newsfirstkannada.com

ಗುರು-ಶಿಷ್ಯ ನಡುವೆ ಪ್ರತಿಷ್ಠೆಯ ಫೈಟ್; ದೇವೇಗೌಡರ ಪ್ರತಿಜ್ಞೆ ಬಳಿಕ ಸಿದ್ದರಾಮಯ್ಯಗೆ ಸವಾಲಾಯ್ತು ಆ 2 ಕ್ಷೇತ್ರಗಳು..!

Share :

Published April 1, 2024 at 8:03am

    ಲೋಕಸಭಾ ಎಲೆಕ್ಷನ್​ನಲ್ಲಿ ಗುರು-ಶಿಷ್ಯ ನಡುವೆ ಏರ್ಪಟ್ಟ ಮಹಾ ಸಮರ

    ಮೈಸೂರು-ಚಾಮರಾಜನಗರ ಗೆಲ್ಲಲು ಶಕ್ತಿ-ಸಾಮರ್ಥ್ಯಗಳ ಕ್ರೋಢೀಕರಣ

    ಮಾಜಿ ಪ್ರಧಾನಿಗಳ ಹೇಳಿಕೆಯನ್ನ ಸವಾಲಾಗಿ ಸ್ವೀಕರಿಸಿದ್ರಾ ಸಿದ್ದರಾಮಯ್ಯ?

ರಾಜ್ಯ ರಾಜಕೀಯದಲ್ಲಿ ಮತ್ತೆ ಗುರು-ಶಿಷ್ಯರ ಕಾಳಗ ಸದ್ದು ಗದ್ದಲ ಎಬ್ಬಿಸಿದೆ. ಹಳೆ ಮೈಸೂರು ಕೋಟೆ ವಶಕ್ಕೆ ಗೌಡರು ರಣತಂತ್ರ ಸಿದ್ಧಪಡಿಸ್ತಿದ್ದಾರೆ. ತವರಲ್ಲೇ ಸಿದ್ದರಾಮಯ್ಯರನ್ನ ಹಣಿಯೋ ಹಳೆ ವಿದ್ಯೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಈ ಬೆನ್ನಲ್ಲೆ ಸಿದ್ದುಗೆ ಮೈಸೂರು ಕೈತಪ್ಪುವ ಭೀತಿ ಕಾಡ್ತಿದೆ ಅನಿಸ್ತಿದೆ. ಹೀಗಾಗಿ ಸಿಎಂ ಮತ್ತೆ ಮೈಸೂರಿನತ್ತ ಮುಖ ಮಾಡಿದ್ದು, ಮೈಸೂರು ಗೆಲ್ಲಲು ಪ್ರತಿಷ್ಠೆ ಪಣಕ್ಕೆ ಒಡ್ಡಿದ್ದಾರೆ.

ಗರ್ವದ ಮಾತುಗಳು ಬೇಡ.. ನಿಮ್ಮ ಅಧಿಕಾರದ ಅಹಂಕಾರವನ್ನ ಇಳಿಸ್ತೀನಿ. ಇದು 91 ವರ್ಷದ ರಾಜ್ಯ ರಾಜಕೀಯದ ಭೀಷ್ಮನ ಪ್ರತಿಜ್ಞೆ. ಹಳೆ ಮೈಸೂರು ಭಾಗದ ಚಕ್ರವರ್ತಿ ದೇವೇಗೌಡರು, ಮಾತಿನ ಮೂಲಕವೆ ಗುಡುಗಿದ ಪರಿ. ಈ ಗುಡುಗು ಗೌಡರ ಪ್ರತಿಜ್ಞೆಯನ್ನ ಮೆಟ್ಟಿನಿಲ್ಲುವ ಸಾಹಸ ಅಸಾಧ್ಯ ಅನ್ನೋದು ಬಲ್ಲ ಸಿದ್ದರಾಮಯ್ಯರಿಗೆ ಈಗ ಆತಂಕ. ಆ ಆತಂಕವೇ ಮತ್ತೆ 3 ದಿನಗಳ ಕಾಲ ಮೈಸೂರು ಪ್ರವಾಸಕ್ಕೆ ದೂಡಿದೆ.

ಪ್ರತಿಷ್ಠೆಯಾದ ಮೈಸೂರು, ಚಾಮರಾಜನಗರ ಲೋಕ ಕಣ!

ಇಲ್ಲಿವರೆಗೆ ಇದ್ದಿದ್ದೆ ಒಂದು, ಮುಂದೆ ನಡೆಯೋದು ಯುದ್ಧ. ಇದು ರಣರಣ ಯುದ್ಧ. ರಾಜ್ಯ ರಾಜಕೀಯವನ್ನೇ ಅರೆದು ಕುಡಿದ ಮದಗಜಗಳ ಕಾಳಗ. ಗುರು-ಶಿಷ್ಯ ನಡುವೆಯೇ ಏರ್ಪಟ್ಟ ಮಹಾ ಸಮರ. ಈ ಮಹಾ ಸಮರಕ್ಕೆ ಭರ್ತಿ 2 ದಶಕದ ಇತಿಹಾಸ. ಇಲ್ಲಿ ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಸದಾ ಹೆಡೆಯೆತ್ತಿ ನಡೆಯುವ ನೃತ್ಯ.. ರಾಜ್ಯದಲ್ಲೀಗ ಮತ್ತೆ ಹಮ್ಮುರಬಿ ಶಾಸನಗಳು ಚಾಲ್ತಿಗೆ ಬಂದಿವೆ.

ಗೌಡರ ಗುಡುಗಿದ ಮೇಲೆ ಮಳೆ ಬರೋದು ನಿಶ್ಚಿತ.. ಸಿಡಿಲು ಅಬ್ಬರಿಸೋದು ಖಚಿತ. ಮತದ ಹೊಳೆ ಕೊಚ್ಚಿ ಹೋಗೋದು ಸ್ಪಷ್ಟ. ಹಾಗಾಗೇ ವಾರದ ಹಿಂದೆ ನಾಲ್ಕು ದಿನ ಮೈಸೂರಲ್ಲಿ ಠಿಕಾಣಿ ಹೂಡಿದ್ದ ಸಿದ್ದರಾಮಯ್ಯ, ಈಗ ಮತ್ತೆ 3 ದಿನ ಮೈಸೂರಲ್ಲಿ ಬಿಡಾರ ಹೂಡ್ತಿದ್ದಾರೆ. ಮೈಸೂರು-ಚಾಮರಾಜನಗರ ಗೆಲ್ಲಲು ಶಕ್ತಿ, ಯುಕ್ತಿ, ಸಾಮರ್ಥ್ಯಗಳ ಕ್ರೋಢೀಕರಣಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಗರ್ವಭಂಗ ಮಾಡಬೇಕೆಂಬ ಗೌಡರ ಹೇಳಿಕೆಯನ್ನ ಸಿಎಂ ಸವಾಲಾಗಿ ಸ್ವೀಕರಿಸಿದಂತೆ ಕಾಣ್ತಿದೆ.

ಸಿಎಂ ಮತ್ತೆ ಮೈಸೂರು ಪ್ರವಾಸ!

  • ಮೂರು ದಿನಗಳ ಕಾಲ ಸಿಎಂ ಮೈಸೂರು ಜಿಲ್ಲಾ ಪ್ರವಾಸ
  • ಬೆಳಗ್ಗೆ 10.15ಕ್ಕೆ ಹೆಚ್‌ಎಎಲ್​ನಿಂದ ಮೈಸೂರು ಪ್ರಯಾಣ
  • ವರುಣಾ ಕ್ಷೇತ್ರದಲ್ಲಿ ಎಲೆಕ್ಷನ್​ ಪ್ರಚಾರ ಸಭೆ ಆಯೋಜನೆ
  • ನಂತರ ಬಿಷಪ್​ರನ್ನ ಭೇಟಿ ಮಾಡಲಿರುವ ಸಿದ್ದರಾಮಯ್ಯ
  • ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಸಿದ್ದು
  • ಮಂಗಳವಾರ ಚಾಮರಾಜ ಕ್ಷೇತ್ರದ ಶಂಕರಮಠಕ್ಕೆ ಭೇಟಿ
  • ಬಳಿಕ ಬೆಳಗ್ಗೆ 11 ಗಂಟೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿ
  • ಸಂಜೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದು ಮತಬೇಟೆ
  • ಮಂಗಳವಾರವೂ ಮೈಸೂರಿನಲ್ಲೇ ಸಿದ್ದರಾಮಯ್ಯ ವಾಸ್ತವ್ಯ
  • ಬುಧವಾರ ಬೆಳಗ್ಗೆ ಸುತ್ತೂರು ಮಠಕ್ಕೆ ಸಿಎಂ ಸಿದ್ದು ಭೇಟಿ
  • ಬೆಳಗ್ಗೆ 11 ಗಂಟೆಗೆ ಚಾಮರಾಜನಗರದತ್ತ ಸಿಎಂ ಪ್ರವಾಸ
  • ಅಭ್ಯರ್ಥಿ ಸುನಿಲ್​ ಬೋಸ್​ ನಾಮಪತ್ರ ಸಲ್ಲಿಕೆ ವೇಳೆ ಭಾಗಿ
  • ಮ.1 ಗಂಟೆ, ಮೈಸೂರು ಕ್ಷೇತ್ರದ ಲಕ್ಷ್ಮಣ್​​​ ನಾಮಪತ್ರ ಸಲ್ಲಿಕೆ

ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿರುವ ಶ್ರೀನಿವಾಸಪ್ರಸಾದ್​ರನ್ನ ಭೇಟಿ ಮಾಡಿ ಸಿದ್ದು ಶುಭ ಕೋರುವ ಸಾಧ್ಯತೆ ಇದೆ. ಇದೇ ನೆಪದಲ್ಲಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗ್ತಿದೆ. ಮೈಸೂರು-ಚಾಮರಾಜನಗರ ಕ್ಷೇತ್ರದ ಗೆಲುವು ಮೈತ್ರಿ ಪಕ್ಷಗಳು ಮತ್ತು ಮುಖ್ಯಮಂತ್ರಿಗೆ ಪ್ರತಿಷ್ಠೆಯಾಗಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುರು-ಶಿಷ್ಯ ನಡುವೆ ಪ್ರತಿಷ್ಠೆಯ ಫೈಟ್; ದೇವೇಗೌಡರ ಪ್ರತಿಜ್ಞೆ ಬಳಿಕ ಸಿದ್ದರಾಮಯ್ಯಗೆ ಸವಾಲಾಯ್ತು ಆ 2 ಕ್ಷೇತ್ರಗಳು..!

https://newsfirstlive.com/wp-content/uploads/2024/04/SIDDU_HDK-1.jpg

Load More