newsfirstkannada.com

ಮೋದಿ, ರಾಹುಲ್, ಅಮಿತ್ ಶಾ.. 10 VIP ಅಭ್ಯರ್ಥಿಗಳ ಕ್ಷೇತ್ರ, ಎದುರಾಳಿ ಕುರಿತ ಕಂಪ್ಲೀಟ್ ಡೀಟೇಲ್ಸ್..!

Share :

Published March 19, 2024 at 1:39pm

  ವಿಐಪಿ ಅಭ್ಯರ್ಥಿಗಳ ಕ್ಷೇತ್ರಕ್ಕೆ ಯಾವಾಗ ಚುನಾವಣೆ ನಡೆಯಲಿದೆ?

  2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು, ಸೋಲು ಹೇಗಿತ್ತು?

  ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಕೂಡ ಚುನಾವಣಾ ಅಖಾಡಕ್ಕೆ ಎಂಟ್ರಿ..!

ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು ದಿನಾಂಕ ಗೊತ್ತು ಮಾಡಿದ್ದು, ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. 18ನೇ ಅವಧಿಯ ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಆರಂಭವಾಗಲಿದ್ದು, ಜೂನ್ 4ಕ್ಕೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯೋರು ಯಾರು ಎಂದು ಗೊತ್ತಾಗಲಿದೆ. ಇನ್ನು ಮಾರ್ಚ್​​​ 16 ರಿಂದಲೇ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ.

ಮೊದಲ ಹಂತದ ಚುನಾವಣೆ ಏಪ್ರಿಲ್ 19, ಎರಡನೇ ಹಂತದ ಮತದಾನ ಏಪ್ರಿಲ್ 26, ಮೇ 7 ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಅದೇ ರೀತಿ ಮೇ 13 ರಂದು ನಾಲ್ಕನೇ, ಮೇ 20 ರಂದು ಐದನೇ, ಮೇ 25 ರಂದು 6 ಹಾಗೂ ಜೂನ್ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 102 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆದ್ರೆ, ಎರಡನೇ ಹಂತದಲ್ಲಿ 89, ಮೂರನೇ ಹಂತದಲ್ಲಿ 94, ನಾಲ್ಕನೇ ಹಂತದಲ್ಲಿ 96, ಐದನೇ ಹಂತದಲ್ಲಿ 49, ಆರನೇ ಹಂತದಲ್ಲಿ 57 ಹಾಗೂ ಏಳನೇ ಹಂತದಲ್ಲಿ 57 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಎಲೆಕ್ಷನ್​​ಗೆ ದಿನಾಂಕ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ವಿಐಪಿ ಕ್ಯಾಂಡೇಟ್​​ಗಳ ಕ್ಷೇತ್ರಗಳಿಗೆ ಯಾವಾಗ ಚುನಾವಣೆ ನಡೆಯಲಿದೆ ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಾಗಿದೆ. ಅಂತೆಯೇ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ರಾಜನಾಥ್ ಸಿಂಗ್ ಸೇರಿದಂತೆ 10 ವಿಐಪಿ ಅಭ್ಯರ್ಥಿಗಳ ವಿವರ ಹಾಗೂ ಮತದಾನ ನಡೆಯುವ ದಿನಾಂಕದ ಮಾಹಿತಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ: ವಾರಣಾಸಿ ಕ್ಷೇತ್ರ

ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ವಾರಣಾಸಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿರುವ ಮೊದಲ ಲಿಸ್ಟ್​ನಲ್ಲಿ ಮೊದಲ ಹೆಸರೇ ಪ್ರಧಾನಿ ಮೋದಿ ಹೆಸರಿದೆ. ಮೋದಿ ಎದುರಾಳಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದ್ರ ಬಗ್ಗೆ ಕಾಂಗ್ರೆಸ್​ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ 4,79,505 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎದುರಾಳಿ ಸಮಾಜವಾದಿ ಪಕ್ಷದ ನಾಯಕಿ ಶಾಲಿನಿ ಯಾದವ್​​ಗೆ ಕೇವಲ 1,95,159 ಮತಗಳು ಬಿದ್ದಿದ್ದವು. ಕೊನೆಯ ಹಂತ, ಜೂನ್ 1 ರಂದು ವಾರಣಾಸಿ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ರಾಹುಲ್ ಗಾಂಧಿ: ವಯನಾಡ್ ಲೋಕಸಭಾ ಕ್ಷೇತ್ರ

ರಾಹುಲ್ ಗಾಂಧಿ ಅವರನ್ನು ವಯನಾಡ್​ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಳೆದ ಬಾರಿಯೂ ವಯನಾಡ್​​ನಿಂದಲೇ ಸ್ಪರ್ಧಿಸಿ ಸಂಸದರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ 4,31,770 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಸಲ ಎನ್​ಡಿಎ ಅಭ್ಯರ್ಥಿಯಾಗಿ ನುಸ್ರತ್ ಜಹಾನ್​​, ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದಾರೆ. ಏಪ್ರಿಲ್ 26 ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಅಂದರೆ ಎರಡನೇ ಹಂತದಲ್ಲಿ ನಡೆಯುವ ಮತದಾನದ ವೇಳೆ ವಯನಾಡು ಲೋಕಸಭೆ ಕ್ಷೇತ್ರಕ್ಕೆ ವೋಟಿಂಗ್ ನಡೆಯಲಿದೆ.

ಅಮಿತ್ ಶಾ: ಗಾಂಧಿನಗರ ಲೋಕಸಭಾ ಕ್ಷೇತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರೀಕ್ಷೆಯಂತೆ ಈ ಬಾರಿಯೂ ಗಾಂಧಿನಗರದಿಂದಲೇ ಸ್ಪರ್ಧೆ ಮಾಡ್ತಿದ್ದಾರೆ. ಗುಜರಾತ್​​ನ ಗಾಂಧಿನಗರ ಲೋಕಸಭೆ ಕ್ಷೇತ್ರವು ಕಳೆದ 30 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಅಮಿತ್​​ ಶಾ 5,57,014 ಮತಗಳ ಅಂತರದಿಂದ ಗೆದ್ದಿದ್ದರು. ಇಲ್ಲಿ ಕಾಂಗ್ರೆಸ್​ನಿಂದ ಸಿಜೆ ಚೌದಾ ಸ್ಪರ್ಧಿಸಿದ್ದರು. ಈ ಬಾರಿ ಅಮಿತ್ ಶಾಗೆ ಎದುರಾಳಿ ಯಾರು ಅನ್ನೋದು ಸ್ಪಷ್ಟವಾಗಿಲ್ಲ. ಮೇ 7 ರಂದು ಅಂದರೆ ಮೂರನೇ ಹಂತದಲ್ಲಿ ಚುನಾವಣೆ ನಡೆಯುವಾಗ ಮತದಾನ ನಡೆಯಲಿದೆ.

ನಿತಿನ್ ಗಡ್ಕರಿ: ನಾಗ್ಪುರ ಲೋಕಸಭಾ ಕ್ಷೇತ್ರ

ಕೇಂದ್ರ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ನಾಗ್ಪುರದಿಂದ ಗಡ್ಕರಿ ಈಗಾಗಲೇ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 2,16,009 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​ನಿಂದ ನಾನಾ ಪಟೋಲೆ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಈ ಕ್ಷೇತ್ರಕ್ಕೆ ಸದ್ಯ ಕಾಂಗ್ರೆಸ್​ನಿಂದ ಯಾವುದೇ ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ. ಇಲ್ಲಿ ಏಪ್ರಿಲ್ 19 ರಂದು ಅಂದರೆ ನಾಲ್ಕನೇ ಹಂತದ ವೇಳೆ ಮತದಾನ ನಡೆಯಲಿದೆ.

ಸ್ಮೃತಿ ಇರಾನಿ: ಅಮೇಥಿ ಲೋಕಸಭಾ ಕ್ಷೇತ್ರ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡ್ತಿದ್ದಾರೆ. ಕೆಲವು ವದಂತಿಗಳ ಪ್ರಕಾರ, ರಾಹುಲ್ ಗಾಂಧಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ 55,120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮೇ 20 ರಂದು ಮತದಾನ ನಡೆಯಲಿದೆ.

ಅಸಾದುದ್ದೀನ್ ಓವೈಸಿ: ಹೈದ್ರಾಬಾದ್ ಲೋಕಸಭಾ ಕ್ಷೇತ್ರ

ಎಐಎಂಐಎಂ (All India Majlis-e-Ittehadul Muslimeen) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ತೆಲಂಗಾಣದ ಹೈದ್ರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ. ಇಲ್ಲಿ ಬಿಜೆಪಿಯಿಂದ ಮಾಧವಿ ಲತಾ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ 2,82,186 ಮತಗಳಿಂದ ಬಿಜೆಪಿ ಅಭ್ಯರ್ಥಿ ಭಗವಂತ್ ರಾವ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ನಾಲ್ಕನೇ ಹಂತ, ಮೇ 13 ರಂದು ಚುನಾವಣೆ ನಡೆಯಲಿದೆ.

ರಾಜನಾಥ್ ಸಿಂಗ್: ಲಖನೌ ಲೋಕಸಭೆ ಕ್ಷೇತ್ರ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರು ಉತ್ತರ ಪ್ರದೇಶದ ಲಖನೌ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಲಿಸ್ಟ್​ನಲ್ಲಿ ಅವರ ಹೆಸರಿದೆ. ಹಿಂದೆ ಈ ಕ್ಷೇತ್ರವನ್ನು ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪ್ರತಿನಿಧಿಸುತ್ತಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ರಾಜನಾಥ್ ಸಿಂಗ್, 3,47,302 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಮಾಜವಾದಿ ಪಕ್ಷದ ನಾಯಕ ಪೂನಂ ಶತ್ರುಘ್ನ ಸಿನ್ಹ ರಾಜನಾಥ್ ಸಿಂಗ್ ವಿರುದ್ಧ ಅಖಾಡಕ್ಕೆ ಇಳಿದಿದ್ದರು. ಈ ಕ್ಷೇತ್ರಕ್ಕೆ ಐದನೇ ಹಂತ, ಮೇ 20 ರಂದು ವೋಟಿಂಗ್ ನಡೆಯಲಿದೆ.

ಪಿಯೂಷ್ ಗೋಯಲ್: ಮುಂಬೈ ಉತ್ತರ ಲೋಕಸಭಾ ಕ್ಷೇತ್ರ

ಕೇಂದ್ರ ಸಚಿವ ಪಿಯೂಷ್​ ಗೋಯಲ್​, ಮುಂಬೈ ಉತ್ತರ ಲೋಕಸಭೆ ಕ್ಷೇತ್ರಕ್ಕೆ ಸರ್ಪ್ರೈಸ್​ ಅಭ್ಯರ್ಥಿ. ಇದೇ ಮೊದಲ ಬಾರಿಗೆ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಈ ಕ್ಷೇತ್ರದಿಂದ 4,65,247 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​ನಿಂದ ಉರ್ಮಿಳಾ ಸ್ಪರ್ಧಿಸಿ ಸೋತಿದ್ದರು. ಐದನೇ ಹಂತ, ಮೇ 20ರಂದು ವೋಟಿಂಗ್ ನಡೆಯಲಿದೆ.

ಶಶಿ ತರೂರ್​: ತಿರುವನಂತಪುರಂ

ಕಾಂಗ್ರೆಸ್​ ನಾಯಕ ಶಶಿ ತರೂರ್ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಖಾಡಕ್ಕಿಳಿದಿದ್ದು, ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ. ಅಲ್ಲದೇ ಸಿಪಿಐನಿಂದ ಪಣ್ಯನ್ ರವೀಂದ್ರನ್ ಕೂಡ ಚುನಾವಣಾ ಕಣದಲ್ಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಶಶಿ ತರೂರ್ ಅವರು ಬಿಜೆಪಿ ಕುಮ್ಮನಮ್ ರಾಜಶೇಖರನ್ ವಿರುದ್ಧ 99,989 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎರಡನೇ ಹಂತ, ಏಪ್ರಿಲ್ 26 ರಂದು ಮತದಾನ ನಡೆಯಲಿದೆ.

ಬನ್ಸುರಿ ಸ್ವರಾಜ್: ನವದೆಹಲಿ ಲೋಕಸಭಾ ಕ್ಷೇತ್ರ

ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ನವದೆಹಲಿ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ರಾಜ್ಯಖಾತೆ ಸಚಿವೆ ಮೀನಾಕ್ಷಿ ಲೇಖಿ ಈ ಕ್ಷೇತ್ರದ ಹಾಲಿ ಸಂಸದೆ. ಅರವಿಂದ್ ಕೇಜ್ರಿವಾಲ್ ಅವರು ಆಮ್​ ಆದ್ಮಿಯಿಂದ ಸೋಮನಾಥ್ ಭಾರ್ತಿಯನ್ನು ಕಣಕ್ಕಿಳಿಸಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಮೀನಾಕ್ಷಿ ಲೇಖಿ ಅವರು 2,56,504 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆರನೇ ಹಂತ, ಮೇ 25 ರಂದು ಚುನಾವಣೆ ನಡೆಯಲಿದೆ.

ಒಟ್ಟಾರೆ ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ರಂಗೇರುತ್ತಿದ್ದು, 7 ಹಂತಗಳಲ್ಲಿ ನಡೆಯುವ ಮತದಾನದ ವೇಳೆ ಜನನಾಯಕನ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ. ಯಾರ ಕೊರಳಿಗೆ ವಿಜಯದ ಹಾರ ಬೀಳಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ, ರಾಹುಲ್, ಅಮಿತ್ ಶಾ.. 10 VIP ಅಭ್ಯರ್ಥಿಗಳ ಕ್ಷೇತ್ರ, ಎದುರಾಳಿ ಕುರಿತ ಕಂಪ್ಲೀಟ್ ಡೀಟೇಲ್ಸ್..!

https://newsfirstlive.com/wp-content/uploads/2024/03/RAHUL-GANDHI-1-1.jpg

Load More