newsfirstkannada.com

ಯದುವೀರ್​ಗಿಂತಲೂ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಭಾರೀ ಸಿರಿವಂತರು.. ಇವರ ಆಸ್ತಿ ಕೋಟಿ, ಕೋಟಿ

Share :

Published April 4, 2024 at 8:22am

Update April 6, 2024 at 1:08pm

  ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ..?

  ಕೋಟಿ, ಕೋಟಿ ಹಣ, ಸಾಕಷ್ಟು ಜಮೀನು, ಚಿನ್ನ-ಬೆಳ್ಳಿ ರಾಶಿ ರಾಶಿ

  ಮೈಸೂರು-ಕೊಡಗು ಕಾಂಗ್ರೆಸ್​ ಅಭ್ಯರ್ಥಿ ಲಕ್ಷಣ್ ಘೋಷಿಸಿದ ಆಸ್ತಿ ಎಷ್ಟು?

ಕರುನಾಡ ಲೋಕಸಭಾ ಅಖಾಡದಲ್ಲಿ ತೊಡೆತಟ್ಟಿರೋ ಕುಬೇರರ ಖಜಾನೆಯ ಸೀಕ್ರೆಟ್​ ಒಂದೊಂದೆ ಹೊರಬೀಳ್ತಿವೆ. ಕೋಟಿ ಒಡೆಯರ ಖಜಾನೆಯ ಕಂಪ್ಲೀಟ್​ ಡೀಟೆಲ್ಸ್​ ಚುನಾವಣಾ ಅಯೋಗದ ಕೈಸೇರಿದೆ. ಕೋಟಿ.. ಕೋಟಿ ಹಣ, ಕಣ್ಣಾಡಿಸಿದಷ್ಟು ಜಮೀನು, ಚಿನ್ನ-ಬೆಳ್ಳಿ ಜೊತೆಗೆ ಕೆಲವರಿಗೆ ಸಾಲದ ಹೊರೆಯು ಇದೆ.

ಲೋಕಸಭಾ ಚುನಾವಣಾ ಸಮರದ ಕಾವು ಕರುನಾಡಲ್ಲಿ ದಿನೇ ದಿನೇ ರಂಗೇರ್ತಿದೆ. ಸಮರ ಭೂಮಿಯಲ್ಲಿ ಶಸ್ತ್ರ ಸಜ್ಜಿತರಾಗಿ ಯುದ್ಧ ಎದುರಿಸಲು ಸಜ್ಜಾಗಿರೋ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನ ಹಿಡಿದು ಚುನಾವಣಾ ಆಯೋಗದ ಮುಂದೆ ಮಂಡಿಯೂರಿದ್ದಾರೆ. ಕೋಟಿ ಕೋಟಿ ಕುಬೇರರ ಖಜಾನೆಯ ಸೀಕ್ರೆಟ್ ಕಂಡು ಕ್ಷೇತ್ರದ ಜನ ಶಾಕ್ ಆಗ್ತಿದ್ದಾರೆ. ಮತ್ತೊಂದ್ಕಡೆ ಅಭ್ಯರ್ಥಿಗಳ ಹಣದ ಹುಂಡಿ, ಜಮೀನಿನ ವಿವರ, ಚಿನ್ನ-ಬೆಳ್ಳಿಯ ಮೊತ್ತ ಕಂಡು ಒಮ್ಮೆ ಕುಬೇರನೇ ಕಂಗಾಲಾಗಿ ಹೋಗಿದ್ದಾನೆ.

ಮಹರಾಜ ಯದುವೀರ್​ಗಿಂತಲೂ ಶ್ರೀಮಂತ ‘ಕೈ’ ಅಭ್ಯರ್ಥಿ

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್​ ಈ ಹಿಂದೆ 5 ಕೋಟಿ ಮೊತ್ತದ ಆಸ್ತಿಯನ್ನ ಘೋಷಿಸಿಕೊಂಡಿದ್ರು. ಆದರೆ ಮೈಸೂರು-ಕೊಡಗು ಕಾಂಗ್ರೆಸ್​ ಅಭ್ಯರ್ಥಿ ಎಂ.ಲಕ್ಷಣ್ ಘೋಷಿಸಿಕೊಂಡ ಆಸ್ತಿ ಅರಮನೆ ನಗರಿಯಲ್ಲಿ ಅಚ್ಚರಿ ಮೂಡಿಸಿದೆ. ಯಾಕೆಂದ್ರೆ ಮೈಸೂರಿನ ಮಹಾರಾಜ ಯದುವೀರ್​ಗಿಂತಲೂ ಎಂ.ಲಕ್ಷ್ಮಣ್ ಬಳಿ 4 ಪಟ್ಟು ಹೆಚ್ಚಿನ ಆಸ್ತಿ ಇದೆ.. ಹಾಗಿದ್ರೆ ಎಂ.ಲಕ್ಷ್ಮಣ್ ಘೋಷಸಿಕೊಂಡ ಆಸ್ತಿ ಎಷ್ಟು ಅಂತ ನೋಡೋದಾದ್ರೆ.

ಎಂ.ಲಕ್ಷ್ಮಣ್ ಆಸ್ತಿ ಮೌಲ್ಯ! 

ಎಂ.ಲಕ್ಷಣ್​ ಬಳಿ ಒಟ್ಟು 20 ಕೋಟಿ ಮೌಲ್ಯದ ಆಸ್ತಿ ಇದೆ.. ಈ ಪೈಕಿ 1.50 ಕೋಟಿ ಚರಾಸ್ತಿಯಾದ್ರೆ, 18 ಕೋಟಿ ಸ್ಥಿರಾಸ್ತಿಯಾಗಿದೆ.. ಇನ್ನೂ 50 ಲಕ್ಷ ಮೌಲ್ಯದ ಚಿನ್ನಾಭರಣದ ಹೊಂದಿರೋ ಲಕ್ಷ್ಮಣ್​ ಯಾವುದೇ ಸಾಲವನ್ನ ಹೊಂದಿಲ್ಲ.

ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ ಕಂದನ ನರಳಾಟ, ಕ್ಯಾಮೆರಾದಲ್ಲಿ ಮಗುವಿನ ಕಾಲು ಸೆರೆ.. ರಾತ್ರಿ ಇಡೀ ಕಾರ್ಯಾಚರಣೆ..!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 16.02 ಕೋಟಿ ಮೌಲ್ಯದ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.

ಶೋಭಾ ಕರಂದ್ಲಾಜೆ ಆಸ್ತಿ ಮೌಲ್ಯ!

ಶೋಭಾ ಕರಂದ್ಲಾಜೆ ಬಳಿ 16.02 ಕೋಟಿ ಮೌಲ್ಯದ ಒಟ್ಟು ಆಸ್ತಿ ಇದೆ. ಈ ಪೈಕಿ ಚರಾಸ್ತಿ 9 ಕೋಟಿಯದ್ದಾದ್ರೆ, ಸ್ಥಿರಾಸ್ತಿ 6 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇನ್ನೂ 68.40 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಶೋಭಾ ಹೊಂದಿದ್ದು, 4.06 ಕೋಟಿ ಮೊತ್ತದ ಸಾಲವನ್ನ ಹೊಂದಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 64 ಲಕ್ಷ ರೂಪಅಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಕೋಟ ಆಸ್ತಿ ಮೌಲ್ಯ!

ಕೋಟ ಶ್ರೀನಿವಾಸ ಪೂಜಾರಿ ಬಳಿ 64 ಲಕ್ಷದ ಮೌಲ್ಯದ ಆಸ್ತಿ ಇದ್ದು, ₹31,95,082 ಮೌಲದ್ಯ ಚರಾಸ್ತಿ ಮತ್ತು ₹2,94,70,510 ಮೌಲ್ಯದ ಸ್ಥಿರಾಸ್ತಿ ಇದೆ. ಸ್ಥಿರ ಮತ್ತು ಚರಾಸ್ತಿ ಒಟ್ಟು ₹3 ಕೋಟಿ 58 ಲಕ್ಷ ಇದೆ. ಇನ್ನೂ 15 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1 ಕೋಟಿ ರೂ. ಸಾಲವನ್ನ ಹೊಂದಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ತಮ್ಮ ಆಸ್ತಿ ಮೌಲ್ಯದ 75 ಶೇಕಡದಷ್ಟು ಸಾಲವನ್ನೇ ಹೊಂದಿದ್ದಾರೆ.

ಪದ್ಮರಾಜ್ ಆಸ್ತಿ ಮೌಲ್ಯ!

ಪದ್ಮರಾಜ್ ಬಳಿ ಒಟ್ಟು 1.48 ಕೋಟಿ ಮೌಲ್ಯದ ಆಸ್ತಿ ಇದೆ. ಈ ಪೈಕಿ 64 ಲಕ್ಷ ಮೌಲ್ಯದ ಚರಾಸ್ತಿಯಾಗಿದ್ದು, 83 ಲಕ್ಷ ಮೌಲ್ಯದ ಸ್ಥಿರಾಸ್ತಿಯಾಗಿದೆ. ಇನ್ನೂ ಪದ್ಮರಾಜ್ ಬಳಿ 8 ಲಕ್ಷ ಮೌಲ್ಯದ ಚಿನ್ನಾಭರಣವಿದ್ದು ಬರೋಬ್ಬರಿ 1.26 ಕೋಟಿ ಮೌಲ್ಯದ ಸಾಲವನ್ನ ಹೊಂದಿದ್ದಾರೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳು ಗರಿಷ್ಠ 90 ಲಕ್ಷದವರೆಗೆ ಖರ್ಚು ಮಾಡಬಹುದು. ಆದ್ರೆ ಇಲ್ಲಿ ಅಭ್ಯರ್ಥಿಗಳು ಕೋಟಿ.. ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಲೋಕಸಭೆ ಚುನಾವಣೆ ಯುದ್ಧ ಶ್ರೀಮಂತರ ಕದನವಾದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯದುವೀರ್​ಗಿಂತಲೂ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಭಾರೀ ಸಿರಿವಂತರು.. ಇವರ ಆಸ್ತಿ ಕೋಟಿ, ಕೋಟಿ

https://newsfirstlive.com/wp-content/uploads/2024/04/SHOBHA_KOTA.jpg

Load More