newsfirstkannada.com

ಮಂಡ್ಯ ಟಿಕೆಟ್ JDS ಪಾಲಾದರೆ, ‘ಮೈತ್ರಿ ಧರ್ಮ’ ಪಾಲಿಸ್ತಾರಾ ಸುಮಲತಾ? ನ್ಯೂಸ್ ಫಸ್ಟ್ Exclusive ಸಂದರ್ಶನ

Share :

Published March 13, 2024 at 10:16am

Update March 13, 2024 at 10:26am

    ‘ನನಗೆ ಮಂಡ್ಯನೇ ಬೇಕು, ಭಾವನಾತ್ಮಕವಾದ ಸಂಬಂಧ ಇದೆ’

    ಮಂಡ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಸಂಸದೆ ಸುಮಲತಾ

    ನ್ಯೂಸ್‌ಫಸ್ಟ್‌‌ Exclusive ಸಂದರ್ಶನದಲ್ಲಿ ಸುಮಲತಾ ಹೇಳಿದ್ದೇನು?

ಮಂಡ್ಯ ಲೋಕಸಭೆ ಕ್ಷೇತ್ರದ ಮೈತ್ರಿ ಟಿಕೆಟ್ ಯಾರಿಗೆ ಅನ್ನೋದು ಇನ್ನೂ ದೃಢವಾಗಿಲ್ಲ. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಯು ಜೆಡಿಎಸ್​ಗೆ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧವಾಗಿದೆ ಎಂಬ ಸುದ್ದಿಗಳ ನಡುವೆಯೂ, ಹಾಲಿ ಸಂಸದೆ ಸುಮಲತಾ ಅಂಬರೀಶ್ ಭಾರತೀಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿತೆ. ಒಂದು ಮಂಡ್ಯ ಕ್ಷೇತ್ರ ಜೆಡಿಎಸ್​ ಪಾಲಾದರೆ ಸುಮಲತಾ ಅಂಬರೀಶ್ ‘ಮೈತ್ರಿಧರ್ಮ’ವನ್ನು ಪಾಲಿಸ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಸಂಸದರು ಹೇಳಿದ್ದೇನು ಅನ್ನೋ ವಿವರ ಇಲ್ಲಿದೆ.

ಸುಮಲತಾ ಅಂಬರೀಶ್ ಮಾತು..
ಜೆಡಿಎಸ್‌ಗೆ ನನ್ನ ಅಗತ್ಯ ಇದ್ಯಾ ಅಂತ ಮೊದಲು ಕೇಳಬೇಕು. ಯಾಕೆಂದರೆ ಮಂಡ್ಯದಲ್ಲಿ ಜೆಡಿಎಸ್​ ಈಗಾಗಲೇ ತುಂಬಾ ಸ್ಟ್ರಾಂಗ್ ಆಗಿದೆ. ಅಂದರೆ ಮಂಡ್ಯದಲ್ಲಿ ಜೆಡಿಎಸ್​ನ ಬೇಸ್ ಚೆನ್ನಾಗಿದೆ. ಅಲ್ಲಿ ಬಿಜೆಪಿ ಪಕ್ಷವನ್ನು ಬಿಲ್ಡ್ ಮಾಡಬೇಕು ಅನ್ನೋ ಉದ್ದೇಶ ನನ್ನದು. ನಾನು ಬಿಜೆಪಿಯನ್ನು ಅಲ್ಲಿ (ಮಂಡ್ಯ) ಉಳಿಸಿಕೊಳ್ಳಬೇಕು ಅಂತಾ ಯಾಕೆ ಹಠ ಹಿಡಿದೆ ಅಂದರೆ ಕಾರಣ ಅದೇ.

ಬೇರೆ ಕಡೆ ನಿಲ್ಲಿ, ಗೆಲುವು ಸುಲಭ ಅನ್ನೋ ಆಫರ್‌ ನನಗಿದೆ. ಒಳ್ಳೆ ಹೆಸರಿದೆ, ಗೆಲುವು ಸುಲಭ, ಇಷ್ಟೆಲ್ಲ ಕಷ್ಟ ಆಗಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ನಿಮಗೆ ಬೇರೆ ಕಡೆ ಒಳ್ಳೆಯ ಭವಿಷ್ಯ ಇದೆ ಎಂಬ ಆಫರ್​​ಗಳು ನನ್ನ ಮುಂದಿವೆ. ಆದರೂ ನಾನ್ಯಾಕೆ ಮಂಡ್ಯ ಬೇಕೇಬೇಕು ಎಂದು ಹಠ ಹಿಡಿಯುತ್ತಿದ್ದೇನೆ? ನನಗೆ ಮಂಡ್ಯನೇ ಬೇಕು, ಯಾಕೆಂದರೆ ನನಗೆ ಭಾವನಾತ್ಮಕವಾದ ಸಂಬಂಧ ಇದೆ.

ಮೈತ್ರಿ ಧರ್ಮ ಅಂತಾ ಬಂದಾಗ.. ಒಂದು ವೇಳೆ ಬಿಜೆಪಿಯಿಂದ ನಾನು ನಿಂತರೆ ಆ ಪಕ್ಷದ ಮುಖಂಡರನ್ನು ಕರೆದು ಬೆಂಬಲ ನೀಡುವಂತೆ ಹೇಳುತ್ತಿದ್ದರು. ಅದರಂತೆ ಆ ಪಕ್ಷದಿಂದ ಅಭ್ಯರ್ಥಿ ನಿಂತರೆ ಬಿಜೆಪಿ ಹೈಕಮಾಂಡ್ ನಾಯಕರು ನನಗೆ ಸೂಚನೆಗಳನ್ನು ನೀಡುತ್ತಾರೆ. ಪಕ್ಷ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳೋದಕ್ಕೆ ನನಗೆ ಯಾವುದೇ ಬೇಜಾರಿಲ್ಲ. ಬಿಜೆಪಿ ಹೈಕಮಾಂಡ್‌ ಹೇಳಿದ್ರೆ ಸಹಕಾರ ನೀಡೋಕೆ ನಾನು ಸಿದ್ಧ. ನನಗೆ ಪಕ್ಷ ಯಾವ ರೀತಿ ಡೈರೆಕ್ಟ್ ಮಾಡುತ್ತೋ ಹಾಗೆ ನಡೆಯೋಕೆ ರೆಡಿ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಟಿಕೆಟ್ JDS ಪಾಲಾದರೆ, ‘ಮೈತ್ರಿ ಧರ್ಮ’ ಪಾಲಿಸ್ತಾರಾ ಸುಮಲತಾ? ನ್ಯೂಸ್ ಫಸ್ಟ್ Exclusive ಸಂದರ್ಶನ

https://newsfirstlive.com/wp-content/uploads/2024/03/SUMALATHA.jpg

Load More