newsfirstkannada.com

ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ದಾಳಿ; 60,000 ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಆಹಾರ ಇಲಾಖೆ ನಿರೀಕ್ಷಕ

Share :

Published January 17, 2024 at 8:43am

    ಪಡಿತರ ಅಂಗಡಿ ಪರವಾನಗಿ ಮುಂದುವರಿಕೆಗೆ ಲಂಚದ ಬೇಡಿಕೆ

    ಲಂಚ ಪಡೆಯುವ ವೇಳೆ ದಾಳಿ ಮಾಡಿದ ಅಧಿಕಾರಿಗಳು

    ಆಹಾರ ವಿಭಾಗದ ನಿರೀಕ್ಷಕ ಮತ್ತು ಸಿಬ್ಬಂದಿ ಇಬ್ಬರು ಅರೆಸ್ಟ್​

ಬಾಗಲಕೋಟೆ: ಆಹಾರ ಇಲಾಖೆ ನಿರೀಕ್ಷಕ ಮತ್ತು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ ಬೆಳಕಿಗೆ ಬಂದಿದೆ. 60 ಸಾವಿರ ಲಂಚ ಸ್ವೀಕರಿಸುವಾಗ ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಬಾಗಲಕೋಟೆ ತಹಶೀಲ್ದಾರ್ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತರು ಆಹಾರ ವಿಭಾಗದ ನಿರೀಕ್ಷಕ ಈರಯ್ಯ ಕೋಟಿ, ಸಿಬ್ಬಂದಿ ಮಲ್ಲಿಕಾರ್ಜುನ ಹಾವರಗಿ ಅವರನ್ನು ಹಿಡಿದಿದ್ದಾರೆ. ಅಮಾನತುಗೊಂಡ ಪಡಿತರ ಅಂಗಡಿ ಪರವಾನಗಿ ಮುಂದುವರಿಕೆಗೆ ಲಂಚ ಪಡೆಯುವ ವೇಳೆ ದಾಳಿ ಮಾಡಿದ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

ಸುರೇಂದ್ರ ಗಡಗಡೆ ಎಂಬುವರು ಲೋಕಾಯುಕ್ತರಿಗೆ ನೀಡಿದ ದೂರಿನ ಅನ್ವಯ ಡಿವೈಎಸ್ಪಿ ಪುಷ್ಪಲತಾ ಎನ್. ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಆಹಾರ ಇಲಾಖೆ ನಿರೀಕ್ಷಕ ಮತ್ತು ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ದಾಳಿ; 60,000 ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಆಹಾರ ಇಲಾಖೆ ನಿರೀಕ್ಷಕ

https://newsfirstlive.com/wp-content/uploads/2024/01/bagalkote-2.jpg

Load More