newsfirstkannada.com

ರಾಜ್ಯದ 6 ಕ್ಷೇತ್ರಗಳಲ್ಲಿ ಹೈ-ವೋಲ್ಟೇಜ್ ಕದನ ಫಿಕ್ಸ್; ಹುರಿಯಾಳುಗಳೂ ರೆಡಿ, ಎಲ್ಲೆಲ್ಲಿ ಟಫ್ ಫೈಟ್..?

Share :

Published March 14, 2024 at 7:26am

    ಬಿಜೆಪಿಯ 2ನೇ ಲಿಸ್ಟ್​ ಬಿಡುಗಡೆ ಬೆನ್ನಲ್ಲೇ ರಂಗೇರಿದ ಎಲೆಕ್ಷನ್

    ಅಖಾಡದ ನೇರ ಸ್ಪರ್ಧಿಗಳು ಬಹಿರಂಗ, ಇನ್ನೇನಿದ್ರೂ ಜಿದ್ದಾಜಿದ್ದಿ

    8 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್​ ಮಿಸ್, 6 ಹೊಸ ಮುಖ

ಬಿಜೆಪಿಯ ಎರಡನೇ ಲಿಸ್ಟ್​ ಬಿಡುಗಡೆಯಾಗಿದೆ. ಅಳೆದು ತೂಗಿ ಕೆಲವರಿಗೆ ಕೊಕ್ ಕೊಟ್ಟು ಹೊಸಬರಿಗೆ ಮಣೆ ಹಾಕಲಾಗಿದೆ. ಆಶ್ಚರ್ಯಕರ ರೀತಿಯಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕಿದ್ರೆ ಇನ್ನೂ ಕೆಲವರಿಗೆ ಮಿಸ್ ಆಗಿದೆ. ಈ ಪೈಕಿ ಎರಡೂ ಪಕ್ಷಗಳಿಂದ ಕೆಲವು ಕ್ಷೇತ್ರಗಳು ರಣರೋಚಕ ಅಖಾಡವಾಗಿ ಬದಲಾಗಿವೆ.

ಬಹುನಿರೀಕ್ಷಿತ ಲೋಕಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ಹಲವು ಹಾಲಿ ಸಂಸದರಿಗೆ ಟಿಕೆಟ್​ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಒಟ್ಟು 8 ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದ್ದು, 6 ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಘಟಾನುಘಟಿ ನಾಯಕರುಗಳಿಗೆ ಹೈಕಮಾಂಡ್​ ಬಿಗ್ ಶಾಕ್ ಕೊಟ್ಟಿದೆ. ಈ ನಡುವೆ ಕೆಲ ಕ್ಷೇತ್ರಗಳು ಹೈವೋಲ್ಟೇಜ್ ರಣಕಣಗಳಾಗಿ ಮಾರ್ಪಟ್ಟಿವೆ.

ಡಿ.ಕೆ ಸುರೇಶ್-ಕಾಂಗ್ರೆಸ್​ vs ಡಾ.ಸಿಎನ್​ ಮಂಜುನಾಥ್
ಈ ಬಾರಿ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಅಂದ್ರೆ ಬೆಂಗಳೂರು ಗ್ರಾಮಾಂತರ. ಕಾಂಗ್ರೆಸ್​ನಿಂದ ಡಿಕೆ ಸುರೇಶ್​ ಹಾಗೂ ಬಿಜೆಪಿ ಚಿಹ್ನೆಯಡಿ ಮೈತ್ರಿ ಅಭ್ಯರ್ಥಿಯಾಗಿ ಜಯದೇವ ಮಾಜಿ ನಿರ್ದೇಶಕ ಡಾ.ಸಿಎನ್​ ಮಂಜುನಾಥ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಅಖಾಡ ಭಾರೀ ಕುತೂಹಲ ಕೆರಳಿಸಿದೆ.

ಬಿವೈ ರಾಘವೇಂದ್ರ vs ಗೀತಾ ಶಿವರಾಜಕುಮಾರ್
ಈ ಬಾರೀ ಅತೀ ಹೆಚ್ಚು ಗಮನ ಸೆಳೆಯುವ ಮತ್ತೊಂದು ಕ್ಷೇತ್ರ ಅಂದ್ರೆ ಅದು ಶಿವಮೊಗ್ಗ. ಮಾಜಿ ಸಿಎಂ ಬಿಎಸ್​ವೈ ಪುತ್ರ ಬಿವೈ ರಾಘವೇಂದ್ರ ಕ್ಷೇತ್ರವಾಗಿರುವ ಇದೇ ಕ್ಷೇತ್ರದಲ್ಲಿ ಸದ್ಯ ದೊಡ್ಮನೆ ಸೊಸೆ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದ್ದು ಗಮನ ಸೆಳೆಯುತ್ತಿದೆ.

ಬಸವರಾಜ ಬೊಮ್ಮಾಯಿ vs ಅನಂತಸ್ವಾಮಿ ಗಡ್ಡೇದೇವರಮಠ
ಹಾವೇರಿಯಿಂದ ತನ್ನ ಮಗ ಕೆ ಕಾಂತೇಶ್​ಗಾಗಿ ಕೆ.ಎಸ್.ಈಶ್ವರಪ್ಪ ಟಿಕೆಟ್ ಕೇಳಿದ್ದರೂ ಬಿಜೆಪಿ ಹೈಕಮಾಂಡ್ ಯಾಕೋ ಮನಸ್ಸು ಮಾಡಿಲ್ಲ. ಬದಲಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಿದೆ. ಇದು ಈಶ್ವರಪ್ಪ ಅಸಮಾಧಾನಕ್ಕೆ ಕಾರಣವಾಗಿದ್ದು ಬಹಿರಂಗವಾಗಿಯೇ ಅದನ್ನು ಹೊರಹಾಕಿದ್ದಾರೆ. ಹೀಗಾಗಿ ಈ ಕ್ಷೇತ್ರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ.

ಮುದ್ದಹನುಮೇಗೌಡ vs ವಿ.ಸೋಮಣ್ಣ
ಈ ಬಾರಿ ತುಮಕೂರು ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಯಾಕಂದ್ರೆ ಸೋಮಣ್ಣ ಹಾಗೂ ಮುದ್ದಹನುಮೇಗೌಡ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದಾರೆ. ಆದ್ರೆ ಸದ್ಯ ಇವರೇ ಕಣದಲ್ಲಿ ಎದುರುಬದುರು ನಿಂತು ಹೋರಾಡಲಿದ್ದಾರೆ.

ಮೈಸೂರು-ಕೊಡಗು
ಇನ್ನು ಈ ಬಾರಿ ಪ್ರತಾಪ ಸಿಂಹಗೆ ಟಿಕೆಟ್ ಸಿಗದಿದ್ದಕ್ಕೆ ಭಾರೀ ಹೈವೋಲ್ಟೇಜ್ ಕ್ಷೇತ್ರವಾಗಿ ಮೈಸೂರು-ಕೊಡಗು ಗುರುತಿಸಿಕೊಂಡಿದೆ. ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಟಿಕೆಟ್ ಸಿಕ್ಕಿದ್ದು ಸದ್ಯ ಕುತೂಹಲ ಕೆರಳಿಸಿದೆ.

ಸ್ಟಾರ್ ಚಂದ್ರು vs ಸುಮಲತಾ ಅಂಬರೀಶ್/ಸಿಎಸ್​ ಪುಟ್ಟರಾಜು
ಈ ಬಾರಿ ಅತೀ ಹೆಚ್ಚು ಗಮನ ಸೆಳೆದಿರುವ ಕ್ಷೇತ್ರ ಅಂದ್ರೆ ಅದು ಮಂಡ್ಯ. ಈಗಾಗಲೇ ಕಾಂಗ್ರೆಸ್​ನಿಂದ ಸ್ಟಾರ್ ಚಂದ್ರು ಕಣದಲ್ಲಿದ್ದಾರೆ. ಇತ್ತ ಕಮಲ-ದಳ ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅಥವಾ ಸಿಎಸ್​ ಪುಟ್ಟರಾಜು ಇಬ್ಬರ ನಡುವೆ ಒಬ್ಬರಿಗೆ ಟಿಕೆಟ್ ಸಿಗಲಿದೆ. ಇದೇ ಕಾರಣಕ್ಕೂ ಮಂಡ್ಯ ಭಾರೀ ಸದ್ದು ಮಾಡ್ತಿದೆ. ಒಟ್ಟಾರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಳೆದು ತೂಗಿ ಘಟಾನುಘಟಿಗಳಿಗೆ ಟಿಕೆಟ್ ಕೊಟ್ಟಿದೆ. ಅದರಲ್ಲೂ ಕೆಲವು ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದ್ದು ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೋ ಕಾದು ನೋಡ್ಬೇಕು.

ವಿಶೇಷ ವರದಿ: ಮಧುಸೂದನ್ ಪೊಲಿಟಿಕಲ್ ಬ್ಯೂರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ 6 ಕ್ಷೇತ್ರಗಳಲ್ಲಿ ಹೈ-ವೋಲ್ಟೇಜ್ ಕದನ ಫಿಕ್ಸ್; ಹುರಿಯಾಳುಗಳೂ ರೆಡಿ, ಎಲ್ಲೆಲ್ಲಿ ಟಫ್ ಫೈಟ್..?

https://newsfirstlive.com/wp-content/uploads/2024/03/ELECTION.jpg

Load More