newsfirstkannada.com

ಚುನಾವಣಾ ಉಸ್ತುವಾರಿ ಭೇಟಿ ಬಳಿಕ ಪ್ರತಾಪ್ ಸಿಂಹಗೆ ಹೊಸ ವಿಶ್ವಾಸ.. ಸಿಕ್ಕೇ ಬಿಡ್ತಾ ಗ್ರೀನ್ ಸಿಗ್ನಲ್..?

Share :

Published March 13, 2024 at 6:43am

    ಬಿಜೆಪಿ ಲಿಸ್ಟ್‌ನಲ್ಲಿ ಕೆಲ ಹಾಲಿ ಸಂಸದರಿಗೆ ‘ಶಾಕ್’ ಫಿಕ್ಸ್‌!

    22 ಕ್ಷೇತ್ರದ ಟಿಕೆಟ್​​​ ಫೈನಲ್​, ಹಲವು ಕ್ಷೇತ್ರಕ್ಕೆ ಸರ್ಪ್ರೈಸ್​​!

    ವಿರೋಧದ ನಡುವೆ ತುಮಕೂರು ಕ್ಷೇತ್ರಕ್ಕೆ ವಿ.ಸೋಮಣ್ಣ?

ಲೋಕಸಭಾ ಕಾವು ದಿನೇ ದಿನೇ ಏರತೊಡಗಿದೆ.. ಈಗಾಗಲೇ ಕಮಲ ಪಾಳಯ ಮೊದಲ ಪಟ್ಟಿಯಲ್ಲಿ 195 ಹುರಿಯಾಳುಗಳನ್ನ ಘೋಷಣೆ ಮಾಡಿದೆ. ಇಂದು ಬಿಜೆಪಿಯ ಎರಡನೇ ಪಟ್ಟಿಯಲ್ಲಿ 150ಕ್ಕೂ ಹೆಚ್ಚು ಅಭ್ಯರ್ಥಿಗಳನ್ನ ಘೋಷಣೆ ಮಾಡೋ ಸಾಧ್ಯತೆಯಿದೆ. 2ನೇ ಪಟ್ಟಿಯಲ್ಲಿ ರಾಜ್ಯದ 22 ಕ್ಯಾಂಡಿಡೇಟ್​ಗಳನ್ನ ಫೈನಲ್ ಮಾಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ರಾಜ್ಯದ 22 ಕ್ಷೇತ್ರಗಳ ಅಭ್ಯರ್ಥಿಗಳನ್ನ ಇಂದು ಘೋಷಣೆ ಮಾಡೋ ಸಾಧ್ಯತೆ ದಟ್ಟವಾಗಿದ್ದು, ಉಳಿದ ಅಭ್ಯರ್ಥಿಗಳನ್ನ ಎರಡನೇ ಹಂತದಲ್ಲಿ ಪ್ರಕಟಿಸಲಿದ್ದಾರೆ ಎನ್ನಲಾಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕೋ ಲೆಕ್ಕಾಚಾರದಲ್ಲಿದ್ದು, ಅನೇಕ ಹಾಲಿ ಸಂಸದರಿಗೆ ಕೊಕ್ ಕೊಡಲು ಮುಂದಾಗಿದೆ ಅಂತ ಹೇಳಲಾಗಿದೆ. ಅದಲ್ಲದೇ ಹಲವು ಸರ್ಪ್ರೈಸ್​​​ ಕ್ಯಾಂಡಿಡೇಟ್​​ಗಳನ್ನ ಅಖಾಡಕ್ಕಿಳಿಸಿ ವಿಧಾನಸಭೆಯಂತೆ ಪ್ರಯೋಗಕ್ಕೆ ಸಜ್ಜಾಗಿದೆ.

ಬಿಜೆಪಿಯ ಹಿಂದೂ ಫೈರ್ ಬ್ರಾಂಡ್ಸ್‌ಗೆ ಟಿಕೆಟ್ ಮಿಸ್
ಬಿಜೆಪಿಯ ಯಂಗ್ ಲಯನ್.. ರಾಜಿಯಿಲ್ಲದ ಮಾತಿನಿಂದ ಮೋದಿ ಮೇಲಿನ ಪ್ರೀತಿಯಿಂದ ಗುರುತಿಸಿಕೊಂಡಿದ್ದ ಸಂಸದ ಪ್ರತಾಪ್ ಸಿಂಹಾಗೂ ಟಿಕೆಟ್​ ಮಿಸ್​ ಆಗೋ ಎಲ್ಲಾ ಲಕ್ಷಣ ಕಾಣಿಸ್ತಾಯಿದೆ. ಅತ್ತ, ಬಿಜೆಪಿ ಹೈವೋಲ್ಟೇಜ್​ ಮೀಟಿಂಗ್​ನಲ್ಲೂ ಪ್ರತಾಪ್ ಸಿಂಹಾಗೇ ವಿರೋಧ ವ್ಯಕ್ತವಾಗಿದೆ. ಈ ಬಾರಿ ಮಹಾರಾಜರಿಗೆ ಟಿಕೆಟ್​ ಸಿಗೋದು ಬಹುತೇಕ ಪಕ್ಕಾ​ ಆಗಿದೆ.

ಚುನಾವಣಾ ಉಸ್ತುವಾರಿ ಭೇಟಿ ಬಳಿಕ ‘ಸಿಂಹ’ ಟ್ವೀಟ್
ತಡರಾತ್ರಿ ಸಂಸದ ರಾಜ್ಯ ಚುನಾವಣಾ ಉಸ್ತುವಾರಿ ಡಾ.ರಾಧಮೋಹನ ದಾಸ್ ಅಗರವಾಲ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿದ ಸಿಂಹ, ಟಿಕೆಟ್​ ಸಿಗೋ ವಿಶ್ವಾಸ ಹೊರಹಾಕಿದ್ದಾರೆ. ಇತ್ತ, ಪ್ರತಾಪ್ ಸಿಂಹಗೆ ಟಿಕೆಟ್​ ಕೈತಪ್ಪೋ ಚರ್ಚೆ ಪ್ರತಾಪ್ ಸಿಂಹ ಅಭಿಮಾನಗಳನ್ನ ಕೆರಳಿಸಿದೆ. ಹೀಗಾಗಿ, ಪ್ರತಾಪ್ ಸಿಂಹ ಅಭಿಮಾನಿಗಳು ಇಂದು ಬೆಳಗ್ಗೆ 11 ಗಂಟೆಗೆ ಮೈಸೂರು ಹಿನಕಲ್ ಫ್ಲೈ ಓವರ್ ಕೆಳಗೆ ಧರಣಿಗೆ ಮುಂದಾಗಿದ್ದಾರೆ.

ಚಿಕ್ಕೋಡಿ ಟಿಕೆಟ್​ಗೋಸ್ಕರ ಒಂದು ಮಟ್ಟದಲ್ಲಿ ಪಕ್ಷ ಬಿಡೋಕೂ ಸಜ್ಜಾಗಿದ್ದ ರಮೇಶ್ ಕತ್ತಿಗೆ ಕೊನೆಗೂ ಟಿಕೆಟ್ ಸಿಕ್ಕೋದು ಕನ್ಫರ್ಮ್ ಆಗಿದೆ. ಅತ್ತ, ಹಾಲಿ ಸಂಸದ ಅಣ್ಣಾ ಸಾಹೇಬ್​ ಜೊಲ್ಲೆಗೆ ಅನಿರೀಕ್ಷಿತ ಶಾಕ್ ಎದುರಾಗಿದೆ. ಇನ್ನು, ಹಾವೇರಿಯಲ್ಲಿ ಶಿವಕುಮಾರ್ ಉದಾಸಿ ನಿವೃತ್ತಿಯ ಕಾರಣ ಖಾಲಿ ಇದ್ದ ಸೀಟ್​ಗೆ ಈಶ್ವರಪ್ಪ ಪಟ್ಟು ಬಿಗಿಯಾಗಿತ್ತು. ಆದ್ರೆ ಗೆಲ್ಲೋ ಅಭ್ಯರ್ಥಿಗೆ ಮಣೆ ಹಾಕಿದಂತೆ ಕಾಣ್ತಿರೋ ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಹೆಸರನ್ನ ಲಾಕ್ ಮಾಡಿದೆ.

ವಿರೋಧದ ನಡುವೆ ತುಮಕೂರಿಗೆ ವಿ.ಸೋಮಣ್ಣ
ಈ ಬಾರಿ ಬಿಜೆಪಿ ಟೆನ್ಷನ್ ತಂದಿಟ್ಟಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರ.. ಸುಧಾಕರ್ ಹಾಗೂ ವಿಶ್ವನಾಥ್ ಪುತ್ರನ ನಡುವೇ ರೇಸ್ ಏರ್ಪಟ್ಟಿತ್ತು. ಅಂತಿಮವಾಗಿ ಸುಧಾಕರ್​ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಕುತೂಹಲ ಕೆರಳಿಸಿದ್ದ ಕ್ಷೇತ್ರವಾದ ತುಮಕೂರಿನಲ್ಲಿ ವಿ.ಸೋಮಣ್ಣಗೆ ಟಿಕೆಟ್ ಪಕ್ಕಾ ಆಗಿದೆ. ವಿಧಾನಸಭಾ ಚುನಾವಣೆಯಲ್ಲಾದ ಅನ್ಯಾಯವನ್ನ ಈ ಮೂಲಕ ಸರಿಪಡಿಸಿದಂತೆ ಕಾಣಿಸ್ತಿದೆ. ಒಟ್ಟಾರೆ, ಇಂದು ಬಿಜೆಪಿ ಬಿಜೆಪಿ ಅಧಿಕೃತ ಪಟ್ಟಿ ಬಿಡುಗಡೆ ಆಗಲಿದ್ದು, ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾದು ಕೂತಿದ್ದಾರೆ.. ಯಾರಿಗೆ ಟಿಕೆಟ್​​ ಸಿಗುತ್ತೆ? ಯಾರಿಗೆ ಸಿಗಲ್ಲ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಉಸ್ತುವಾರಿ ಭೇಟಿ ಬಳಿಕ ಪ್ರತಾಪ್ ಸಿಂಹಗೆ ಹೊಸ ವಿಶ್ವಾಸ.. ಸಿಕ್ಕೇ ಬಿಡ್ತಾ ಗ್ರೀನ್ ಸಿಗ್ನಲ್..?

https://newsfirstlive.com/wp-content/uploads/2024/03/PRATAP-SIMHA-1-1.jpg

Load More