newsfirstkannada.com

ಲೋಕಸಭಾ ಚುನಾವಣೆ; ಬಿಜೆಪಿ 2ನೇ ಪಟ್ಟಿ ರಿಲೀಸ್​ಗೆ ಕಸರತ್ತು; ಯಾರಿಗೆಲ್ಲಾ ಶುಭಸುದ್ದಿ?

Share :

Published March 21, 2024 at 6:09am

Update March 21, 2024 at 6:10am

    ಚಿಕ್ಕಬಳ್ಳಾಪುರದಿಂದ ಡಾ.ಕೆ ಸುಧಾಕರ್​ಗೆ ಟಿಕೆಟ್​ ಪಕ್ಕಾನಾ?

    ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಹೆಚ್​​ಡಿಕೆ ಪುತ್ರ ನಿಖಿಲ್

    ಕೊನೆಗೂ ದಳಪತಿಗಳ ಪಾಲಾದ ಚಿನ್ನದನಾಡು ಕೋಲಾರ!?

20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿರುವ ಬಿಜೆಪಿ ಹೈಕಮಾಂಡ್​​ ಉಳಿದ ಕ್ಷೇತ್ರಗಳಿಗೆ ಅಂತಿಮ ಹಂತದ ಕಸರತ್ತು ಮಾಡ್ತಿದೆ. ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದು ಇನ್ನೆರಡು ದಿನಗಳಲ್ಲಿ ಪಟ್ಟಿ ರಿಲೀಸ್ ಎಂದಿದ್ದಾರೆ. ಇತ್ತ ಕೋಲಾರದ ವಿಚಾರದಲ್ಲಿ ಜೆಡಿಎಸ್​ಗೂ ಗುಡ್​​ನ್ಯೂಸ್​ ಸಿಗುವ ಸುಳಿವು ಸಿಕ್ಕಿದೆ.

ಮೊದಲ ಪಟ್ಟಿ ಆಯ್ತು, ಕೇಸರಿಕಲಿಗಳ 2ನೇ ಪಟ್ಟಿ ಬಿಡುಗಡೆ ಕಸರತ್ತು

400 ಸೀಟು ಗೆಲ್ಲುವ ಗುರಿ ಹೊಂದಿರುವ ಮೋದಿ ಸೇನೆ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಮೊದಲ ಎಫಿಸೋಡ್ ಮುಗಿಸಿತ್ತು. ದಿಲ್ಲಿಯಲ್ಲಿ ನಡೆಯುತ್ತಿರುವ ಫೈನಲ್ ಮೀಟಿಂಗ್​​ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಪುತ್ರ, ರಾಜ್ಯ ಬಿಜೆಪಿ ಸಾರಥಿ ವಿಜಯೇಂದ್ರ ಹಾಜರಿ ನೀಡಿದ್ದಾರೆ. ಉಳಿದ ಕ್ಷೇತ್ರಗಳಿಗೆ ಹುರಿಯಾಳುಗಳು ಯಾರಾಗಬೇಕು ಅನ್ನೋ ಅಭಿಪ್ರಾಯ ಮಂಡಿಸಿದ್ದಾರೆ. ಸಭೆಯಲ್ಲಿ ನಡೆದಿದ್ದು 5 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಳಗಾವಿಗಾಯಿಂದ ಶೆಟ್ಟರ್, ಉತ್ತರ ಕನ್ನಡದಿಂದ ಮಾಜಿ ಸ್ಪೀಕರ್ ಕಾಗೇರಿ, ಚಿಕ್ಕಬಳ್ಳಾಪುರದಿಂದ ಡಾ.ಕೆ.ಸುಧಾಕರ್, ಚಿತ್ರದುರ್ಗದಿಂದ ಗೋವಿಂದ ಕಾರಜೋಳ ಕಣಕ್ಕಿಳಿಸುವ ಬಗ್ಗೆ ಚರ್ಚೆಯಾಗಿದೆ. ದೆಹಲಿಯಲ್ಲಿ ಈ ಬಗ್ಗೆ ಮಾತ್ನಾಡಿರೋ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾರ್ಚ್ 22ಕ್ಕೆ ಅಂತಿಮ ಪಟ್ಟಿ ರಿಲೀಸ್ ಆಗುವ ಸುಳಿವು ನೀಡಿದ್ದು ಮೊದಲ ಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಇರೋದಿಲ್ಲ ಅಂತಾನೂ ಹೇಳಿದ್ದಾರೆ.

‘ನಾಡಿದ್ದು ಪಟ್ಟಿ ಬಿಡುಗಡೆ’

ಘೋಷಣೆ ಆಗದೇ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಎಲ್ಲವು ಕೂಡ ಒಂದು ಹಂತಕ್ಕೆ ಬಂದಿವೆ. ಅಂತಿಮವಾಗಿ ನಿಗದಿಯಾಗಬೇಕು. ಮಾರ್ಚ್ 22 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಎಲ್ಲವೂ ತೀರ್ಮಾನ ಆಗುತ್ತಾವೆ. ಒಂದು ಸಾರಿ ನಿರ್ಧಾರವಾದರೆ ಯಾವುದೇ ಬದಲಾವಣೆ ಇರಲ್ಲ.

ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಜೆಡಿಎಸ್‌ಗೆ ಕೋಲಾರ ಕೊಡಲು ಬಿಜೆಪಿ ಹೈ ತೀರ್ಮಾನ!?

ಮಂಡ್ಯ, ಹಾಸನ ಜೊತೆಗೆ ಕೋಲಾರವನ್ನೂ ಕೇಳುತ್ತಿದ್ದ ದಳಪತಿಗಳಿಗೆ ಗುಡ್ ನ್ಯೂಸ್ ಸಿಗುವಂತಿದೆ. ಬಿಜೆಪಿ ಹೈಕಮಾಂಡ್​ ಕೋಲಾರವನ್ನು ಜೆಡಿಎಸ್​​ಗೆ ಬಿಟ್ಟುಕೊಡಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಹಾಗಿದ್ರೆ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯ್ತು ಅಂತ ನೋಡೊದಾದ್ರೆ..

ಬಿಜೆಪಿ ‘ಟಿಕೆಟ್’ ಮೀಟಿಂಗ್!

  • ಚಿತ್ರದುರ್ಗದಲ್ಲಿ ನಾರಾಯಣಸ್ವಾಮಿ ಸ್ಪರ್ಧೆಗೆ ಸ್ಥಳೀಯರ ವಿರೋಧ
  • ರಾಯಚೂರಲ್ಲಿ ಹಾಲಿ ಸಂಸದ, ಬಿ.ವಿ. ನಾಯಕ್​ರ ನಡುವೆ ಪೈಪೋಟಿ
  • ಈ ಬಗ್ಗೆ ಎರಡು ಪ್ರತ್ಯೇಕ ವರದಿ ತರಿಸಿಕೊಳ್ಳಲು ಹೈಕಮಾಂಡ್ ಪ್ಲಾನ್
  • ಹೀಗಾಗಿ ಚಿತ್ರದುರ್ಗ ಮತ್ತು ರಾಯಚೂರು ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿಲ್ಲ
  • ಅನಂತಕುಮಾರ್ ಹೆಗಡೆ ಸ್ಪರ್ಧೆಗೆ ಹೈಕಮಾಂಡ್ ನಾಯಕರಿಂದಲೇ ಆಕ್ಷೇಪ
  • 5 ವರ್ಷಗಳು ಸಂಘಟನೆ ಬಿಟ್ಟು ಕಣ್ಮರೆ, ಈಗ ಪಕ್ಷಕ್ಕೆ ಡ್ಯಾಮೇಜ್ ಹೇಳಿಕೆ
  • ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಿಸೋಕೆ ತೀರ್ಮಾನ

ಗುಡ್​ನ್ಯೂಸ್ ಕೊಡ್ತೀವಿ ಎಂದ ನಿಖಿಲ್ ಕುಮಾರಸ್ವಾಮಿ

ಇನ್ನು ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಕೋಲಾರ ವಿಚಾರದಲ್ಲಿ ಕಾರ್ಯಕರ್ತರಿಗೆ ಗುಡ್​​ನ್ಯೂಸ್ ಕೊಡ್ತೀವಿ ಅಂತ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

‘ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತೆ’

ಕಾರ್ಯಕರ್ತರ ಕುತೂಹಲವೇ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುತ್ತದೆ. ಕೋಲಾರ ಖಂಡಿತವಾಗಿಯು ನಮಗೆ ಸಿಗುತ್ತೆ. ಕುಮಾರಣ್ಣನವರ ಅನುಪಸ್ಥಿತಿಯಲ್ಲಿ ಕೆಲವೊಂದಿಷ್ಟು ವೇದಿಕೆ ಕಾರ್ಯಕ್ರಮದಲ್ಲಿ ಗುರುತಿಸಿಕೊಳ್ಳಬೇಕು.

ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ನಾಯಕ

ಅಳೆದು, ತೂಗಿ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ಹೈಕಮಾಂಡ್ ಕಸರತ್ತು ನಡೆಸ್ತಿದೆ. ಜೆಡಿಎಸ್​ ಬೇಡಿಕೆಯಂತೆ ಕೋಲಾರ ಕೂಡ ದಳಪತಿಗಳ ಪಾಲಾಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ; ಬಿಜೆಪಿ 2ನೇ ಪಟ್ಟಿ ರಿಲೀಸ್​ಗೆ ಕಸರತ್ತು; ಯಾರಿಗೆಲ್ಲಾ ಶುಭಸುದ್ದಿ?

https://newsfirstlive.com/wp-content/uploads/2024/03/MODI_VIJAYENDRA-1.jpg

Load More