BREAKING: ಲೋಕಸಭಾ ಚುನಾವಣೆ: ಮತಎಣಿಕೆ ಕಾರ್ಯ ಆರಂಭ; ಮೈಸೂರಲ್ಲಿ ಬಿಜೆಪಿಗೆ ಮುನ್ನಡೆ

author-image
admin
Updated On
ರಾಜರು ಯುದ್ಧಕ್ಕೆ ಸನ್ನದ್ಧ, ಚಾಲೆಂಜ್ ಎದುರಿಸಲು ವೈದ್ಯರೂ ರೆಡಿ; ಲೋಕ ಕದನ ಮತ್ತಷ್ಟು ರೋಚಕ..!
Advertisment
  • ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆ ಫಲಿತಾಂಶ
  • ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ಗೆ ಮೊದಲ ಮತ
  • ದೇಶಾದ್ಯಂತ ಮೊದಲಿಗೆ ಅಂಚೆ ಮತದಾನದ ಎಣಿಕೆ ಕಾರ್ಯ ಆರಂಭ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಮತಎಣಿಕೆ ಆರಂಭವಾಗಿದೆ. ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ಶುರುವಾಗಿದೆ.

ಮೊದಲಿಗೆ ಅಂಚೆ ಮತದಾನದ ಎಣಿಕೆ ಕಾರ್ಯ ಆರಂಭವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ಗೆ ಮೊದಲ ಮತ ಬಿದ್ದಿದೆ. ಅಂಚೆ ಮತಎಣಿಕೆ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶುಭಾರಂಭ ಮಾಡಿದೆ.

ಇದನ್ನೂ ಓದಿ:ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಯಾರು ಎದುರಾಳಿ? ಗೆಲ್ಲೋದ್ಯಾರು? 

ಮೈಸೂರು ಅಷ್ಟೇ ಅಲ್ಲ ಬಾಗಲಕೋಟೆಯಲ್ಲೂ ಅಂಚೆ ಮತ ಎಣಿಕೆ ಆರಂಭದಲ್ಲೇ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಈಗಷ್ಟೇ ರಾಜ್ಯಾದ್ಯಂತ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗಿದ್ದು, ಮತಎಣಿಕೆಯ ಕಾರ್ಯ ರೋಚಕ ಹಂತವನ್ನು ತಲುಪಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಮನಗರದಲ್ಲೂ ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ಆರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment