newsfirstkannada.com

‘ಡಾ.ಸಿ.ಎನ್‌ ಮಂಜುನಾಥ್ 5 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ’- ಚನ್ನಪಟ್ಟಣದಲ್ಲಿ ಅಮಿತ್ ಶಾ ಭವಿಷ್ಯ

Share :

Published April 2, 2024 at 7:59pm

  ಚನ್ನಪಟ್ಟಣದಲ್ಲಿ ಮೋದಿ.. ಮೋದಿ ಅಂತ ಘೋಷಣೆ ಕೂಗಿದ ವಿಜಯೇಂದ್ರ

  ಡಾ. ಸಿ.ಎನ್‌ ಮಂಜುನಾಥ್ ಅವ​ರನ್ನು ನೋಡುತ್ತಿದ್ದಂತೆ ಶಿಳ್ಳೆ ಹಾಕಿದ ಜನರು

  ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಫುಲ್ ಅಲರ್ಟ್

ರಾಮನಗರ: ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಡಾ.ಸಿ.ಎನ್ ಮಂಜುನಾಥ್​ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಬಿಜೆಪಿ ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್​ ಶೋಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರೆಲ್ಲ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಈ ವೇಳೆ ಹೂವಿನ ಮಳೆಗೈದರು. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಶಿಳ್ಳೆ, ಕೂಗಾಟ, ನೂಕುನುಗ್ಗಲು ಎಲ್ಲವೂ ಏರ್ಪಟ್ಟಿತ್ತು. ಈ ವೇಳೆ ಅಮಿತ್ ಶಾ ಅವರು ಜನರತ್ತ ಕೈ ಬೀಸುತ್ತಿದ್ದಂತೆ ನೆರೆದಿದ್ದ ಜನರೆಲ್ಲ ಮೋದಿ.. ಮೋದಿ ಎಂದು ಕೂಗಿದರು. ಆಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ಮೋದಿ, ಮೋದಿ ಎಂದು ಕೂಗಿ ಖುಷಿ ಪಟ್ಟರು.

ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಡಾ. ಸಿ.ಎನ್ ಮಂಜುನಾಥ್ ಅವರು ರೋಡ್ ಶೋ ಮಾಡಲು ರಥ ಏರುತ್ತಿದ್ದಂತೆ ಜನರೆಲ್ಲ ಸೇರಿ ಶಿಳ್ಳೆ ಹಾಕಿದರು‌. ಇದರ ಜೊತೆಗೆ ಮಾಜಿ ಸಚಿವ ಅಶ್ವಥ್ ನಾರಾಯಣಗೌಡ ಅವರು ವಂದೇ ಮಾತರಂ ಎಂದು ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಸಿ.ಎನ್ ಮಂಜುನಾಥ್ ಅವರು ಇವತ್ತಿನ‌ ಜನಸಾಗರ ನೋಡಿದರೆ ಗೆಲುವು ನನ್ನದೇ ಅನಿಸುತ್ತೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬದಲಾವಣೆಯ ಗಾಳಿ ಚನ್ನಪಟ್ಟಣದಿಂದಲೇ ಆರಂಭವಾಗಿದೆ. ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ವೇಗ ನೀಡಿದ್ದಾರೆ. ಇದು ಬದಲಾವಣೆಯ‌ ಕಾಲ. ತಾವೆಲ್ಲಾ ನನಗೆ ಆಶೀರ್ವಾದ ಮಾಡಬೇಕೆಂದು ಕೇಳಿಕೊಳ್ಳುವೆ ಎಂದಿದ್ದಾರೆ.

ಅಮಿತ್ ಶಾ ಅವರು ಮಾತನಾಡಿ. ನಾನು ಕರ್ನಾಟಕದ ಜನರಿಗೆ ಮನವಿ ಮಾಡಲು ಬಂದಿದ್ದೇನೆ. ಕರ್ನಾಟಕದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ- ಜೆಡಿಎಸ್ ಖಾತೆಗೆ ನೀಡಿ. ತೆನೆ ಹೊತ್ತ ಮಹಿಳೆ ಹಾಗೂ ಕಮಲಕ್ಕೆ ವೋಟ್ ನೀಡಿದರೆ ನೀವು ಮೋದಿಗೆ ಶಕ್ತಿ ‌ನೀಡಿದಂತೆ. ಮೋದಿ ಈ ಬಾರಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ ಇದೆ. ನಿಮಗೆ ಒಪ್ಪಿಗೆ ಇದೆಯೆ. ಡಾ.ಸಿ.ಎನ್ ಮಂಜುನಾಥ ಅವರು 5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಾ.ಸಿ.ಎನ್‌ ಮಂಜುನಾಥ್ 5 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ’- ಚನ್ನಪಟ್ಟಣದಲ್ಲಿ ಅಮಿತ್ ಶಾ ಭವಿಷ್ಯ

https://newsfirstlive.com/wp-content/uploads/2024/04/AMIT_SHAH_1.jpg

Load More