/newsfirstlive-kannada/media/post_attachments/wp-content/uploads/2024/05/SMG_HUSBAND_DIED.jpg)
ಶಿವಮೊಗ್ಗ: ಪತಿಯ ಸಾವಿನ ನಡುವೆಯು ಮಹಿಳೆಯೊಬ್ಬರು ದುಃಖದಲ್ಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ ಬೇರೆಯವರಿಗೆ ಮಾದರಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗೋಡಿನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಕೆಟ್ಟು ನಿಂತ ಟಿಪ್ಪರ್ಗೆ ವೇಗವಾಗಿ ಬಂದು ಬೈಕ್ ಡಿಕ್ಕಿ.. ಯುವಕ ಸಾವು
ಆಡುಗೋಡಿಯ ನಿವಾಸಿ ಕಲಾವತಿ ಎನ್ನುವ ಮಹಿಳೆಯ ಪತಿ ವೆಂಕಟೇಶ್ ಇಂದು ಬೆಳಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಹಿಳೆ ವೋಟ್ ಹಾಕಲು ತೆರಳುವುದಕ್ಕೂ ಮೊದಲೇ ಗಂಡ ಸಾವನ್ನಪ್ಪಿರುವ ವಿಷಯ ತಿಳಿದಿದೆ. ಗಂಡ ಸಾವನ್ನಪ್ಪಿರುವ ಸುದ್ದಿ ತಿಳಿದ ಮೇಲೂ ಮಹಿಳೆ ಮತದಾನ ಮಾಡಿದ್ದಾರೆ. ಗಂಡನಿಗೆ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಕಾರಣ ಅವರ ನೆನಪಲ್ಲಿ ಪತ್ನಿ ಮತ ಚಲಾವಣೆ ಮಾಡಿದ್ದಾರೆ. ತನ್ನ ಗಂಡನ ತೃಪ್ತಿಗಾಗಿ ವೋಟ್ ಹಾಕಲೇಬೇಕು ಎಂದು ಕಲಾವತಿಯವರು ಮತ ಚಲಾಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ