newsfirstkannada.com

ಅಡಕತ್ತರಿಯಲ್ಲಿ ಸುಮಲತಾ; ಹಾಲಿ ಸಂಸದೆ ಮುಂದೆ 5 ಆಯ್ಕೆಗಳು ಬಿಟ್ಟರೆ ಬೇರೆ ದಾರಿಯೇ ಇಲ್ಲ..!

Share :

Published March 14, 2024 at 1:20pm

    ಹಾಲಿ ಸಂಸದೆ ಸುಮಲತಾ ಪ್ಲಾನ್ ಸಂಪೂರ್ಣ ಉಲ್ಟಾ ಪಲ್ಟಾ

    ಕಳೆದ ಬಾರಿ ಇದ್ದ ವಾತಾವರಣ ಈ ಬಾರಿ ಸುಮಲತಾ ಪರ ಇಲ್ಲ

    ಸಂಸದೆ ಸುಮಲತಾ ಮುಂದಿರೋ ಆಯ್ಕೆಗಳು ಏನೇನು?

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡೋದು ಫಿಕ್ಸ್ ಆಗಿದೆ. ನಾಳೆ ಕಾರ್ಯಕರ್ತರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಈವರೆಗೆ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಸಹಜವಾಗಿಯೇ ನಿರಾಸೆ ಆಗಿದೆ. ಹಾಲಿ ಸಂಸದೆ ಸುಮಲತಾ ಪ್ಲಾನ್ ಸಂಪೂರ್ಣ ಉಲ್ಟಾ ಪಲ್ಟಾ ಆಗಿದ್ದು ಅವರ ಮುಂದಿನ ಆಯ್ಕೆಗಳು ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಸುಮಲತಾ ಮುಂದೇನು?
ಆಯ್ಕೆ 01 : ಮತ್ತೊಮ್ಮೆ ಪಕ್ಷೇತರವಾಗಿ ಕಣಕ್ಕಿಳಿಯೋದು
ಆಯ್ಕೆ 02 : ಬಿಜೆಪಿ ಸೇರಿರೋದ್ರಿಂದ ಮೈತ್ರಿ ಧರ್ಮ ಪಾಲನೆ
ಆಯ್ಕೆ 03: ಬಿಜೆಪಿ ಬೆಂಬಲಿಸಿ ಬೇರೆ ಸ್ಥಾನ ಪಡೆಯೋದು
ಆಯ್ಕೆ 04: ರಾಜಕೀಯದಿಂದ ದೂರ ಸರಿಯೋ ಸಾಧ್ಯತೆ
ಆಯ್ಕೆ 05: ಶಾಸಕಿ ಅಥವಾ ರಾಜ್ಯಸಭೆಗೆ ಆಯ್ಕೆ ಸಾಧ್ಯತೆ

ಇಕ್ಕಟ್ಟಿಗೆ ಸಿಲುಕಿದ್ರಾ ಸುಮಲತಾ?
ಒಂದು ವೇಳೆ ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ರೆ ಗೆಲುವು ಅಷ್ಟು ಸುಲಭವಲ್ಲ. ಯಾಕಂದರೆ ಕಳೆದ ಬಾರಿ ಇದ್ದ ವಾತಾವರಣ ಈ ಬಾರಿ ಸುಮಲತಾ ಪರ ಇಲ್ಲ. ಕೆಲ ಅಂಬಿ ಬೆಂಬಲಿಗರು ಬಿಟ್ಟರೆ ಬಹುತೇಕರು ಸಂಸದೆ ಜೊತೆ ಇಲ್ಲ. ಬಿಜೆಪಿ, ರೈತ‌ಸಂಘದ ಬೆಂಬಲ ಹಾಲಿ ಸಂಸದೆ ಸುಮಲತಾಗೆ ಅವರಿಗೆ ಸಿಗಲ್ಲ. ಕಳೆದ ಬಾರಿ ಇದ್ದ ಕೈ ನಾಯಕರು, ಕಾರ್ಯಕರ್ತರ ಸಪೋರ್ಟ್ ಕೂಡ ಸುಮಲತಾ ಅವರಿಗೆ ಇಲ್ಲ. ಹೀಗಾಗಿ ಬಿಜೆಪಿ ಬೆಂಬಲಿಸಿ ಅಡಕತ್ತರಿಯಲ್ಲಿ ಸಿಲುಕಿದ್ರಾ ಎಂಬ ಪ್ರಶ್ನೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಡಕತ್ತರಿಯಲ್ಲಿ ಸುಮಲತಾ; ಹಾಲಿ ಸಂಸದೆ ಮುಂದೆ 5 ಆಯ್ಕೆಗಳು ಬಿಟ್ಟರೆ ಬೇರೆ ದಾರಿಯೇ ಇಲ್ಲ..!

https://newsfirstlive.com/wp-content/uploads/2024/03/SUMALATHA-1.jpg

Load More