newsfirstkannada.com

ಸ್ಮೃತಿ ಇರಾನಿ ಸೇರಿ ಒಟ್ಟು 16 ಕೇಂದ್ರ ಸಚಿವರಿಗೆ ಹೀನಾಯ ಸೋಲು.. ಯಾರೆಲ್ಲ ಸೋತಿದ್ದಾರೆ..?

Share :

Published June 5, 2024 at 12:42pm

Update June 5, 2024 at 12:45pm

  ನಿನ್ನೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟ ಆಗಿದೆ

  240 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿರುವ ಬಿಜೆಪಿ

  ಕಾಂಗ್ರೆಸ್​ಗೆ 99 ಕ್ಷೇತ್ರಗಳಲ್ಲಿ ಗೆಲುವು, NDA ಸರಳ ಬಹುಮತ

ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಿಸಿದೆ. ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ 240ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಲವು ಕೇಂದ್ರ ಸಚಿವರನ್ನು ಕಣಕ್ಕಿಳಿಸಿತ್ತು. ಅವರಲ್ಲಿ 16 ಸಚಿವರು ಸೋಲನ್ನು ಕಂಡಿದ್ದಾರೆ.

ಯಾರಿಗೆಲ್ಲ ಸೋಲು..?

 1. ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಸೋಲನ್ನು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ 1.6 ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ.
 2. ಕೇರಳದ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೋತಿದ್ದಾರೆ. ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ 16,077ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ.
 3. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಖೇರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದಾರೆ. ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಅವರು ಸೋಲಿಸಿದ್ದಾರೆ.
 4. ಪಶ್ಚಿಮ ಬಂಗಾಳದ ಬಂಕುರಾ ಕ್ಷೇತ್ರದಿಂದ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ನಿಂತಿದ್ದರು. ಅವರನ್ನು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಅರೂಪ್ ಚಕ್ರವರ್ತಿ ಸೋಲಿಸಿದ್ದಾರೆ.
 5. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಹಾಗೂ ಹಾಲಿ ಸಂಸದ ಅರ್ಜುನ್ ಮುಂಡಾ ಜಾರ್ಖಂಡ್‌ನ ಖುಂತಿ ಕ್ಷೇತ್ರದಿಂದ ಸೋತಿದ್ದಾರೆ. 1.4 ಲಕ್ಷ ಮತಗಳಿಂದ ಸೋತಿದ್ದಾರೆ.
 6. ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವ ಕೈಲಾಶ್ ಚೌಧರಿ ಸೋತಿದ್ದಾರೆ. ಇವರು ಬಾರ್ಮರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
 7. ತಮಿಳುನಾಡಿನ ನೀಲಗಿರಿಯಲ್ಲಿ ಡಿಎಂಕೆಯ ಎ ರಾಜಾ ವಿರುದ್ಧ ಕೇಂದ್ರ ಸಚಿವ ಎಲ್.ಮುರುಗನ್ 2,40,585 ಲಕ್ಷ ಮತಗಳಿಂದ ಸೋತಿದ್ದಾರೆ.
 8. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್‌ ಕೂಚ್‌ ಬೆಹಾರ್‌ ಕ್ಷೇತ್ರದಲ್ಲಿ ಸೋತಿದ್ದಾರೆ. ಅವರು ಟಿಎಂಸಿ ಅಭ್ಯರ್ಥಿ ವಿರುದ್ಧ 39 ಸಾವಿರ ಮತಗಳಿಂದ ಸೋತಿದ್ದಾರೆ.
 9. ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಸಮಾಜವಾದಿ ಪಕ್ಷದ ಹರೇಂದ್ರ ಸಿಂಗ್ ಮಲಿಕ್ ವಿರುದ್ಧ 24,000 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ.
 10. ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್‌ನಲ್ಲಿ ಸೋಲಿಸಿದ್ದಾರೆ.
 11. ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಆರ್. ಗೆ ಸೋತಿದ್ದಾರೆ. ಮೋಹನ್‌ಲಾಲ್‌ಗಂಜ್ ಕ್ಷೇತ್ರವನ್ನು ಇವರು ಸ್ಪರ್ಧಿಸಿದ್ದರು.
 12. ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಅವರು ಎಸ್ಪಿಯ ಬೀರೇಂದ್ರ ಸಿಂಗ್ ವಿರುದ್ಧ ಸೋತಿದ್ದಾರೆ.
 13. ಮಹಾರಾಷ್ಟ್ರದ ಭಿವಂಡಿಯಲ್ಲಿ ಪಂಚಾಯತಿ ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಪಾಟೀಲ್ ಅವರನ್ನು ಎನ್‌ಸಿಪಿಯ (ಶರದ್ ಬಣ) ಸುರೇಶ್ ಗೋಪಿನಾಥ್ ಮ್ಹಾತ್ರೆ ಸೋಲಿಸಿದ್ದಾರೆ.
 14. ಜಲ್ನಾದಲ್ಲಿ ಕಾಂಗ್ರೆಸ್‌ನ ಕಲ್ಯಾಣ್ ವೈಜನಾಥ ರಾವ್ ಕಾಳೆ ಅವರು ಬಿಜೆಪಿ ನಾಯಕ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ ಅವರನ್ನು ಸೋಲಿಸಿದ್ದಾರೆ.
 15. ಎನ್‌ಸಿಪಿಯ (ಶರದ್ ಬಣ) ಭಾಸ್ಕರ್ ಭಾಗರೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪವಾರ್ ಅವರನ್ನು 1,13,199 ಮತಗಳಿಂದ ಸೋಲಿಸಿದ್ದಾರೆ.

ಸ್ಮೃತಿ ಇರಾನಿ ಸೇರಿ ಒಟ್ಟು 16 ಕೇಂದ್ರ ಸಚಿವರಿಗೆ ಹೀನಾಯ ಸೋಲು.. ಯಾರೆಲ್ಲ ಸೋತಿದ್ದಾರೆ..?

https://newsfirstlive.com/wp-content/uploads/2024/06/SMRITI-1.jpg

Load More