Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್​ ಅಬ್ಬರ, ಎಲ್ಲಿ?

author-image
Bheemappa
Updated On
Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್​ ಅಬ್ಬರ, ಎಲ್ಲಿ?
Advertisment
  • ಉತ್ತರ ಕರ್ನಾಟಕದತ್ತ ಕಾಂಗ್ರೆಸ್​-BJP ಕಣ್ಣು, ಗೆಲುವಿಗೆ ಕಸರತ್ತು
  • ವಿಜಯನಗರಕ್ಕೆ ಸಿಎಂ ಸಿದ್ದರಾಮಯ್ಯ, DCM ಶಿವಕುಮಾರ್​ ಲಗ್ಗೆ
  • ಪ್ರಿಯಾಂಕಾ ಗಾಂಧಿ ಕಲಬುರಗಿಗೆ ಯಾವಾಗ ಬರಲಿದ್ದಾರೆ ಗೊತ್ತಾ?

ಇಂದು ರಾಜ್ಯದ ಲೋಕಸಭಾ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿಯಾಗಲಿದ್ದಾರೆ. ಬಾಗಲಕೋಟೆ, ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿ - ಕೈ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿರುವ ಕೈ ನಾಯಕಿ

ರಂಗೇರಿದ ಬಾಗಲಕೋಟೆ ಲೋಕಸಭಾ ರಣಕಣ

ಕರ್ನಾಟಕದ 2ನೇ ಹಂತದ ಲೋಕಸಭಾ ಚುನಾವಣೆ ರಂಗೇರ ತೊಡಗಿದೆ. ಕೇಂದ್ರದ ಘಟಾನುಘಟಿ ನಾಯಕರು ರಾಜ್ಯಕ್ಕೆ ಬಂದು ಅಬ್ಬರದ ಮತಯಾಚನೆ ಮಾಡ್ತಿದ್ದಾರೆ. ಕಾಂಗ್ರೆಸ್​, ಬಿಜೆಪಿ ಅಭ್ಯರ್ಥಿಗಳು ಎಲ್ಲ ಕಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬರ್ತಿರೋದು ಬಾಗಲಕೋಟೆ ಅಖಾಡದಲ್ಲಿ ಸಂಚಲನ ಸೃಷ್ಟಿಸಿದೆ.

publive-image

ಇದನ್ನೂ ಓದಿ: ನಗುನಗುತಾ ಕಳುಹಿಸಿಕೊಡಿ ಎಂದಿದ್ರಂತೆ ಶ್ರೀನಿವಾಸ್ ಪ್ರಸಾದ್.. ಅಪ್ಪನ ಕುರಿತು ಹಿರಿಯ ಮಗಳು ಭಾವುಕ ನುಡಿಗಳು

ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಮೋದಿ ಮತ್ತು ಪ್ರಿಯಾಂಕಾ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11.20ಕ್ಕೆ ಬೆಳಗಾವಿಗೆ ಆಗಮಿಸುವ ಪ್ರಿಯಾಂಕಾ ಗಾಂಧಿ, ಬೆಳಗಾವಿಯಿಂದ ಜಮಖಂಡಿಗೆ ಹೆಲಿಕಾಪ್ಟರ್​ನಲ್ಲಿ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪರ ಪ್ರಚಾರ ಮಾಡಲಿದ್ದಾರೆ. ಬಳಿಕ ಜಮಖಂಡಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಳಗಾವಿ ಮಾರ್ಗವಾಗಿ ಕಲಬುರಗಿ ಕಡೆ ಪ್ರಯಾಣ ಬೆಳೆಸಲಿದ್ದಾರೆ

ಕಲಬುರಗಿಯಲ್ಲೂ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್​-ಬಿಜೆಪಿ ಸಜ್ಜು

ಬಾಗಲಕೋಟೆ ಮಾತ್ರವಲ್ಲ, ಕಲಬುರಗಿಯಲ್ಲೂ ಇವತ್ತು ಕಾಂಗ್ರೆಸ್​ ಮತ್ತು ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ. ಬಾಗಲಕೋಟೆಯಲ್ಲಿ ಸಮಾವೇಶದ ಬಳಿಕ ಪ್ರಿಯಾಂಕಾ ಗಾಂಧಿ, ಕಲಬುರಗಿಗೆ ತೆರಳಲಿದ್ದಾರೆ. ಕಲಬುರಗಿಯ ಸೇಡಂನಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ಪರ ಮತಯಾಚನೆ ಮಾಡಲಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕಲಬುರಗಿ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಜೇವರ್ಗಿಯಲ್ಲಿ ವಿಯೇಂದ್ರ ರೋಡ್​ಶೋ ನಡೆಸಿದ್ರೆ, ಚಿತ್ತಾಪುರದಲ್ಲಿ ಸಿ.ಟಿ.ರವಿ ಪ್ರಚಾರ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್​ ಪರ ಕ್ಯಾಂಪೇನ್​ ಮಾಡಲಿದ್ದಾರೆ.

ಇದನ್ನೂ ಓದಿ:ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

publive-image

ವಿಜಯನಗರ ಜಿಲ್ಲೆಯಲ್ಲಿ ಸಿಎಂ, ಡಿಸಿಎಂ ಕ್ಯಾಂಪೇನ್​

ಇನ್ನು ಮೋದಿ ಬೆನ್ನಲ್ಲೇ ವಿಜಯನಗರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಲಗ್ಗೆ ಇಡಲಿದ್ದಾರೆ. ಕೂಡ್ಲಗಿಯಲ್ಲಿ ಬಹಿರಂಗ ಸಮಾವೇಶ ನಡೆಸಿ, ಈ.ತುಕಾರಾಂ ಪರ ಮತ ಬೇಟೆಯಾಡಲಿದ್ದಾರೆ. ದಕ್ಷಿಣದ ಮತಯುದ್ಧ ಮುಗಿದ ಬಳಿಕ, ಉತ್ತರ ಕರ್ನಾಟಕದತ್ತ ಕಾಂಗ್ರೆಸ್​-ಬಿಜೆಪಿ ಕಣ್ಣು ನೆಟ್ಟಿದ್ದು, ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಭಾರೀ ಕಸರತ್ತು ಮಾಡ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment