newsfirstkannada.com

ಸರ್ಕಾರಿ ಅಧಿಕಾರಿ ಮೇಲಲ್ಲ, ಲಂಚ ಕೊಡ್ತಿದ್ದ ವ್ಯಕ್ತಿ ಮೇಲೆ ಲೋಕಾಯುಕ್ತ ರೇಡ್.. ಇದೊಂದು ವಿಶೇಷ ಕೇಸ್..!

Share :

Published January 12, 2024 at 7:25am

    ರಾಜ್ಯ ಲೋಕಾಯುಕ್ತ ಇಲಾಖೆಯಲ್ಲಿಯೇ ಐತಿಹಾಸಿಕ ದಾಳಿ

    ಕಳೆದ 15 ವರ್ಷಗಳಲ್ಲಿ ಮೊದಲ ವಿಶೇಷ ಲೊಕಾಯುಕ್ತ ಕೇಸ್​

    ಸರ್ಕಾರಿ ಅಧಿಕಾರಿಯಲ್ಲ, ಲಂಚ ನೀಡುತ್ತಿದ್ದ ವ್ಯಕ್ತಿ ಮೇಲೆ ರೇಡ್

ಹಾವೇರಿ: ಟೆಂಡರ್ ಮಾಡಿಸಿಕೊಡಿ ಎಂದು ಸರ್ಕಾರಿ ಅಧಿಕಾರಿಯೊಬ್ಬರಿಗೆ 99 ಸಾವಿರ ರೂಪಾಯಿ ಲಂಚ ನೀಡುತ್ತಿದ್ದ ವ್ಯಕ್ತಿ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.

ಹಾವೇರಿ ತಾಲೂಕು ಪಂಚಾಯತ್ ಇಓ ಭರತ್ ಹೆಗಡೆ ಎಂಬುವವರಿಗೆ ಶರಣಪ್ಪ ಶೆಟ್ಟರ್ ಎಂಬುವ ವ್ಯಕ್ತಿ ಟೆಂಡರ್ ನನಗೆ ಮಾಡಿಸಿಕೊಡಿ ಎಂದು ಲಂಚದ ಆಮಿಷ ಒಡ್ಡಿದ್ದ. ಈ ಹಿನ್ನೆಲೆಯಲ್ಲಿ ಇಓ ಭರತ್ ಅವರು ಲೋಕಾಯುಕ್ತರ ಕಚೇರಿಗೆ ತೆರಳಿ ವ್ಯಕ್ತಿ ವಿರುದ್ಧ ದೂರು ನೀಡಿದ್ದರು. ಆಮಿಷದಂತೆ 99 ಸಾವಿರ ರೂಪಾಯಿ ಲಂಚ ನೀಡಲು ಇಓ ಕಚೇರಿಗೆ ಬಂದಿದ್ದ ವ್ಯಕ್ತಿ ಮೇಲೆ ಯೋಜನೆಯಂತೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಇದು ರಾಜ್ಯದಲ್ಲೇ ಮಾದರಿಯಾದ ವ್ಯಕ್ತಿ ಮೇಲಿನ ದಾಳಿಯಾಗಿದೆ. ಲಂಚ ಪಡೆಯುವುದು ಅಷ್ಟೇಯಲ್ಲ, ಕೊಡುವುದು ಕೂಡ ದೊಡ್ಡ ಅಪರಾಧವೆಂದು ಇಓ ಭರತ್ ಅವರು ತೋರಿಸಿಕೊಟ್ಟಿದ್ದು ಕಳೆದ 15 ವರ್ಷಗಳಲ್ಲಿ ವಿಶೇಷ ಲೊಕಾಯುಕ್ತ ಪ್ರಕರಣವಾಗಿದೆ. ಈ ದಾಳಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಅಧಿಕಾರಿ ಮೇಲಲ್ಲ, ಲಂಚ ಕೊಡ್ತಿದ್ದ ವ್ಯಕ್ತಿ ಮೇಲೆ ಲೋಕಾಯುಕ್ತ ರೇಡ್.. ಇದೊಂದು ವಿಶೇಷ ಕೇಸ್..!

https://newsfirstlive.com/wp-content/uploads/2024/01/HVR_LOKAYUKTA_RAID.jpg

Load More