/newsfirstlive-kannada/media/post_attachments/wp-content/uploads/2024/02/Sumalatha-Ambarish.jpg)
ಮಂಡ್ಯ ಕ್ಷೇತ್ರ ಕೊನೆಗೂ ಜೆಡಿಎಸ್ ಪಾಲಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಕನ್ಫರ್ಮ್ ಆಗಿದೆ. ಆದ್ರೆ ಟಿಕೆಟ್ ಮಿಸ್ ಆಗಿದ್ದಕ್ಕೆ ಸ್ವಾಭಿಮಾನಿ ಸಂಸದೆ ಸುಮಲತಾ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ತಮ್ಮ ಬೆಂಬಲಿಗರ ಸಭೆ ಕರೆದಿದ್ದು ಕುತೂಹಲ ಮೂಡಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಲು ಮೈತ್ರಿ ಪಣ ತೊಟ್ಟಿದೆ. ಇಷ್ಟು ದಿನ ಮಂಡ್ಯ ಕ್ಷೇತ್ರಕ್ಕೆದಿಂದ ಯಾರು ನಿಲ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹೆಚ್‌ಡಿಕೆ ಸ್ಪರ್ಧೆ ಕನ್ಫರ್ಮ್ ಆಗ್ತಿದ್ದಂತೆ ಸ್ವಾಭಿಮಾನಿ ಸುಮಲತಾ ಮೌನಕ್ಕೆ ಜಾರಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀಮತಿ ಸುಮಲತಾ ಅಂಬರೀಶ್ ಅವರನ್ನು ಇಂದು ಭೇಟಿಯಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಿದ್ದು ಈ ನಿಟ್ಟಿನಲ್ಲಿ ತಮ್ಮ ಸ್ವಾಭಿಮಾನದ ಬೆಂಬಲವನ್ನು ಮಾನ್ಯ ಮೋದಿ ಅವರಿಗಾಗಿ… pic.twitter.com/kMEQauL0RH
— Vijayendra Yediyurappa (@BYVijayendra) March 29, 2024
ಟಿಕೆಟ್ ಮಿಸ್ ಆಗಿದ್ದಕ್ಕೆ ‘ಸ್ವಾಭಿಮಾನಿ’ ಅಸಮಾಧಾನ?
ಇಷ್ಟುದಿನ ಮಂಡ್ಯ ಲೋಕ ಟಿಕೆಟ್ ಬಿಜೆಪಿ ಉಳಿಸಿಕೊಳ್ಳಬೇಕೆಂದು ಪಟ್ಟು ಹಿಡಿದಿದ್ದ ಸಂಸದೆ ಸುಮಲತಾ, ಮೈತ್ರಿ ಅಭ್ಯರ್ಥಿ ಆಗುವ ಕನಸು ಕಂಡಿದ್ರು. ಇದಕ್ಕಾಗಿ ಸುಮಲತಾ ದೆಹಲಿಗೆ ಹಾರಿ ಮೋದಿ ಸೇರಿ ಬಿಜೆಪಿ ವರಿಷ್ಠರನ್ನ ಭೇಟಿ ಮಾಡಿ ಟಿಕೆಟ್ಗಾಗಿ ಫೈನಲ್ ಕಸರತ್ತು ನಡೆಸಿದ್ರು. ಆದ್ರೀಗ ಮಂಡ್ಯ ಅಖಾಡಕ್ಕೆ ಹೆಚ್‌ಡಿಕೆ ಕಣಕ್ಕೆ ಇಳಿಯೋದು ಫಿಕ್ಸ್ ಆಗಿದ್ದು, ಸುಮಲತಾ ಆಸೆ, ಕಾವೇರಿಯಲ್ಲಿ ಹುಣಸೆ ತೊಳೆದಂತಾಗಿದೆ.
ಕಳೆದ 20 ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ಸಂಸದೆ ರೆಬೆಲ್ ಲೇಡಿ, ಹೈಕಮಾಂಡ್ ಲೆವೆಲ್‌ನಲ್ಲೂ ಭೇಟಿಯಾಗಿ ಮನೆ ಸೇರಿದ್ರು. ಮಂಡ್ಯ ದಳಕ್ಕೆ ಮೀಸಲಾಗ್ತಿದ್ದಂತೆ ಸುಮಲತಾ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಕೊಟ್ಟು ಅಸಮಾಧಾನ ಶಮನಕ್ಕೆ ಯತ್ನಿಸಿದ್ದಾರೆ. ಭೇಟಿ ನಂತ್ರ ಸುಮಲತಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಅಂತ ವಿಜಯೇಂದ್ರ ಹೇಳ್ತಿದ್ದಾರೆ.
ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಸುಮಲತಾ ಅವರು ಸಕರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ. ಅವರು ಕೂಡ ಅಭಿಮಾನಿಗಳು ಮತ್ತು ಬೆಂಬಲಿಗರ ಜೊತೆ ಮಾತನಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಅವರು ನಮ್ಮ ಜೊತೆಗೆ ಇರುತ್ತಾರೆ. ಮುಂದಿನ ದಿನಗಳಲ್ಲಿ ನಮಗೆ ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸ ಇದೆ.
ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
‘ರೆಬಲ್ ಲೇಡಿ’ಯ ಸೈಲೆಂಟ್ ಪಾಲಿ‘ಟ್ರಿಕ್ಸ್’
ಮಂಡ್ಯ ಜೆಡಿಎಸ್ ಪಾಲಾಗ್ತಿದ್ದಂತೆ ಸ್ವಾಭಿಮಾನಿ ಸುಮಲತಾ, ಸೈಲೆಂಟ್ ಆಗಿದ್ದಾರೆ. ಅಲ್ಲದೆ, ಇವತ್ತು ತಮ್ಮ ಬೆಂಬಲಿಗರ ಜೊತೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ.. ಮಧ್ನಾಹ್ನ 2.30ಕ್ಕೆ ತಮ್ಮ ಮನೆಯಲ್ಲೇ ಸಭೆ ನಡೆಸಲಿರುವ ಸುಮಲತಾ, ರಾಜಕೀಯ ಭವಿಷ್ಯಕ್ಕಾಗಿ ಎಚ್ಚರಿಕೆ ಹೆಜ್ಜೆ ಇಡ್ತಿದ್ದು, ಬೆಂಬಲಿಗರ ಸಭೆ ನಂತ್ರ ನಿರ್ಧಾರ ಪ್ರಕಟಿಸೋದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಹೆಸರು ಹೇಳಿಕೊಂಡು ಓಡಾಟ.. ಮಹತ್ವದ ಘಟ್ಟ ತಲುಪಿದ ರಾಮೇಶ್ವರಂ ಕೆಫೆ ಕೇಸ್ ತನಿಖೆ..!
ಮೊದಲಿಂದಲೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ನನ್ನ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳನ್ನ ಕೇಳಿ ತೆಗೆದುಕೊಳ್ಳುತ್ತೇನೆ. ಅವರ ಅಭಿಪ್ರಾಯ, ಭಾವನೆ ಏನಿದೆ ಎಂಬುದನ್ನು ಕೇಳಬೇಕಾಗಿದೆ.
ಸುಮಲತಾ ಅಂಬರೀಶ್, ಸಂಸದೆ
ಸ್ವಾಭಿಮಾನಿ ನಡೆ ಬಗ್ಗೆ ಇದೀಗ ದಳಪತಿಗಳಿಗೂ ಕೂಡ ಆತಂಕ ಶುರುವಾಗಿದೆ. ಮೈತ್ರಿಯನ್ನ ಒಪ್ಪಿಕೊಳ್ತಾರಾ ಅಥವಾ ಪಕ್ಷೇತರವಾಗಿ ನಿಲ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಒಂದ್ವೇಳೆ ಮೈತ್ರಿ ಒಪ್ಪಿಕೊಂಡ್ರೆ ಬಿಜೆಪಿ ಪಕ್ಷದಿಂದ ಉನ್ನತ ಹುದ್ದೆಯನ್ನ ನೀಡಬಹುದಾಗಿದೆ. ಹೀಗಾಗಿ ಇವತ್ತಿನ ಸುಮಲತಾ ಸಭೆಯತ್ತ ಎಲ್ಲರ ಚಿತ್ತ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ