newsfirstkannada.com

ರಾಜ್ಯದಲ್ಲಿ ಝಣಝಣ ಕಾಂಚಾಣ.. ಪೇಡಾ ನಗರಿಯ ಅಪಾರ್ಟ್​​ಮೆಂಟ್​ನಲ್ಲಿ ಕೋಟಿ ಕೋಟಿ ಬೇಟೆಯಾಡಿದ IT

Share :

Published April 17, 2024 at 8:16am

    ಚುನಾವಣೆ ಹೊತ್ತಲ್ಲೇ ಡಿ.ಕೆ.ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ರೇಡ್​

    ಬೀದರ್​ನಿಂದ ಚಿಂಚೋಳಿಗೆ ಬೈಕ್​​ನಲ್ಲಿ ಲಕ್ಷ ಲಕ್ಷ ಹಣ ಸಾಗಿಸ್ತಿದ್ದಾಗ ಸೀಜ್

    ಎಲೆಕ್ಷನ್​ಗಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾರೆಂದು ರೈಡ್ ಮಾಡಿದ್ರೆ ಸಿಕ್ಕಿದ್ದು ಕೋಟಿ

ಈ ಬಾರಿ ಲೋಕಸಮರದಲ್ಲಿ ಅಕ್ರಮ ದಾಖಲೆ ಬರೆದಿದೆ. ಕಳೆದ 75 ವರ್ಷಗಳ ಚುನಾವಣೆಯ ಇತಿಹಾಸದಲ್ಲೇ ಅತಿ ಹೆಚ್ಚು ಅಕ್ರಮ ಹಣ ಈ ಬಾರಿ ಜಪ್ತಿಯಾಗಿದೆ. ಕರ್ನಾಟಕದಲ್ಲೂ ಈ ಅಕ್ರಮ ಹಣ ಬಗೆದಷ್ಟೂ ಪತ್ತೆಯಾಗ್ತಿದ್ದು ರಾಶಿಯಾಗ್ತಿದೆ.

ಯುದ್ಧ.. ಇದು ಎಲೆಕ್ಷನ್ ಯುದ್ಧ.. ಲೋಕ ಅಖಾಡದಲ್ಲಿ ಹಣದ ಹೊಳೆ.. ಕಂತೆಕಂತೆ ನೋಟು.. ಚುನಾವಣೆ ಘೋಷಣೆಯಾದ ದಿನದಿಂದ ಎಲ್ಲೆಲ್ಲೂ ಸದ್ದು ಮಾಡ್ತಿದೆ ಝಣಝಣ ಕಾಂಚಾಣ.

ಅಧಿಕಾರಿಗಳಿಗೆ 18 ಕೋಟಿ ಹಣ ಸಿಕ್ಕಿದ್ದೇ ರಣರೋಚಕ!

ಪೇಡಾ ನಗರಿ ಧಾರವಾಡದಲ್ಲಿ ಐಟಿ ಅಧಿಕಾರಿಗಳು ದೊಡ್ಡ ಬೇಟೆಯಾಡಿದ್ದಾರೆ. ಸಂತೋಷ್ ಲಾಡ್ ಆಪ್ತ ಎನ್ನಲಾಗಿರುವ ಬಸವರಾಜ್ ದತ್ತುನವರ್​ ಎಂಬುವವರ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಪತ್ತೆಯಾಗಿದೆ. ಚುನಾವಣೆಗಾಗಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿ ಶೋಧ ನಡೆಸಿದಾಗ ಹಣ ಪತ್ತೆಯಾಗಿದೆ. ಧಾರವಾಡದ ದಾಸನಕೊಪ್ಪದ ಅರ್ನಾ ಅಪಾರ್ಟ್‌ಮೆಂಟ್​ನ ಫ್ಲಾಟ್​ ನಂ.303ರಲ್ಲಿ ಬಸವರಾಜ್ ವಾಸವಿದ್ದು ಮನೆಯ ಲಾಕರ್​ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಚುನಾವಣೆಯಲ್ಲಿ ಹಂಚಲು‌ ಹಣ ಕೂಡಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ದಾಖಲೆ ಇಲ್ಲದ ₹6.87 ಲಕ್ಷ ಜಪ್ತಿ

ಮತ್ತೊಂದೆಡೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್​​​​ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 6.87 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣಾಧಿಕಾರಿ ಆರ್.ಎಲ್.ನದಾಫ್ ನೇತೃತ್ವದ ಎಸ್.ಎಸ್.ಟಿ ತಂಡ ವಾಹನಗಳ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ನಗದು ಹಣ ಜಪ್ತಿ ಮಾಡಲಾಗಿದೆ.. ನವಲಗುಂದದಿಂದ ಕೆರೂರಿಗೆ ಹೊರಟಿದ್ದ ಕಾರಿನಲ್ಲಿ 2.83 ಲಕ್ಷ ಹಣ ಹಾಗೂ ಗೂಡ್ಸ್ ವಾಹನದಲ್ಲಿ 1 ಲಕ್ಷ ಇನ್ನೊಂದೆಡೆ ಹುಬ್ಬಳ್ಳಿಯಿಂದ ಕೆರೂರಿಗೆ ಹೊರಟಿದ್ದ ಲೈಲ್ಯಾಂಡ್​​ ವಾಹನದಲ್ಲಿ 2.40 ಲಕ್ಷ ಹಣ ಜಪ್ತಿ ಮಾಡಿದ್ದಾರೆ.

ಕಲಬುರಗಿಯಲ್ಲಿ ದಾಖಲೆ ಇಲ್ಲದ 2.29 ಲಕ್ಷ ಹಣ ಜಪ್ತಿ

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಸ್ರಂಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದ 2.29 ಲಕ್ಷ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.. ಬೀದರ್​ನಿಂದ ಚಿಂಚೋಳಿಗೆ ವಿಕಾಸ್ ಎಂಬಾತ ಬೈಕ್​​ನಲ್ಲಿ ಹಣ ತರುವ ವೇಳೆ ತಪಾಸಣೆ ಮಾಡಿದಾಗ ನಗದು ಪತ್ತೆಯಾಗಿದೆ.

ಇದನ್ನೂ ಓದಿ: ಸಕ್ಕರೆ, ಚಿನ್ನದ ನಾಡದಲ್ಲಿ ಮೈತ್ರಿಗೆ ಸವಾಲೆಸೆಯಲು ಕಾಂಗ್ರೆಸ್ ರಣತಂತ್ರ.. ರಾಹುಲ್​ ಗಾಂಧಿ ಅಸ್ತ್ರ ಪ್ರಯೋಗಿಸಿದ ‘ಕೈ’

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್ ಮನೆ ಮೇಲೆ ದಾಳಿ

ಚುನಾವಣೆ ಹೊತ್ತಲ್ಲೇ ಡಿಸಿಎಂ ಡಿಕೆಶಿ ಆಪ್ತನಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಚುನಾವಣೆಗೆ ಅಕ್ರಮ ಹಣ ಸಂಗ್ರಹಿಸಿರುವ ಮಾಹಿತಿ ಮೇರೆಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಿಜಯ್ ದೇವ್ ಸಾತನೂರು ಬ್ಲಾಕ್​​ನಲ್ಲಿರುವ ಮನೆ ಮೇಲೆ 15 ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮರಳೆ ಬೇಕುಪ್ಪೆ ಗ್ರಾಮದಲ್ಲಿರೋ ವಿಜಯ್‌ದೇವ್ ಮನೆ ಹಾಗೂ ತಪ್ಪಲು ರೆಸಾರ್ಟ್ ಮೇಲೂ ದಾಳಿ ನಡೆದಿದೆ. ವಿಜಯ್ ಪುತ್ರ ಅರುಣ್ ದೇವ್ ಮನೆ ಮೇಲೂ ದಾಳಿ ನಡೆದಿದೆ.

ಇದನ್ನೂ ಓದಿ: ಇಂದು ರಾಮನವಮಿ ಸಂಭ್ರಮ.. ಅಯೋಧ್ಯೆಯ ಬಾಲರಾಮನ ಸ್ಪರ್ಶಿಸಲಿವೆ ಸೂರ್ಯನ ಹೊಂಗಿರಣಗಳು, ಹೇಗೆ?

ಚುನಾವಣೆ ಹೊತ್ತಲ್ಲೇ ರಾಜ್ಯದ ದಶದಿಕ್ಕುಗಳಲ್ಲೂ ಕುರುಡು ಕಾಂಚಾಣ ಕುಣಿಯುತಲಿದೆ. ಚುನಾವಣಾ ಅಧಿಕಾರಿಗಳು ಎಲ್ಲ ಕಡೆ ಹದ್ದಿನ ಕಣ್ಣಿಟ್ಟಿದ್ದು ಅಕ್ರಮ ಹಣ ಬೇಟೆಯಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಝಣಝಣ ಕಾಂಚಾಣ.. ಪೇಡಾ ನಗರಿಯ ಅಪಾರ್ಟ್​​ಮೆಂಟ್​ನಲ್ಲಿ ಕೋಟಿ ಕೋಟಿ ಬೇಟೆಯಾಡಿದ IT

https://newsfirstlive.com/wp-content/uploads/2024/04/IT_SIZE_18.jpg

Load More