newsfirstkannada.com

ಕಾಂಗ್ರೆಸ್​, ಬಿಜೆಪಿಯಲ್ಲಿ ಬಂಡಾಯದ ಬಿಸಿ.. ಕಾಗೇರಿ ಪರ ಪ್ರಚಾರಕ್ಕೆ ಬಾರದ ಹೆಗಡೆ, ಶಿವರಾಮ್ ಹೆಬ್ಬಾರ್..!

Share :

Published March 30, 2024 at 10:06am

    ಬಿಜೆಪಿ ಟಿಕೆಟ್​ ಕೊಡದಿದ್ದಕ್ಕೆ ಪ್ರಚಾರಕ್ಕೆ ಬಾರದ ಅನಂತ್ ಕುಮಾರ್ ಹೆಗಡೆ

    ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದಿಂದ ದೂರ, ದೂರ?

    ಬಿಜೆಪಿಗೆ ಭಾವನಾತ್ಮಕ ಪತ್ರ ಬರೆದ ತೇಜಸ್ವಿನಿ, ಸದಸ್ಯತ್ವ ಸ್ಥಾನಕ್ಕೆ ಗುಡ್ ​ಬೈ

ಎಲೆಕ್ಷನ್​ ಬಂದಾಗೊಮ್ಮೆ ಬಂಡಾಯ ಅನ್ನೋದು ಕಾಮನ್​. ಹಾಗಂತ ಅದನ್ನ ನಿರ್ಲಕ್ಷಿಸುವ ಹಾಗೂ ಇಲ್ಲ. ಬಂಡಾಯಕ್ಕೆ ಪಕ್ಷಭೇದವಿಲ್ಲ. ಸದ್ಯ ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಇದೇ ವಾತವರಣ ಇದೆ. ಅದರಲ್ಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರೆಬೆಲ್​ಗಳ ಆಟ, ಪ್ರಾಣಸಂಕಟಕ್ಕೆ ದೂಡಿದೆ.

ಕಾಲಿಟ್ಟ ಕ್ಷೇತ್ರಗಳಲ್ಲೆಲ್ಲ ಬಂಡಾಯ. ಸಿದ್ಧಾಂತಕ್ಕೆ ಬದ್ಧವಾದ ಕ್ಷೇತ್ರಗಳಲ್ಲೂ ಅಸಮಾಧಾನ. ಎಲ್ಲೆಲ್ಲೂ ಕುಟುಂಬ ರಾಜಕಾರಣ. ಕಾರ್ಯಕರ್ತರ ಅವಿರತ ಶ್ರಮವೆಲ್ಲ ಗೌಣ. ಇದು 2024ರ ಲೋಕಸಭಾ ಎಲೆಕ್ಷನ್​​ ಚದುರಂಗದಲ್ಲಿ ಕಾಣಿಸ್ತಿರುವ ಚಿತ್ರಣ. ಹೌದು.. ಈ ಚಿತ್ರಣವೇ ಅಸಮಾಧಾನ ಸ್ಫೋಟಿಸುವಂತೆ ಮಾಡಿದೆ.. ಉತ್ತರದ ಬೀದರ್​ನಿಂದ ದಕ್ಷಿಣದ ಚಾಮರಾಜನಗರ, ಪೂರ್ವದ ಕೋಲಾರದಿಂದ ಪಶ್ಚಿಮದ ಉತ್ತರ ಕನ್ನಡದ ವರೆಗೂ ಕಾಣಿಸ್ತಿರೋದು ಬರೀ ಬಂಡಾಯದ ಬಾವುಟ.

ಚಿತ್ರದುರ್ಗದ ಕಮಲದಲ್ಲಿ ಭಿನ್ನಮತ ಸ್ಫೋಟ, ಏ.3ಕ್ಕೆ ನಾಮಿನೇಷನ್​!

ಮಧ್ಯ ಕರ್ನಾಟಕದ ಚಿತ್ರದುರ್ಗದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್​​ ಕೈತಪ್ಪುತ್ತಿದ್ದಂತೆ ಶಾಸಕ ಎಂ.ಚಂದ್ರಪ್ಪ & ಪುತ್ರ ರಘುಚಂದನ್​​​ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ನಿನ್ನೆ ಬೆಂಬಲಿಗರ ಸಭೆ ಕರೆದಿದ್ದ ಎಂ ಚಂದ್ರಪ್ಪ, ಪಕ್ಷ ಮತ್ತು ಅವರ ನಿರ್ಧಾರಕ್ಕಿಂತ ಕ್ಷೇತ್ರದ ಜನತೆ ಮುಖ್ಯ. ಏಪ್ರಿಲ್​ 3ಕ್ಕೆ ನಾಮಪತ್ರ ಸಲ್ಲಿಕೆ ಫಿಕ್ಸ್​ ಅಂತ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಟೆನ್ಶನ್​ ತಂದೊಡ್ಡಿದ್ದಾರೆ.

ಇಕ್ಬಾಲ್​ ಅನ್ಸಾರಿ ಜೊತೆಗೆ ಸಿಎಂ ರಹಸ್ಯ ಮೀಟಿಂಗ್​!

ಒಂದ್ಕಡೆ ಕೋಲಾರ ಬಂಡಾಯ, ಇನ್ನೊಂದ್ಕಡೆ ಕೊಪ್ಪಳ ಕಲಹ.. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್​​ಗೆ ಹಣ್ಣುಗಾಯಿ ನೀರು ಗಾಯಿ ಮಾಡ್ತಿದೆ. ಕೊಪ್ಪಳದಿಂದ ರಾಜಶೇಖರ್​ ಹಿಟ್ನಾಳ್​ಗೆ ಟಿಕೆಟ್ ನೀಡಲಾಗಿದ್ದು, ಇದು ಕುಟುಂಬ ರಾಜಕಾರಣ ಅಂತ ಕೆಲವರು ಸಿಡಿದೆದ್ದಿದ್ದಾರೆ. ಟಿಕೆಟ್​​ ಘೋಷಣೆ ಬಳಿಕ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮೌನಕ್ಕೆ ಜಾರಿದ್ದು, ಬೆಂಬಲಿಗರನ್ನ ಪ್ರಚಾರಕ್ಕೆ ತೆರಳದಂತೆ ತಡೆ ಹಿಡಿದ್ದಾರೆ ಎನ್ನಲಾಗಿದೆ.. ಈ ಎಲ್ಲ ಕೋಪತಾಪ ಸಿಎಂ ಕಿವಿಗೂ ಬಿದ್ದಿದ್ದು, ಸಚಿವ ತಂಗಡಗಿಗೆ ಅಸಮಾಧಾನದ ಶಮನದ ಹೊಣೆ ನೀಡಲಾಗಿದೆ. ಅಲ್ಲದೆ, ಸ್ವತಃ ಸಿಎಂ ಸಹ ಅನ್ಸಾರಿ ಕರೆದು ಮಾತ್ನಾಡಿದ್ದರೂ ಸಿಟ್ಟು ಬೂದಿಮುಚ್ಚಿದ ಕೆಂಡವಾಗಿದೆ.

ಪ್ರಚಾರಕ್ಕೆ ಹೆಗಡೆ ಬರ್ತಿಲ್ಲ, ಹೆಬ್ಬಾರ್​ ಎಲ್ಲೂ ಕಾಣಿಸ್ತಿಲ್ಲ!

ಇತ್ತ, ಉತ್ತರ ಕನ್ನಡದಲ್ಲಿ ಅಖಾಡ ಗರಿಗೆದರಿದೆ.. ಆದ್ರೆ ಮಾತಿನಶೂರ ಬಿಜೆಪಿ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್​​ ಕೈತಪ್ಪಿದ್ದು ಮನೆಯಿಂದ ಹೊರಗೆ ಬಾರದೆ ಭೂಗತರಾಗಿದ್ದಾರೆ. ಇತ್ತ ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕದೇ ಕೈ ಕೊಟ್ಟಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸಹ ಪಕ್ಷಕ್ಕೆ ಕೈ ಕೊಡ್ತಿರುವಂತೆ ಕಾಣಿಸ್ತಿದೆ.. ಸದ್ಯಕ್ಕೆ ತಟಸ್ಥರಾಗಿರೋ ಹೆಬ್ಬಾರ್​​​, ಎಲೆಕ್ಷನ್​​​ ಪೂರ್ವಭಾವಿ ಸಭೆಗೂ ಗೈರಾಗಿ ಶಾಕ್​​ ನೀಡಿದ್ದಾರೆ.

ಇನ್ನು, ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಡಾ.ತೇಜಸ್ವಿನಿಗೌಡ ಶಾಕ್​​ ನೀಡಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್‌ಬೈ ಹೇಳಿದ್ದಾರೆ. ಒಂದು ಪುಟದ ಭಾವನಾತ್ಮಕ ಪತ್ರ ಬರೆದು, ಪಕ್ಷದಲ್ಲಿನ ಆಂತರಿಕ ವಿಚಾರ ಉಲ್ಲೇಖಿಸಿ ತೇಜಸ್ವಿನಿಗೌಡ ಕಮಲಕ್ಕೆ ಕೊನೆ ಹಾಡಿದ್ದಾರೆ. ತೇಜಸ್ವಿನಿಗೌಡ ನಡೆ ಬಗ್ಗೆ ನ್ಯೂಸ್​ಫಸ್ಟ್​​ ಸರಿಯಾಗಿ ತಿಂಗಳ ಹಿಂದೇ ನಿಖರ ವರದಿ ಬಿತ್ತರಿಸಿತ್ತು.

ಮೂರು ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ.. ಪ್ರಚಾರಕ್ಕೆ ಬಾರದೇ, ಪಕ್ಷದ ಸಭೆಗೂ ಭಾಗವಹಿಸದೇ ಕೆಲವರು ದೂರ ಉಳಿದ್ರೆ, ಇನ್ನು ಕೆಲವರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ.. ಈ ಎಲ್ಲ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಎಲೆಕ್ಷನ್​​ನಲ್ಲಿ ಯಾವ ಮಟ್ಟಿಗೆ ವೋಟ್​​ಗೆ ಕತ್ತರಿ ಹಾಕಿಲಿದೆ ಅನ್ನೋದು ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​, ಬಿಜೆಪಿಯಲ್ಲಿ ಬಂಡಾಯದ ಬಿಸಿ.. ಕಾಗೇರಿ ಪರ ಪ್ರಚಾರಕ್ಕೆ ಬಾರದ ಹೆಗಡೆ, ಶಿವರಾಮ್ ಹೆಬ್ಬಾರ್..!

https://newsfirstlive.com/wp-content/uploads/2024/03/ANATH_KUMAR_HEBBAR.jpg

Load More