Advertisment

BJP Manifesto: ಮೋದಿಯಿಂದ ಇಂದು ಪ್ರಣಾಳಿಕೆ ಬಿಡುಗಡೆ; ಸರ್ಪ್ರೈಸ್ ಘೋಷಣೆಗಳ ನಿರೀಕ್ಷೆಯಲ್ಲಿ ಜನ..!

author-image
Bheemappa
Updated On
BJP Manifesto: ಮೋದಿಯಿಂದ ಇಂದು ಪ್ರಣಾಳಿಕೆ ಬಿಡುಗಡೆ; ಸರ್ಪ್ರೈಸ್ ಘೋಷಣೆಗಳ ನಿರೀಕ್ಷೆಯಲ್ಲಿ ಜನ..!
Advertisment
  • ಸಂಸತ್​ ಗೆಲ್ಲಲು ಎನ್​ಡಿಎ, ಯುಪಿಎ ಮೈತ್ರಿಕೂಟಗಳು ತಂತ್ರ-ರಣತಂತ್ರ
  • ಕಮಲದ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರ ಪ್ರಧಾನಿ ‘ಮೋದಿ’ ರಂಗಪ್ರವೇಶ
  • ಭದ್ರತಾ ಪಡೆ, ಕಮಾಂಡೋ ಪೊಲೀಸರು, ನಗರ ಪೊಲೀಸ್ರ ಬಿಗಿಭದ್ರತೆ

ಲೋಕಸಭಾ ರಣಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ.. ಕಾಂಗ್ರೆಸ್-ಬಿಜೆಪಿ ಪಾಳಯದ ನಾಯಕರು ಅಬ್ಬರದ ಕ್ಯಾಂಪೇನ್ ಮಾಡ್ತಿದ್ದಾರೆ. ಕರುನಾಡ ಪ್ರಜಾಪ್ರಭುತ್ವ ಯುದ್ಧದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ತರಲು ಬಿಜೆಪಿಯ ಬ್ರಹ್ಮಾಸ್ತ್ರದ ಆಗಮನವಾಗ್ತಿದೆ. ಇಂದು ಕರಾವಳಿ, ಮೈಸೂರು ಭಾಗದಲ್ಲಿ ನಮೋ ಪಾಂಚಜನ್ಯ ಮೊಳಗಿಸಲಿದ್ದಾರೆ. ಇಂದೇ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ.

Advertisment

ಜ್ಯದಲ್ಲಿ ಮಹಾಭಾರತ ಮತಯುದ್ಧಕ್ಕೆ 13 ದಿನಗಳಷ್ಟೇ ಬಾಕಿ ಇದೆ. ಸಂಸತ್​ ಸಮರ ಗೆಲ್ಲಲು ಎನ್​ಡಿಎ, ಯುಪಿಎ ಮೈತ್ರಿಕೂಟಗಳು ತಂತ್ರ-ರಣತಂತ್ರಗಳನ್ನು ಹೆಣೆಯುತ್ತಿವೆ. ಇದೀಗ ಕರುನಾಡಿನಲ್ಲಿ ಕೇಸರಿ ಸೇನೆಗೆ ಮತ್ತಷ್ಟು ಬಲ ತರಲು ಕಮಲದ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರ ಪ್ರಧಾನಿ ಮೋದಿಯ ರಂಗಪ್ರವೇಶವಾಗ್ತಿದೆ. ಬಿಜೆಪಿ ಜಟ್ಟಿಗಳಿಗೆ ಮತ್ತಷ್ಟು ಶಕ್ತಿ ತುಂಬಲು ನಮೋ ಎಂಟ್ರಿ ಕೊಡ್ತಿದ್ದಾರೆ.

publive-image

ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಲೋಕ ಕದನ ಗೆಲ್ಲಲು ಕೇಸರಿ ಸೇನೆಗೆ ಮೋದಿ ಎಂಬ ಶಕ್ತಿಯ ಸಾಥ್ ಬೇಕಾಗಿದೆ.. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಲೋಕ ರಣಕಹಳೆ ಮೊಳಗಿಸಲಿದ್ದಾರೆ. ಮಧ್ಯಪ್ರದೇಶದಿಂದ ಹೊರಡಲಿರುವ ಮೋದಿ ಇಂದು ಸಂಜೆ 4:55ಕ್ಕೆ ಮೈಸೂರಿಗೆ ಬಂದಿಳಿಯಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 5.30 ರಿಂದ 6.20ರವರೆಗೆ ಮೈತ್ರಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹಳೇ ಮೈಸೂರು ಯುದ್ಧ ಗೆಲ್ಲಲು ಮೈತ್ರಿ ಅಭ್ಯರ್ಥಿಗಳಿಗೆ ಶಕ್ತಿಯಾಗಲಿದ್ದಾರೆ.

ಇನ್ನು ಮೈಸೂರಿನಲ್ಲಿ ನಡೆಯಲಿರೋ ಮೈತ್ರಿ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಮೈಸೂರಿನಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಪ್ರಧಾನಿ ಮೋದಿ ಭೇಟಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಭದ್ರತಾ ಪರಿಶೀಲನೆ ನಡೆಸಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕಮಾಂಡೋ ಪೊಲೀಸರು, ನಗರ ಪೊಲೀಸರು ಬಿಗಿಭದ್ರತೆಯನ್ನ ಕೈಗೊಂಡಿದ್ದಾರೆ..

Advertisment

ಇಂದು ಸಂಜೆ ಮಂಗಳೂರಿನಲ್ಲಿ ಮೋದಿ ರೋಡ್‌ ಶೋ

ಮೈಸೂರಿನಲ್ಲಿ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಲಿರೋ ಮೋದಿ, ಬಳಿಕ ಕಡಲತಡಿಗೆ ವಿಸಿಟ್ ಕೊಡಲಿದ್ದಾರೆ. ಮಂಗಳೂರಿನಲ್ಲಿ ಸಂಜೆ 8 ರಿಂದ 9 ಗಂಟೆವರೆಗೆ ನಗರದ ಲೇಡಿಹಿಲ್‌ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ಸುಮಾರು 2 ಕಿಲೋ ಮೀಟರ್‌ ರೋಡ್ ಶೋ‌ ನಡೆಸಲಿದ್ದಾರೆ. ಈ ಮೂಲಕ ಕರಾವಳಿ ಭಾಗದ ಅಭ್ಯರ್ಥಿಗಳ ಪರ ಮೋದಿ ಮತಯಾಚನೆ ಮಾಡಲಿದ್ದಾರೆ. ರೋಡ್​ಶೋ ಬಳಿಕ ಮಂಗಳೂರು ಏರ್​​ಪೋರ್ಟ್​ನಿಂದ ಕೇರಳ ಕಡೆಗೆ ಪಯಣ ಬೆಳೆಸಲಿದ್ದಾರೆ.

ಇದನ್ನೂ ಓದಿ:ಅತಿಯಾಗಿ ಫ್ರೂಟ್ಸ್​ ಜ್ಯೂಸ್ ಕುಡಿಯೋರೆ ಎಚ್ಚರ! ನೀವು ಓದಲೇಬೇಕಾದ ಪ್ರಮುಖ ಸ್ಟೋರಿ ಇದು!

publive-image

ಇಂದು ಮೋದಿಯಿಂದ ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ

ಇನ್ನು ಇಂದು ಬಿಜೆಪಿ ಲೋಕಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಬೆಳಿಗ್ಗೆ 8.30ಕ್ಕೆ ಪ್ರಧಾನಿ ಮೋದಿ ಬಿಜೆಪಿಯ ಸಂಕಲ್ಪ ಪತ್ರ ಬಿಡುಗಡೆ ಮಾಡಲಿದ್ದಾರೆ. ಮೊದಲ ಹಂತದ ಮತದಾನಕ್ಕೆ 5 ದಿನ ಬಾಕಿ ಇರುವಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ, ಮೋದಿ ಗ್ಯಾರಂಟಿಗೆ ಒತ್ತು ನೀಡಿ ಪ್ರಣಾಳಿಕೆ ರಿಲೀಸ್ ಆಗಲಿದೆ.

Advertisment

ಹಳೆ ಮೈಸೂರು ಭಾಗದಲ್ಲಿ ಸಿದ್ದು ಶಕ್ತಿಯನ್ನ ಅಡಗಿಸಲು ಮೋದಿ ಅಲೆಯ ಆಗಮನವಾಗ್ತಿದೆ. ಈ ಮೂಲಕ ಲೋಕ ಅಖಾಡದಲ್ಲಿರೋ ದೋಸ್ತಿ ಅಭ್ಯರ್ಥಿಗಳಿಗೆ ಆನೆಬಲ ಬರೋದಂತೂ ಪಕ್ಕಾ. ಇದೇ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕೂಡ ಕೇಸರಿ ಸೈನ್ಯಕ್ಕೆ ಉತ್ಸಾಹ ಶಕ್ತಿ ತುಂಬಲಿದ್ರೆ ಜನರಲ್ಲಿ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment