/newsfirstlive-kannada/media/post_attachments/wp-content/uploads/2024/04/PM_MODI-2.jpg)
ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ ಪತ್ರವನ್ನು ದೆಹಲಿ ನಿವಾಸಿಗಳಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೊಯಲ್, ಜೈ ಶಂಕರ್, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದರು. ಭಾಷಣದಲ್ಲಿ ಪ್ರಣಾಳಿಕೆ ಬಗ್ಗೆ ಹೇಳಿದಂತಹ ಹಲವು ಪ್ರಮುಖ ಅಂಶಗಳು ಈ ಕೆಳಕಂಡತೆ ಇವೆ.
- ಅಹಮದಾಬಾದ್- ಮುಂಬೈ ನಡುವೆ ಬುಲೆಟ್ ಟ್ರೈನ್ ಕಾರ್ಯ ನಡೆಯುತ್ತಿದೆ
- ಮುಂದಿನ ದಿನಗಳಲ್ಲಿ ದಕ್ಷಿಣ ಭಾರತ, ಉತ್ತರ ಭಾರತದಲ್ಲೂ ಬುಲೆಟ್ ಟ್ರೈನ್
- ದೇಶದ ಉತ್ತರ ಭಾರತದಲ್ಲಿ ಒಂದು, ದಕ್ಷಿಣ ಭಾರತದಲ್ಲಿ ಮತ್ತೊಂದು ಬುಲೆಟ್ ಟ್ರೇನ್
- 1,000ಕ್ಕೂ ಹೆಚ್ಚು ಹೊಸ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ
- ಉದ್ಯೋಗ ಸೃಷ್ಟಿಯ ಜೊತೆಗೆ ಭಾರತದ ನಗರಗಳನ್ನ ಸಂಪರ್ಕಿಸುವ ಕೆಲಸ
- ಒಂದೇ ಭಾರತದ 3 ವರ್ಗದ ಸ್ಲೀಪರ್, ಚೇರ್ ಕಾರ್ ಮತ್ತು ಮೆಟ್ರೋ
- ಮುಂದಿನ 5 ವರ್ಷ ಬಡವರಿಗೆ ಪಡಿತರ ಮುಂದುವರೆಯಲಿದೆ
- ಬಡವರ ತಟ್ಟೆ ಖಾಲಿ ಇಡಲು ಬಿಡಲ್ಲ, ಇದು ಮೋದಿ ಗ್ಯಾರಂಟಿ
ಇದನ್ನೂ ಓದಿ: ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ದೆಹಲಿಯ ನಿವಾಸಿಗೆ ಮೊದಲ ಸಂಕಲ್ಪ ಪತ್ರ ವಿತರಣೆ
ಇದನ್ನೂ ಓದಿ: ವಿಶ್ವದಾದ್ಯಂತ ರಾಮಾಯಣ ಹಬ್ಬ, ಒಂದು ದೇಶ, ಒಂದು ಚುನಾವಣೆ -ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್ ಇಲ್ಲಿದೆ..!
- ಜನಔಷಧಿ ಮೂಲಕ 80ರಷ್ಟು ಕಡಿಮೆ ದರದಲ್ಲಿ ಔಷಧ ಸಿಗ್ತಿದೆ
- ಆಯುಷ್ಮಾನ್ ಭಾರತದ ಮೂಲಕ ಕುಟುಂಬಕ್ಕೆ 5 ಲಕ್ಷ ರೂ.ಗಳು
- 70 ವರ್ಷದ ಮೇಲ್ಪಟ್ಟವರನ್ನು ಆಯುಷ್ಮಾನ್ ಅಡಿ ತರಲಾಗುತ್ತೆ
- ಇದರಿಂದ ಎಲ್ಲರಿಗೂ 5 ಲಕ್ಷ ರೂಗಳವರೆಗೆ ಉಚಿತ ಚಿಕಿತ್ಸೆ ಸಿಗುತ್ತೆ
- ಮೂರು ಕೋಟಿ ಮನೆಗಳನ್ನ ನಿರ್ಮಾಣ ಮಾಡಲು ತೀರ್ಮಾನ
- ಬಡವರಿಗೆ ಕಡಿಮೆ ದರದಲ್ಲಿ ಸಿಲಿಂಡರ್ ವ್ಯವಸ್ಥೆ ಮಾಡಲಾಗುತ್ತೆ
- ವಿದ್ಯುತ್ ದರವನ್ನ ಜಿರೋ ಮಾಡಲು ತೀರ್ಮಾನ ಮಾಡಲಾಗಿದೆ
- ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ
- ಇದರಿಂದ ಕೋಟಿ ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಆಗುತ್ತೆ
- ಮುದ್ರಾ ಯೋಜನೆ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗುತ್ತೆ
- ಬೀದಿಬದಿ ವ್ಯಾಪಾರಿಗಳ ಹಣವನ್ನ 50 ಸಾವಿರದಿಂದ ಮತ್ತಷ್ಟು ಏರಿಕೆ
- ಯಾವ ವ್ಯಕ್ತಿಗೆ ಯಾರು ಇಲ್ಲವೋ ಅವರಿಗೆ ಮೋದಿ ಇರುತ್ತಾರೆ
- ತೃತೀಯ ಲಿಂಗ ಸಮುದಾಯಕ್ಕೂ ಆಯುಷ್ಮಾನ್ ಭಾರತ್ ಯೋಜನೆ
- ಮುಂದಿನ 5 ವರ್ಷ ನಾರಿಶಕ್ತಿಯ ವರ್ಷ, 1 ಕೋಟಿ ಲಕ್ಪತಿ ದೀದಿ ಆಗಿದೆ
- ಈ ಮೂಲಕ ಐಟಿ, ಪ್ರವಾಸೋದ್ಯಮ ಸೇವೆ, ಕ್ಷೇತ್ರದಲ್ಲಿ ತರಬೇತಿ
- ಸದ್ಯ 1 ಕೋಟಿ ಲಕ್ಪತಿ ದೀದಿ, ಮುಂದೆ ಅದನ್ನ 3 ಕೋಟಿಗೆ ಏರಿಕೆ
- ಗ್ರಾಮೀಣ ಮಹಿಳೆಯರಿಗೆ ಡ್ರೋನ್ ಪೈಲೆಟ್ ಮೂಲಕ ಸ್ವಾವಲಂಬಿ
- ಕ್ರೀಡಾರಂಗದಲ್ಲಿ ವಿಶೇಷವಾಗಿ ಹೊಸ ಹೊಸ ಮಿಷನ್ ತರಲಾಗುತ್ತದೆ
- ಸವ್ರೈವಲ್ ಕ್ಯಾನ್ಸರ್ಗಾಗಿ ವಿಶೇಷ ಯೋಜನೆ ಜಾರಿ ಮಾಡಲಾಗಿದೆ
- ರೈತರ ವರ್ಗಕ್ಕೆ ಉತ್ತೇಜಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ತರಲಾಗಿದೆ
- ಪಿಎಂ ಕಿಸಾನ್ ಸಮ್ಮಾನ್ ಮೂಲಕ ಇನ್ಮುಂದೆಯು ಹಣ ತಲುಪಲಿದೆ
- ನಾವು ವಿಕ್ಷಿತ್ ಭಾರತ ಸಂಕಲ್ಪ ಪತ್ರವನ್ನ ದೇಶದ ಜನರ ಮುಂದಿಟ್ಟಿದ್ದೆವೆ
- ಪ್ರಣಾಳಿಕೆ ತಯಾರು ಮಾಡಿದಕ್ಕೆ ರಾಜನಾಥ್ ಸಿಂಗ್ ತಂಡಕ್ಕೆ ಅಭಿನಂದನೆ
- ಇಡೀ ದೇಶವೇ ಬಿಜೆಪಿಯ ಪ್ರಣಾಳಿಕೆಗಾಗಿ ಕಾದು ಕುಳಿತಿದೆ- ಮೋದಿ
- ಯಾಕಂದ್ರೆ ಈ ಹಿಂದಿನ ಪ್ರಣಾಳಿಕೆಯ ಎಲ್ಲವನ್ನೂ ಅನುಷ್ಠಾನ ಮಾಡಿದೆ
- ಪ್ರಣಾಳಿಕೆ ಯುವಶಕ್ತಿ, ನಾರಿಶಕ್ತಿ, ಗರೀಬ್ ಮತ್ತು ಕಿಸಾನ್ ಮೇಲೆ ನಿಂತಿದೆ
- ಸ್ಟಾರ್ಟಪ್, ಹೈವ್ಯಾಲ್ಯೂವ್ ಸರ್ವೀಸ್, ಯುವ ಭಾರತದ ಪ್ರತಿಬಿಂಬವಿದೆ
- 10 ವರ್ಷದಲ್ಲಿ 25 ಕೋಟಿ ಜನ ಬಡತನ ರೇಖೆಯಿಂದ ಮುಕ್ತವಾಗಿದ್ದಾರೆ
- ಮೀನುಗಾರರಿಗೆ ವಿಶೇಷ ಮೀನು ಸಾಕಾಣಿಕೆ ಮತ್ತು ಮುತ್ತಿನ ಕೃಷಿಗೆ ಸಹಕಾರ
- ನ್ಯಾನೋ ಯೂರಿಯಾಗೆ ಮತ್ತಷ್ಟು ಒತ್ತು ನೀಡಲಾಗುವುದು- ಪ್ರಧಾನಿ ಮೋದಿ
ಇದನ್ನೂ ಓದಿ: 3ನೇ ಮಹಾಯುದ್ಧದ ಆತಂಕ.. ಇಸ್ರೇಲ್ ಮೇಲೆ 200 ಡ್ರೋನ್, ಭಾರೀ ಮಿಸೈಲ್ಸ್ ಉಡಾಯಿಸಿದ ಇರಾನ್
ಇದನ್ನೂ ಓದಿ: ಇದನ್ನೂ ಓದಿ: ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ
- ಇಡೀ ಭಾರತವನೇ ಫುಡ್ ಪ್ರೊಸೆಸಿಂಗ್ ಹಬ್ ಮಾಡಲಾಗುವುದು
- ಇದು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿಯ ಜತೆಗೆ ಸ್ವಾವಲಂಬನೆ
- 2025 ಅನ್ನು ಜನಜಾತಿಯಾ ಗೌರವ ವರ್ಷವೆಂದು ಆಚರಣೆ ಮಾಡಲಾಗುವುದು
- ವಿಶ್ವದ ಟೂರಿಸಮ್ ಅನ್ನು ಭಾರತದ ಮೂಲಕ ಜೊಡಣೆ ಮಾಡಲಾಗುವುದು
- ಹೊಯ್ಸಳ ಪಾರಂಪರಿಕ ಸ್ಥಳಗಳ ಬಗ್ಗೆ ವಿಶ್ವದ ಮುಂದೆ ತೆರೆದಿಡಲಾಗುವುದು
- ಹೋಂಸ್ಟೇ ಮೂಲಕ ಮಹಿಳೆಯರಿಗೆ ಸ್ವಾವಲಂಬನೆಯತ್ತ ಪ್ರಯಾಣ
- ಹೈವೇಗಳಲ್ಲಿ ಡ್ರೈವರ್ಗಳಿಗಾಗಿ ವಿಶ್ರಾಂತಿ ಪಡೆಯಲು ಸೌಲಭ್ಯ ಒದಗಿಸಲಾಗುತ್ತೆ
- ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯ ಭರವಸೆ ನೀಡಿದ ಬಿಜೆಪಿ
- ಬಿಜೆಪಿಯ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯ ಭರವಸೆ
- ದೇಶದಲ್ಲಿ ಒನ್ ನೇಷನ್, ಒನ್‌ಎಲೆಕ್ಷನ್ ಜಾರಿ ಬಗ್ಗೆ ಮತ್ತೊಮ್ಮೆ ಭರವಸೆ
- ಭಾರತದಲ್ಲಿ ಸುಭದ್ರ ಸರ್ಕಾರ ಇರಬೇಕಾಗಿರೋದು ತುಂಬಾ ಮುಖ್ಯವಾಗಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ