‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?

author-image
Bheemappa
Updated On
‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?
Advertisment
  • ಜೆಡಿಎಸ್​ ವಿರುದ್ಧ ಅಸಮಾಧಾನ ಹೊರ ಹಾಕಿದ ಸಂಸದೆ ಸುಮಲತಾ
  • ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ, ಅವರು ದೊಡ್ಡವರು
  • ಮೋದಿ ಪ್ರಧಾನಿ ಆಗಬೇಕು ಎಂದು ನನ್ನ ಸ್ಥಾನವನ್ನು ತ್ಯಾಗ ಮಾಡಿದ್ದೇನೆ

ಮಂಡ್ಯ: ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಹೇಳಿಕೆಯಿಂದ ನನಗೆ ಬಹಳಷ್ಟು ನೋವು ತಂದಿದೆ. ಜೆಡಿಎಸ್​ನವರು ನನ್ನನ್ನು ಪ್ರಚಾರಕ್ಕೂ ಕರೆದಿಲ್ಲ ಎಂದು ಸಂಸದೆ ಸುಮಲತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೊಡ್ಡರಸಿನಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಹಿರಿಯರು. ಅವರ ಬಗ್ಗೆ ನನಗೆ ಗೌರವ ಇದೆ. ಇನ್ನೊಂದು ರೀತಿ ಉತ್ತರ ಹೇಳೋಕೆ ಇಷ್ಟವಿಲ್ಲ. ಎಲ್ಲೋ ಅವರಿಗೆ ಸರಿಯಾದ ಮಾಹಿತಿ ಕೊಡದಿದ್ದಕ್ಕೆ ಈ ರೀತಿಯಾದ ಹೇಳಿಕೆ ಕೊಟ್ಟಿರಬಹುದು. ಖಂಡಿತ ಅವರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕಳೆದ 5 ವರ್ಷದಲ್ಲಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸಿಕೊಂಡು ಬಂದೆ. ನನಗೆ, ಅಂಬರೀಶ್ ಅವರಿಗೆ, ಬೆಂಬಲ, ಪಡೆ, ಶಕ್ತಿ ಈ ಜಿಲ್ಲೆಯಲ್ಲಿ ಇದ್ದೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗರ್ಲ್​ಫ್ರೆಂಡ್​ಗೆ ತಂದಿದ್ದ ಬರ್ಗರ್​ ಕಚ್ಚಿದ್ದಕ್ಕೆ ಸ್ನೇಹಿತನನ್ನೇ ಕೊಂದ ಕುಚುಕು ಗೆಳೆಯ 

publive-image

ಮತ್ತೊಮ್ಮೆ ಮೋದಿಗಾಗಿ ಗೆದ್ದಂತಹ ಸ್ಥಾನವನ್ನು ತ್ಯಾಗ ಮಾಡಿದೆ

ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಉದ್ದೇಶದಿಂದ ನನ್ನದು ಏನೇ ಸಮಸ್ಯೆ ಇದ್ದರೂ ಮತ್ತೊಮ್ಮೆ ಮೋದಿಗಾಗಿ ಗೆದ್ದಂತಹ ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ಅಂಬರೀಶ್ ಅವರ ಸೇನೆ ಹಾಗೂ ಬೆಂಬಲಿಗರು ನನ್ನ ಪ್ರಕಾರ ಬಿಜೆಪಿ, ಎನ್​ಡಿಎಗೆ ಸೇರಿದಂತೆ. ನನ್ನ ಜೊತೆಗಿದ್ದ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಕಾರಿನೊಳಗೆ ಬರೋಬ್ಬರಿ 30 ಕುರಿ, ಮೇಕೆ ತುಂಬಿದ್ದ ಕಿಲಾಡಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

ಇವತ್ತಿನ ದಿನದವರೆಗೆ ಜೆಡಿಎಸ್​ ಪಕ್ಷದ ನಾಯಕರು ಯಾವುದೇ ಸಭೆಗೆ ನನ್ನನ್ನು ಕರೆದಿಲ್ಲ. ಸಭೆಗೆ ಬಂದು ಜಾಯಿನ್ ಆಗಿ ಎಂದು ಕೇಳಿಲ್ಲ. ಜಿಲ್ಲೆಯ ಯಾವುದಾದ್ರೂ ತಾಲೂಕಿಗೆ, ಗ್ರಾಮಕ್ಕೆ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಒಂದು ವೇಳೆ ಕರೆದರೂ ನಾನು ಬೇಡ ಅಂತ ಹೇಳಿದ್ದರೇ, ಅಂಥಹ ರೆಕಾರ್ಡ್​ ಇದ್ದರೇ ಕೊಡಿ ಅಂತ ಜೆಡಿಎಸ್​ನವರನ್ನ ಕೇಳಿ. ನೀವು ಇಲ್ಲದೇ ಎಲೆಕ್ಷನ್ ಮಾಡಬೇಕು ಎನ್ನುವುದು ಅವರಲ್ಲಿನ ಕೆಲವರಲ್ಲಿ ಇದ್ದಿದ್ದರಿಂದ ಈ ರೀತಿ ಮಾಡಿರಬಹುದು. ನಮ್ಮ ಕಾರ್ಯಕರ್ತರನ್ನ ನಾನು ಸಮಾಧಾನ ಮಾಡಿಕೊಂಡು ಬಂದಿದ್ದೇನೆ. ನಮ್ಮವರಲ್ಲಿ ಕೆಲವರು ಫೋನ್ ಮಾಡಿ ನಮ್ಮ ವೋಟ್ ಅವರಿಗೆ ಲೆಕ್ಕಕ್ಕೆ ಇಲ್ವಾ ಅಂತ ಕೇಳಿದ್ದಾರೆ. ಪ್ರಚಾರಕ್ಕೆ ಬನ್ನಿ ಎಂದು ಯಾರೋಬ್ಬರು ಕರೆದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಲಾರಾಮನ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

publive-image

ಇಷ್ಟೊಂದು ತ್ಯಾಗ ಮಾಡಿ ಅದಕ್ಕೆ ಬೆಲೆ ಇಲ್ಲದಾಗೆ ಆಯಿತಾ?

ಇದುವರೆಗೂ ಯಾರೂ ಫೋನ್​ನಲ್ಲೂ ಟಚ್​ನಲ್ಲಿ ಇಲ್ಲ. ಆವತ್ತು ಕುಮಾರಸ್ವಾಮಿಯವರು ನಮ್ಮ ಮನೆಗೆ ಬಂದು ಹೋದ ಮೇಲೆ ಈವರೆಗೂ ಯಾರೂ ಕೂಡ ನನ್ನ ಜೊತೆ ಫೋನ್​ನಲ್ಲೂ ಮಾತಾಡಿಲ್ಲ. ಆಪ್ತರನ್ನು ಕರೆದಿಲ್ಲ. ಇಷ್ಟೊಂದು ತ್ಯಾಗ ಮಾಡಿ ಅದಕ್ಕೆ ಬೆಲೆ ಇಲ್ಲದಾಗೆ ಆಯಿತಾ ಎನ್ನುವ ಬೇಜಾರು ನನ್ನನ್ನು ತುಂಬಾ ಕಾಡುತ್ತಿದೆ. ಆಗಾದ್ರೆ ನಾನು ಮಾಡಿದ್ದು ತಪ್ಪಾ?. ಇದಕ್ಕೆನಾದ್ರೂ ಪ್ರತಿಕ್ರಿಯೆ ನೀಡಿದರೆ ಬೇರೆ ರೀತಿಯಲ್ಲಿ ಸಂದೇಶ ಹೋಗುತ್ತದೆ ಎಂದು ಇಷ್ಟು ದಿನ ನಾನು ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.

ಇವತ್ತಿನ ರಾಜಕೀಯದಲ್ಲಿ ಪದೇ ಪದೇ ಸೋತರೂ ಕ್ಷೇತ್ರ ಬಿಟ್ಟುಕೊಡಲ್ಲ. ಆದರೆ ಗೆದ್ದ ಸ್ಥಾನವನ್ನು ಮನಸು ಪೂರ್ತಿಯಾಗಿ ಬಿಟ್ಟುಕೊಟ್ಟಿದ್ದೇನೆ. ಅವರ ಮನಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ನನಗೆ ಆಗಲ್ಲ. ಅವ್ರು ಯಾಕೆ ಈ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ. ಊರುಗಳಲ್ಲಿ ಇರುವ ನಮ್ಮ ಲೀಡರ್ಸ್​​ ಅನ್ನು ಅವರು ಒಂದು ಮಾತು ಕೇಳಿಲ್ಲ. ಮಂಗಳೂರು ವರೆಗೆ ಹೋಗಿದ್ದೀನಿ. ಮಂಡ್ಯಕ್ಕೆ ಬರಲ್ವಾ ನಾನು?. ಈ ರೀತಿ ಹೇಳಿಕೆ ನೀಡಿರುವುದು ತುಂಬಾ, ತುಂಬಾ ಬೇಜಾರು ಆಗಿದೆ. ಆವತ್ತು ಸೀಟ್ ಬಿಟ್ಟುಕೊಟ್ಟರೂ ಇಷ್ಟೊಂದು ಬೇಜಾರು ಆಗಿರಲಿಲ್ಲ, ಹೇಳಿಕೆಯಿಂದ ಬೇಜಾರು ಆಗಿದೆ ಎಂದು ಜೆಡಿಎಸ್​ ವಿರುದ್ಧ ಸುಮಲತಾ ಅವರು ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಮುದ್ದಾದ ಕಂದಮ್ಮಗಳ ಎದುರೇ ಹೆತ್ತ ತಾಯಿ ಕೊಲೆಗೈದ ನರರಾಕ್ಷಸರು; ಈ ಫೋಟೋ ಹಿಂದೆ ಕರುಣಾಜನಕ ಕಥೆ!

ಎನ್​ಡಿಎ 28 ಗೆಲ್ಲಬೇಕು ಎನ್ನುವುದು ಇದೆ

ಹೆಚ್​.ಡಿ ದೇವೇಗೌಡರು ತುಂಬಾ ಹಿರಿಯರು. ಸುಮ್ಮ, ಸುಮ್ಮನೇ ಇಂಥಹ ಹೇಳಿಕೆ ಹೇಳಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೋ ಅಥವಾ ಏನು ಹೇಳಿಲ್ವೋ ಎಂಬುದು ಗೊತ್ತಿಲ್ಲ. ಬಿಜೆಪಿ, ಎನ್​ಡಿಎ 28 ಗೆಲ್ಲಬೇಕು ಎನ್ನುವುದು ಇದೆ. ರಾಜಕಾರಣದಲ್ಲಿ ಒಂದು ಕಡೆ ಇದ್ದು ಇನ್ನೊಂದು ಕಡೆ ಸಪೋರ್ಟ್​ ಮಾಡುವುದು ಮೊದಲಿಂದಲೂ ನಮ್ಮಲ್ಲಿ ಇಲ್ಲ. ಎಲೆಕ್ಷನ್​ಗೂ ಮೊದಲು ಇನ್ನೊಂದು ಪಕ್ಷ ಸೇರಬೇಕು ಎನ್ನುವುದು ನನ್ನಲ್ಲಿ ಇಲ್ಲ. ನಾನು ಒಂದು ಪಕ್ಷಕ್ಕೆ ಸೇರಿದ್ದೀನಿ ಎಂದರೆ ಸಂಪೂರ್ಣ ಸಪೋರ್ಟ್​ ಆ ಪಕ್ಷಕ್ಕೆ ಇರುತ್ತದೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment