ ಹಂತದಲ್ಲಿ ಶ್ರೀಮಂತ್ರ ಅಭ್ಯರ್ಥಿಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಮಾಜಿ ಸಿಎಂ ಎಚ್​ಡಿ ಕುಮಾರ ಸ್ವಾಮಿ ವಿರುದ್ಧ ಈ ಬಾರಿ ಸ್ಪರ್ಧಿಸುತ್ತಿದ್ದಾರೆ.
ಡಿ.ಕೆ ಸುರೇಶ್​ 2ನೇ ಶ್ರೀಮಂತ ಅಭ್ಯರ್ಥಿ ಎಂದೆನಿಸಿಕೊಂಡಿದ್ದಾರೆ. ಇವರ ಆಸ್ತಿ 593 ಕೋಟಿ ರೂಪಾಯಿಯಾಗಿದೆ. ಅಂದಹಾಗೆಯೇ ಸುರೇಶ್ ಅವರ ಸಹೋದರ ಡಿ.ಕೆ ಶಿವಕುಮಾರ್​ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿಯಾಗಿರುವ ಸುರೇಶ್​​ ಮೂರು ಬಾರಿ ಸಂಸದರಾಗಿದ್ದಾರೆ. ಚುನಾವಣಾ ಅಫಿಡವಿಟ್​ ಪ್ರಕಾರ, 16.61 ಕೋಟಿ ರೂಪಾಯಿಯನ್ನು ಇವರು ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದಾರೆ. 32.76 ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. 210.47 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇವರ ಬಳಿಯಿದೆ. 211 ಕೋಟಿ ಮೌಲ್ಯದ 9 ವಾಣಿಜ್ಯ ಕಟ್ಟಡ ಮತ್ತು 27.13 ಕೋಟಿ ಮೌಲ್ಯದ ಮೂರು ವಸತಿ ಕಟ್ಟಡವನ್ನು ಹೊಂದಿದ್ದಾರೆ.
ಬಿಜೆಪಿ ಸಂಸದೆ ಹೇಮಾ ಮಾಲಿನಿ ಮಥುರಾ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇವರು ಮೂರನೇ ಶ್ರೀಮಂತ ಲೋಕಸಭಾ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಆಸ್ತಿ ಮೌಲ್ಯ 278 ಕೋಟಿ ರೂಪಾಯಿ.
ಮಧ್ಯ ಪ್ರದೇಶದ ಕಾಂಗ್ರೆಸ್​​ ನಾಯಕ ಸಂಜಯ್​​ ಶರ್ಮಾ 4ನೇ ಶ್ರೀಮಂತ ಅಭ್ಯರ್ಥಿ. ಇವರು ತನ್ನ ಬಳಿ 232 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 5ನೇ ಶ್ರೀಮಂತ್ರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸುಮಾರು 217.21 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ 2ನೇ ಹಂತದಲ್ಲಿ ಮಂಡ್ಯದಿಂದ ಸ್ಪರ್ಧಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Election 2024: ಕರ್ನಾಟಕದ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ? ಇವರ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/04/Loksabha-Election-2024.jpg

Load More