ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ; ವೋಟ್ ಮಾಡಿದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಹಿರಿಯ ಜೀವ

author-image
Bheemappa
Updated On
ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ; ವೋಟ್ ಮಾಡಿದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಹಿರಿಯ ಜೀವ
Advertisment
  • ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಹಿರಿಯ ಜೀವ
  • ವೋಟ್ ಮಾಡಿ ಆಸ್ಪತ್ರೆಗೆ ಹೋಗೋಣ ಎಂದುಕೊಂಡಿದ್ರು
  • ಮತ ಹಾಕುವ ಮೊದಲೇ ಎದೆ ನೋವು ಕಾಣಿಸಿಕೊಂಡಿತ್ತು

ಉಡುಪಿ: ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ವೃದ್ಧೆಯೊಬ್ಬರು ಕೊನೆಯುಸಿರೆಳೆದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ನಡೆದಿದೆ.

ಚಡಗರ ಅಗ್ರಹಾರದ ನಿವಾಸಿ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಮೃತಪಟ್ಟವರು. ಯಶೋಧಾ ಅವರು ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿದ್ದಾರೆ. ಇವರು ಹಿರಿಯ ನಾಗರೀಕರ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು. ಆದರೆ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಸಿಲಿಕಾನ್​ ಸಿಟಿಯ ಈ ಬ್ರಿಡ್ಜ್​ ಮೇಲೆ ಇಂದಿನಿಂದ ಬೈಕ್​ಗಳಿಗೆ ಮಾತ್ರ ಅವಕಾಶ.. ಉಳಿದೆಲ್ಲವೂ ಬ್ಯಾನ್​, ಕಾರಣ?

ವೃದ್ಧೆಗೆ ಮತದಾನ ಮಾಡುವುದಕ್ಕೂ ಮೊದಲೇ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ವೋಟ್ ಮಾಡಿಯೇ ಆಸ್ಪತ್ರೆ ಹೋಗೋಣ ಎಂದು ವೃದ್ಧೆ ನಿಶ್ಚಯ ಮಾಡಿದ್ದರು. ಅದರಂತೆ ವೋಟ್ ಮಾಡಿದ ಮಹಿಳೆ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಚಿಕಿತ್ಸೆಗೆ ಸ್ಪಂದಿಸದೇ ವೃದ್ಧೆ ಮೃತಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment