newsfirstkannada.com

ಉತ್ತರ ಕನ್ನಡದಲ್ಲಿ ಇತಿಹಾಸ ಮರುಕಳಿಸುತ್ತಾ.. ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ಪ್ಲಾನ್; ಏನದು?

Share :

Published March 22, 2024 at 2:01pm

Update March 22, 2024 at 2:38pm

  ಮರಾಠ ಸಮುದಾಯದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿದ ಕಾಂಗ್ರೆಸ್

  ಈ ಹಿಂದೆ ಅನಂತ್ ಕುಮಾರ್ ಹೆಗಡೆ ಸೋಲಿಸಿದ್ದ ಮಹಿಳಾ ಅಭ್ಯರ್ಥಿ

  ಬಿಜೆಪಿಗೆ ಟಕ್ಕರ್ ಕೊಡಲು ಮರಾಠ ಸಮುದಾಯ ಅಭ್ಯರ್ಥಿಗೆ ಟಿಕೆಟ್

ಉತ್ತರ ಕನ್ನಡ: ಬಿಜೆಪಿಯ ಭದ್ರಕೋಟೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಈ ಬಾರಿಯಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್​ ಮಾಸ್ಟರ್ ಪ್ಲಾನ್ ರೂಪಿಸಿದೆ. ಯೋಜನೆಯಂತೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್​ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.

ಮರಾಠರೇ ಅಧಿಕ ಸಂಖ್ಯೆಯಲ್ಲಿರುವ ಕಿತ್ತೂರು, ಖಾನಾಪುರ ಭಾಗದಲ್ಲೇ ಕಾಂಗ್ರೆಸ್​​ಗೆ ಪ್ರತಿ ಬಾರಿ ಹಿನ್ನಡೆ ಆಗುತ್ತಿತ್ತು. ಈ ಸಲ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್​ ಮರಾಠ ಸಮುದಾಯದ ಅಭ್ಯರ್ಥಿಯಾದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್​ಗೆ ಟಿಕೆಟ್ ಘೋಷಣೆ ಮಾಡಿ ದಾಳ ಉರುಳಿಸಿದೆ. ಕ್ಷೇತ್ರದಲ್ಲಿ ಮರಾಠ ಸಮುದಾಯದ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದರಿಂದ ಕಿತ್ತೂರು, ಖಾನಾಪುರ ಭಾಗದಲ್ಲಿ ಕಾಂಗ್ರೆಸ್​ಗೆ ಹಿನ್ನಡೆಯಾಗುತ್ತಿತ್ತು. ಇದನ್ನು ಮನಗಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿಗೆ ಟಕ್ಕರ್ ಕೊಡಲು ಮಹಿಳಾ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ಈ ಕಿತ್ತೂರು, ಖಾನಾಪುರ ಎರಡು ಬೆಳಗಾವಿ ಜಿಲ್ಲೆಗೆ ಬಂದರೂ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಬಿಜೆಪಿಯ ಈ ಬಾರಿ ಮತಗಳ ಹಿನ್ನಡೆ ತಡೆಯಲು ಕಾಂಗ್ರೆಸ್​ ತಂತ್ರ ರೂಪಿಸಿದೆ. ಇದೇ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆ ಆರು ಬಾರಿ ಗೆಲುವು ಪಡೆದಿದ್ದರು. ಈ ಹಿಂದೆ ಒಮ್ಮೆ ಮಾರ್ಗರೇಟ್ ಆಳ್ವಾ ಅವರಿಂದ ಹೆಗಡೆ ಸೋತಿದ್ದರು. ಈಗ ಡಾ. ಅಂಜಲಿ ನಿಂಬಾಳ್ಕರ್ ಅಭ್ಯರ್ಥಿಯಾಗಿದ್ದು ಕ್ಷೇತ್ರದಲ್ಲಿ ಯಾವ ರೀತಿ ಪ್ರಚಾರ ಕಾರ್ಯ ಕೈಗೊಂಡು ಗೆಲುವು ಪಡೆಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಕನ್ನಡದಲ್ಲಿ ಇತಿಹಾಸ ಮರುಕಳಿಸುತ್ತಾ.. ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ಪ್ಲಾನ್; ಏನದು?

https://newsfirstlive.com/wp-content/uploads/2024/03/ANJALI_NIMBALKAR.jpg

Load More