/newsfirstlive-kannada/media/post_attachments/wp-content/uploads/2024/07/Parliament2.jpg)
ದೇಶದಲ್ಲಿ 2026ರ ವೇಳೆಗೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಆಗುವ ಸಾಧ್ಯತೆ ಇದೆ. ಜನ ಸಂಖ್ಯೆಗೆ ಅನುಗುಣವಾಗಿ ಏರಿಕೆಯಾಗಲಿದ್ದು, ಕರ್ನಾಟಕದಲ್ಲಿ 28 ರಿಂದ 36ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಸದ್ಯ ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543. ಮುಂದಿನ ದಿನಗಳಲ್ಲಿ ಅದರ ಸಂಖ್ಯೆ 753ಕ್ಕೆ ಏರಿಕೆಯಾಗಲಿದೆ. ತೆಲಂಗಾಣದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 17 ರಿಂದ 20ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸೂಟ್ಕೇಸ್ನಲ್ಲಿ ಕಾಂಗ್ರೆಸ್ ನಾಯಕಿಯ ಶವ ಪತ್ತೆ; ದೇಶದಲ್ಲಿ ಸಂಚಲನ ಮೂಡಿಸಿದ ಕೇಸ್
ಯಾವೆಲ್ಲ ರಾಜ್ಯದಲ್ಲಿ ಏರಿಕೆ ಸಾಧ್ಯತೆ?
- ಕರ್ನಾಟಕ: 28 ರಿಂದ 36ಕ್ಕೆ ಏರಿಕೆ ಸಾಧ್ಯತೆ
- ತೆಲಂಗಾಣ: 17 ರಿಂದ 20ಕ್ಕೆ ಏರಿಕೆ ಸಾಧ್ಯತೆ
- ಆಂಧ್ರಪ್ರದೇಶ: 25 ರಿಂದ 28ಕ್ಕೆ ಏರಿಕೆ ಸಾಧ್ಯತೆ
- ತಮಿಳುನಾಡು: 39 ರಿಂದ 41ಕ್ಕೆ ಏರಿಕೆ ಸಾಧ್ಯತೆ
- ಕೇರಳ: 20 ರಿಂದ 19ಕ್ಕೆ ಏರಿಕೆ ಸಾಧ್ಯತೆ
- ಉತ್ತರ ಪ್ರದೇಶ: 80ರಿಂದ 128ಕ್ಕೆ ಏರಿಕೆ ಸಾಧ್ಯತೆ
- ಬಿಹಾರ: 40 ರಿಂದ 70ಕ್ಕೆ ಏರಿಕೆ ಸಾಧ್ಯತೆ
- ಮಧ್ಯ ಪ್ರದೇಶ: 29 ರಿಂದ 47ಕ್ಕೆ ಏರಿಕೆ ಸಾಧ್ಯತೆ
- ಮಹಾರಾಷ್ಟ್ರ: 48 ರಿಂದ 68ಕ್ಕೆ ಏರಿಕೆ ಸಾಧ್ಯತೆ
- ರಾಜಸ್ಥಾನ: 25 ರಿಂದ 44ಕ್ಕೆ ಏರಿಕೆ ಸಾಧ್ಯತೆ
ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಭಾರೀ ಏರಿಕೆ ಆಗಲಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಚ್ರ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಭಾರೀ ಏರಿಕೆ ಆಗಲಿದೆ. ಸದ್ಯ ಲೋಕಸಭೆಯಲ್ಲಿ ದಕ್ಷಿಣ ಭಾರತವು ಶೇ.24 ರಷ್ಟು ಲೋಕಸಭಾ ಕ್ಷೇತ್ರ ಹೊಂದಿದೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ದಕ್ಷಿಣ ಭಾರತದ ಪಾಲು ಲೋಕಸಭೆಯಲ್ಲಿ ಶೇಕಡಾ 19ಕ್ಕೆ ಕುಸಿತವಾಗಲಿದೆ. ದಕ್ಷಿಣ ಭಾರತದ ಕ್ಷೇತ್ರಗಳನ್ನು ಗೆಲ್ಲದೇ ಉತ್ತರ ಭಾರತದ ಕ್ಷೇತ್ರಗಳನ್ನು ಗೆದ್ದು ಯಾವುದೇ ಪಕ್ಷ ಬಹುಮತ ಸಾಧಿಸಬಹುದು. ಲೋಕಸಭೆಯಲ್ಲಿ ಬಹುಮತಕ್ಕೆ ದಕ್ಷಿಣ ಭಾರತ ಅನಿವಾರ್ಯವಾಗಲ್ಲ. ಹೀಗಾಗಿ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ, ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಉತ್ತರ ಭಾರತದ ರಾಜ್ಯಗಳನ್ನು ಕ್ಲೀನ್ಸ್ವೀಪ್ ಮಾಡಿದರೆ ಸಾಕಾಗುತ್ತದೆ.
ಇದನ್ನೂ ಓದಿ: ಡಿ.ಕೆ ಶಿವಕುಮಾರ್ ನಡೆ- ನುಡಿಯಿಂದ ರಾಜಕೀಯದಲ್ಲಿ ಸಂಚಲನ.. ಕಾಂಗ್ರೆಸ್ ನಾಯಕರು ಹೇಳುವುದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ