newsfirstkannada.com

ಕೋಲಾರ ಕಾಂಗ್ರೆಸ್​​​ ಟಿಕೆಟ್​​​ ಕದನಕ್ಕೆ ಟ್ವಿಸ್ಟ್.. ಮುನಿಯಪ್ಪ-ರಮೇಶ್ ಜಗಳದಲ್ಲಿ 3ನೇ ಅಭ್ಯರ್ಥಿಗೆ ಜಾಕ್​ಪಾಟ್..?

Share :

Published March 29, 2024 at 7:22am

    ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಹೊಸ ಹೆಸರಿಗೆ ಅಂಕಿತ

    ಮುನಿಯಪ್ಪ-ರಮೇಶ್​ ಕುಮಾರ್​ ಜಟಾಪಟಿಗೆ ಸಿಕ್ತು ಬಿಗ್​​ ಟ್ವಿಸ್ಟ್​!

    ಮುನಿಯಪ್ಪ ಒಪ್ಪಿಗೆ ನೀಡಲಿಲ್ಲ ಅಂದ್ರೆ ಕೋಲಾರ ಕದನ ನಡೆಯುತ್ತೆ

ರಾಜಕೀಯ ಅನ್ನೋದೇ ಕಾಲಚಕ್ರ.. ಆ ಚಕ್ರದಲ್ಲಿ ಯಾರಿಗೆ ಲಕ್​​ ಖುಲಾಯಿಸುತ್ತೆ ಅನ್ನೋದನ್ನ ಹೇಳಲು ಅಸಾಧ್ಯ. ಈಗ ಕೋಲಾರ ರಾಜಕೀಯ ಕಣದಲ್ಲಿ ಎರಡು ಬಣಗಳ ನಡುವೆ ನಡೀತಿದ್ದ ಟಿಕೆಟ್​​​ ಬಂಡಾಟದಲ್ಲಿ 3ನೇ ವ್ಯಕ್ತಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅಂದ್ಹಾಗೆ, ಯಾರು ಅಂದಾಜಿಸದ ರೀತಿಯಲ್ಲಿ ಕೋಲಾರ ಕಾಂಗ್ರೆಸ್​​​ ಟಿಕೆಟ್​​​ ಕದನಕ್ಕೆ ಟ್ವಿಸ್ಟ್​ ಸಿಕ್ಕಿದೆ.

ಗಂಡ ಹೆಂಡತಿ ನಡುವೆ ಕೂಸು ಬಡವಾಯ್ತು ಅನ್ನೋದು ಗಾದೆ.. ಆದ್ರೆ, ಇಲ್ಲಿ ಹಾಗಲ್ಲ ಬಿಡಿ.. ಕೋಲಾರದ ಸಂಸಾರಕ್ಕಾಗಿ ನಡೀತಿದ್ದ ಇಬ್ಬರ ನಡುವಿನ ನೇರ ಯುದ್ಧದಲ್ಲಿ 3ನೇ ವ್ಯಕ್ತಿಗೆ ಜಾಕ್​​​ಪಾಟ್​​​ ಹೊಡೆದಿದೆ. ಹೌದು, ನಿನ್ನೆ ನಡೆದ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಹೊಸ ಹೆಸರಿಗೆ ಅಂಕಿತ ಮುದ್ರೆ ಬಿದ್ದಿದೆ ಅಂತ ಹೇಳಲಾಗ್ತಿದೆ. ಮಾಜಿ ಮೇಯರ್​ ವಿಜಯ್​ಕುಮಾರ್​ ಪುತ್ರನಿಗೆ ಟಿಕೆಟ್​ ನೀಡುವ ಸಾಧ್ಯತೆಗಳು ಗಾಳಿಗೋಪುರದಲ್ಲಿ ತೇಲ್ತಿದೆ.

ಮಾಜಿ ಮೇಯರ್​ ವಿಜಯ್​ಕುಮಾರ್​ ಪುತ್ರ ಗೌತಮ್​​​ ಕೈಗೆ ಕೋಲಾರ ಟಿಕೆಟ್​​​ ನೀಡೋ ಸಾಧ್ಯತೆ ಇದೆ.. ಸದ್ಯ ಬೆಂಗಳೂರು ಸೆಂಟ್ರಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಗೌತಮ್, ದಲಿತ ಎಡಗೈ ಸಮುದಾಯಕ್ಕೆ ಸೇರಿರುವ ಪ್ರಭಾವಿ ನಾಯಕರು.. ಸದ್ಯಕ್ಕೆ ಎರಡೂ ಬಣಗಳ ಅಭಿಪ್ರಾಯವನ್ನ ಪರಿಗಣಿಸದ ಕಾಂಗ್ರೆಸ್​​, ಮಧ್ಯಮ ದಾರಿಯನ್ನ ಆಯ್ದುಕೊಂಡಿದೆ.

ಇಬ್ಬರ ನಡುವೆ 3ನೇ ವ್ಯಕ್ತಿ ಲಾಟರಿ!

  • ಮಾಜಿ ಮೇಯರ್​ ವಿಜಯ್​ಕುಮಾರ್​ ಪುತ್ರ ಗೌತಮ್​​​
  • ಗೌತಮ್​​​ ಕೈಗೆ ಕೋಲಾರ ಕೈ ಟಿಕೆಟ್​​​ ನೀಡುವ ಸಾಧ್ಯತೆ
  • ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಸಿಎಂ, ಡಿಸಿಎಂ
  • ಮುನಿಯಪ್ಪ ಕುಟುಂಬಕ್ಕೆ ಟಿಕೆಟ್​ ನೀಡಲು ವಿರೋಧ
  • ‘ಬೇರೆ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡ್ತೇವೆ’
  • ಬಲಗೈ ಸಮುದಾಯಕ್ಕೆ ನೀಡಿ ಎಂದ ರಮೇಶ್​ಕುಮಾರ್​
  • ಕುಟುಂಬಕ್ಕೆ ಟಿಕೆಟ್​​​ ನೀಡುವಂತೆ ಮುನಿಯಪ್ಪ ಆಗ್ರಹ
  • ಎಡಗೈ ಸಮುದಾಯಕ್ಕೆ ಟಿಕೆಟ್​ ನೀಡಲು ಡಿಮ್ಯಾಂಡ್​
  • ಎಸ್​​ಸಿ ಕ್ಷೇತ್ರಗಳ ನ್ಯಾಯಬದ್ಧ ಟಿಕೆಟ್ ಹಂಚಿಕೆಗೆ ಪಟ್ಟು
  • ಎಡಗೈ ಸಮುದಾಯಕ್ಕೆ ಟಿಕೆಟ್​ ನೀಡಲು ಖರ್ಗೆ ಒಲವು
  • ಇದಕ್ಕೆ ಪರ್ಯಾಯ ಮಾರ್ಗವನ್ನ ಆಯ್ದುಕೊಂಡ ಕೈಪಡೆ
  • ಎಡಗೈ ಸಮುದಾಯದ ಗೌತಮ್​​ಗೆ ಕಾಂಗ್ರೆಸ್​​​ ಟಿಕೆಟ್​​​?

ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ ‘ಯುವ’ ಘರ್ಜನೆ.. ಚೊಚ್ಚಲ ಸಿನಿಮಾದಲ್ಲೇ ಫ್ಯಾನ್ಸ್​ ಮನಸು ಗೆಲ್ತಾರಾ ದೊಡ್ಮನೆ ಕುಡಿ?

ಇನ್ನು, ಸಭೆ ಬಳಿಕ ಜಿಲ್ಲ ಉಸ್ತುವಾರಿ ಸಚಿವ ಬೈರತಿ ಸುರೇಶ್​​, ಸಂಧಾನ ಸಭೆ ಯಶಸ್ವಿಯಾಗಿದೆ ಅಂತ ಹೇಳಿದ್ರು. ಆದ್ರೆ, ಸಚಿವ ಮುನಿಯಪ್ಪ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಆದ್ರೆ, 3ನೇ ಅಭ್ಯರ್ಥಿ ಆಯ್ಕೆ ವಿಚಾರವೇ ಬರೋದಿಲ್ಲ ಅನ್ನೋ ಮೂಲಕ ಸಂಘರ್ಷದ ಸುಳಿವು ನೀಡಿದ್ದಾರೆ. ಇನ್ನು, ರಾಜೀನಾಮೆ ಪ್ರಹಸನಕ್ಕೆ ಸಚಿವ ಸುಧಾಕರ್​ ವಿಷಾಧ ವ್ಯಕ್ತಪಡಿಸಿದ್ರು.

ಕೋಲಾರ ಕಗ್ಗಂಟು ಪರಿಹಾರಕ್ಕೆ ಹೊಸ ಸೂತ್ರವನ್ನ ಸಿದ್ಧಪಡಿಸಲಾಗಿದೆ.. ಆದ್ರೆ, ಈ ಸೂತ್ರಕ್ಕೆ ಮುನಿಯಪ್ಪ ಒಪ್ಪಿಗೆ ನೀಡ್ಲೇಬೇಕಿದೆ. ಇಲ್ಲದಿದ್ರೆ, ಕೋಲಾರ ಕದನದ ಎಪಿಸೋಡ್​​​ ಮುಂದುವರೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರ ಕಾಂಗ್ರೆಸ್​​​ ಟಿಕೆಟ್​​​ ಕದನಕ್ಕೆ ಟ್ವಿಸ್ಟ್.. ಮುನಿಯಪ್ಪ-ರಮೇಶ್ ಜಗಳದಲ್ಲಿ 3ನೇ ಅಭ್ಯರ್ಥಿಗೆ ಜಾಕ್​ಪಾಟ್..?

https://newsfirstlive.com/wp-content/uploads/2024/03/Muniyappa.jpg

Load More