newsfirstkannada.com

ಕಾಂಗ್ರೆಸ್​​ ಅಭ್ಯರ್ಥಿಯ ಎಲೆಕ್ಷನ್​ ಕ್ಯಾಂಪೇನ್​ನಲ್ಲಿ ಅದ್ಧೂರಿ ಬಾಡೂಟ.. ರೇಡ್​ ಮಾಡಿ ಎಲ್ಲವನ್ನು ರಸ್ತೆಗೆ ಬಿಸಾಡಿದ FST ಅಧಿಕಾರಿಗಳು

Share :

Published April 12, 2024 at 10:21am

Update April 12, 2024 at 11:29am

    ಅಧಿಕಾರಿಗಳು ಪರಿಶೀಲಿಸಿದಾಗ ಬಾಡೂಟ ವ್ಯವಸ್ಥೆ ಮಾಡಿದ್ದು ಬೆಳಕಿಗೆ

    ನಾನ್‌ವೆಜ್ ಊಟವನ್ನು ವಶಕ್ಕೆ ಪಡೆದ ಎಫ್‌ಎಸ್‌ಟಿ ಅಧಿಕಾರಿಗಳು

    ಗ್ರಾಮದ ಓರ್ವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹಾಸನ: ಕಾಂಗ್ರೆಸ್​ ಅಭ್ಯರ್ಥಿ ಪ್ರಚಾರದ ವೇಳೆ ಬಾಡೂಟ ಆಯೋಜನೆ ಮಾಡಿರುವ ಆರೋಪ ಕೇಳಿ ಬಂದಿದ್ದು ಫ್ಲೈಯಿಂಗ್ ಸ್ವ್ಯಾಡ್ ಅಧಿಕಾರಿಗಳು ದಾಳಿ ಮಾಡಿ ಎಲ್ಲವನ್ನು ರಸ್ತೆಗೆ ಚೆಲ್ಲಿದ್ದಾರೆ. ಸದ್ಯ ಈ ಸಂಬಂಧ ಹೆಚ್.ಡಿ ರೇವಣ್ಣ ಅವರೇ ದಾಳಿ ಮಾಡಿಸಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರು ಕ್ಯಾಂಪೇನ್​ ಮಾಡಲೆಂದು ಹೊಳೆನರಸೀಪುರದ ಕೋಡಿಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದರು. ಹೀಗಾಗಿ ಪ್ರಚಾರಕ್ಕೆ ಬರುವ ಜನರಿಗೆ ಬಾಡೂಟದ ವ್ಯವಸ್ಥೆಯನ್ನು ಕಾಂಗ್ರೆಸ್​ ಮುಖಂಡರು ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಇದೇ ವೇಳೆ ಫ್ಲೈಯಿಂಗ್ ಸ್ವ್ಯಾಡ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಪರಿಶೀಲನೆ ಮಾಡಿದಾಗ ಬಾಡೂಟ ಮಾಡಿರುವುದು ಬೆಳಕಿಗೆ ಬಂದಿದೆ. ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಾಡೂಟವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಜೀಪ್‌- ಬಸ್‌ ನಡುವೆ ಭೀಕರ ಅಪಘಾತ.. ಎಲೆಕ್ಷನ್​ ಭದ್ರತೆಗೆ ತೆರಳ್ತಿದ್ದ ರಾಜ್ಯದ ಮೂವರು ಪೊಲೀಸರು ಸಾವು, ಇಬ್ಬರು ಗಂಭೀರ 

ವಶಕ್ಕೆ ಪಡೆದ ಅಧಿಕಾರಿಗಳು ಅದನ್ನು ರಸ್ತೆಗೆ ಚೆಲ್ಲಿದ್ದಾರೆ. ಆದರೆ ರಸ್ತೆಗೆ ಚೆಲ್ಲಿದ ಆಹಾರವನ್ನು ಕೆಲವರು ತಟ್ಟೆಗೆ ಹಾಕ್ಕೊಂಡು ತಿಂದಿದ್ದಾರೆ ಎನ್ನಲಾಗಿದೆ. ಇನ್ನು ಬಾಡೂಟ ಆಯೋಜನೆ ಸಂಬಂಧ ಗ್ರಾಮದ ಓರ್ವನ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿಡಿಯೋ ಮೂಲಕ ಹೆಚ್.ಡಿ ರೇವಣ್ಣ ಹಾಗೂ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ ಅಭ್ಯರ್ಥಿಯ ಎಲೆಕ್ಷನ್​ ಕ್ಯಾಂಪೇನ್​ನಲ್ಲಿ ಅದ್ಧೂರಿ ಬಾಡೂಟ.. ರೇಡ್​ ಮಾಡಿ ಎಲ್ಲವನ್ನು ರಸ್ತೆಗೆ ಬಿಸಾಡಿದ FST ಅಧಿಕಾರಿಗಳು

https://newsfirstlive.com/wp-content/uploads/2024/04/CONGRESS_JDS.jpg

Load More